ಗುಡುಗು-ಸಿಡಿಲ ಆರ್ಭಟ: 30ಕ್ಕೂ ಹೆಚ್ಚು ಮಂದಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಥಾಣೆ, ಅ.22- ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಸಹಪುರದ ಗ್ರಾಮವೊಂದರಲ್ಲಿ ನಿನ್ನೆ ರಾತ್ರಿ ಭಾರೀ ಮಳೆಯೊಂದಿಗೆ ಮಿಂಚು-ಗುಡುಗು-ಸಿಡಿಲಿನ ಆರ್ಭಟದಿಂದ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.  ಈ ದುರ್ಘಟನೆಯಲ್ಲಿ ಮನೆಯೊಂದು ಸಂಪೂರ್ಣ ಧ್ವಂಸಗೊಂಡಿದ್ದು, ಅಕ್ಕಪಕ್ಕದ ಮನೆಗಳಿಗೆ ತೀವ್ರ ಹಾನಿಯಾಗಿದೆ.

ಸಹಪುರ ತಾಲ್ಲೂಕಿನ ಉಂಬರ್‍ಮಲಿ ಗ್ರಾಮದ ಪಾಲಸ್ಪದ ತಾಂಡದ ವಸತಿ ಪ್ರದೇಶದ ಮೇಲೆ ನಿನ್ನೆ ರಾತ್ರಿ 7 ಗಂಟೆಯಲ್ಲಿ ಭಾರೀ ಸಿಡಿಲು ಅಪ್ಪಳಿಸಿತು. ಈ ಘಟನೆಯಲ್ಲಿ ವೃದ್ದರು, ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

ಗಾಯಾಳುಗಳನ್ನು ಸಹಪುರ ಗ್ರಾಮೀಣ ಆಸ್ಪತ್ರೆಗೆ ದಾಖಲಿಸಲಾಗಿದೆ ನಿನ್ನೆ ರಾತ್ರಿ ಶಾಸಕ ದೌತಲ್ ದರೋಢಾ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಗಳುಗಳ ಆರೋಗ್ಯ ವಿಚಾರಿಸಿದರು.

Facebook Comments