ಅಡಮಾನ ಸಾಲ ಮರು ಪಾವತಿಗೆ 2 ವರ್ಷ ಕಾಲಾವಕಾಶ : ಆರ್‌ಬಿಐ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.1- ಅಡಮಾನ ಸಾಲದ ಮರು ಪಾವತಿಯನ್ನು ಸುಮಾರು ಎರಡು ವರ್ಷದವರೆಗೂ ಮುಂದೂಡಲು ಸಿದ್ಧವಿರುವುದಾಗಿ ಕೇಂದ್ರ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್ ಇಂದು ಸುಪ್ರೀಂಕೋರ್ಟ್‍ಗೆ ತಿಳಿಸಿದೆ.

ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರ ನೇತೃತ್ವದ ನ್ಯಾಯಪೀಠದ ಮುಂದೆ ಕೇಂದ್ರ ಹಾಗೂ ಆರ್‍ಬಿಐ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ವಿಷಯ ತಿಳಿಸಿದ್ದಾರೆ.

ಕೈಗಾರಿಕೆಗಳು , ಸೇವಾ ಕ್ಷೇತ್ರಗಳು , ರೈತರು ಸೇರಿದಂತೆ ಕೋವಿಡ್ ಸಂಕಷ್ಟದಲ್ಲಿ ಸಮಸ್ಯೆಗೆ ಎದುರಾಗಿರುವವರಿಗೆ ನೆರವು ನೀಡಲು ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದರಿಂದಾಗಿ ಆರ್ಥಿಕತೆಗೂ ತೊಂದರೆಯಾಗಿದೆ. ಶೇ.23ರಷ್ಟು ಜಿಡಿಪಿ ಕುಸಿದಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಲಾಕ್‍ಡೌನ್ ಮಧ್ಯೆ ಕೇಂದ್ರೀಯ ಬ್ಯಾಂಕ್‍ಗಳು ಮುಂದೂಡಲ್ಪಟ್ಟಿದ್ದ ಸಾಲ ಪಾವತಿ ಕಂತುಗಳ ಮೇಲಿನ ಬಡ್ಡಿ ಕುರಿತಂತೆ ಪರಿಶೀಲನೆ ನಡೆಸಲಾಗುತ್ತಿದೆ.  ರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಾಳೆಯೊಳಗೆ ಇದರ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಸಮ್ಮತಿಸಿದ ನ್ಯಾಯಪೀಠ ನಾಳೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

Facebook Comments