92ನೇ ವರ್ಷಕ್ಕೆ ಕಾಲಿಟ್ಟಿ ಬಿಜೆಪಿ ಭೀಷ್ಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.8- ಭಾರತೀಯ ಜನತಾ ಪಕ್ಷದ ರಾಜಕೀಯ ಭೀಷ್ಮ ಎಂದೇ ಹೆಸರಾಗಿರುವ ಲಾಲ್‍ಕೃಷ್ಣ ಅಡ್ವಾಣಿಯವರು 92ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಲಾಲ್‍ಕೃಷ್ಣ ಅಡ್ವಾಣಿ ಯವರು ರಾಮ ಜನ್ಮಭೂಮಿ ಹೋರಾಟದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿ ಹಲವು ರಥಯಾತ್ರೆಗಳ ಮೂಲಕ ವಿಶೇಷ ಸಂಚಲನ ಮೂಡಿಸಿದವರು.

ರಾಜನೀತಿಯಲ್ಲಿ ಮೌಲ್ಯಾಧಾರಿತ ಮಾರ್ಗದಲ್ಲಿ ನಡೆದು ಹಲವಾರು ಬದಲಾವಣೆಗಳನ್ನು ಸಾಕಾರಗೊಳಿಸಿ ಸಾರ್ಥಕ ರಾಜಕೀಯ ಜೀವನದಲ್ಲಿ ಪರಿಪಕ್ವತೆ ಕಂಡವರು. ನಿಶ್ವಾರ್ಥ ಜೀವನ ನಡೆಸಿ ಅಜಾತಶತ್ರುಗಳಾಗಿದ್ದಾರೆ. ರಾಜಕೀಯ ಜೀವನದಲ್ಲಿ ಅತಿ ಎತ್ತರಕ್ಕೆ ಬೆಳೆದಿರುವ ಅಡ್ವಾಣಿಯವರಿಗೆ ಬೇರಾರೂ ಸಾಟಿಯಿಲ್ಲ. ದೇಶ ಕಂಡ ಅಪೂರ್ವ ರಾಜಕೀಯ ದಿಗ್ಗಜನಿಗೆ ಅನೇಕ ಗಣ್ಯರು ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.

ಇಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು, ಅಡ್ವಾಣಿಯವರ ನಿವಾಸಕ್ಕೆ ಭೇಟಿ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅಲ್ಲದೇ ಬಿಜೆಪಿ ಹಿರಿಯ ನಾಯಕರಿಗೆ ಶುಭ ಹಾರೈಸಿ ಆರೋಗ್ಯದ ಯೋಗ ಕ್ಷೇಮದ ಬಗ್ಗೆ ವಿಚಾರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಗಣ್ಯರು ಅಡ್ವಾಣಿಯವರಿಗೆ ಅಭಿನಂದಿಸಿದ್ದಾರೆ.

ಭಾರತಕ್ಕೆ ಅಡ್ವಾಣಿಯವರ ಕೊಡುಗೆ ಅಪಾರ. ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾದಾಗ ನಿಂತು ಹೋರಾಟ ಮಾಡುವ ಛಲಗಾರ. ಯಾವತ್ತೂ ತಮ್ಮ ಸಿದ್ದಾಂತಕ್ಕೆ ವಿರುದ್ಧವಾಗಿ ನಡೆದುಕೊಂಡಿಲ್ಲ. ಇವರು ಈ ದೇಶದ ಜ್ಞಾನಿ ಹಾಗೂ ಸಮಗ್ರ ವ್ಯಕ್ತಿತ್ವ ಹೊಂದಿರುವ ನಾಯಕ. ಭಗವಂತ ಅಡ್ವಾಣಿಯವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯಸ್ಸು ನೀಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​​ ಮಾಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ