ಹೆಸರಾಂತ ಮದ್ಯ ಕಂಪೆನಿ ಮೇಲೆ ಐಟಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.9- ಹೆಸರಾಂತ ಮದ್ಯ ಕಂಪೆನಿಯೊಂದರ ಕಚೇರಿಗಳು, ಮಾಲೀಕರ ನಿವಾಸಗಳು ಸೇರಿದಂತೆ 15 ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರ ರಸ್ತೆಯಲ್ಲಿರುವ ಮನೆ, ಕಚೇರಿ, ನಗರದ ಹೊರ ವಲಯದಲ್ಲಿರುವ ಪ್ಯಾಕ್ಟರಿ ಸೇರಿದಂತೆ 15 ಕಡೆ ಐಟಿ ದಾಳಿ ನಡೆದಿದೆ.

ಮದ್ಯದ ಕಂಪೆನಿ ಮಾಲೀಕರು ಹಾಗೂ ಅವರ ಸೋದರರಿಗೆ ಸೇರಿದ ಕಚೇರಿಗಳು, ನಿವಾಸಗಳು, ಪ್ಯಾಕ್ಟರಿಗಳ ಮೇಲೂ ಕೂಡ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

Facebook Comments