ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ : ನಾಮಪತ್ರ ವಾಪಸಿಗೆ ನಾಳೆ ಕೊನೆ ದಿನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 19- ರಾಜ್ಯದ ಮಿನಿ ಮಹಾಸಮರ ಎಂದೇ ಪರಿಗಣಿತವಾಗಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಸಲ್ಲಿಕೆಯಾಗಿರುವ ನಾಮಪತ್ರಗಳನ್ನು ವಾಪಸ್ ಪಡೆಯಲು ನಾಳೆ ಕಡೆದಿನ.

ಕಳೆದ ಮೇ 9ರಿಂದ ಮೇ 16ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 5945 ನಾಮಪತ್ರಗಳು ಸಲ್ಲಿಕೆಯಾಗಿದ್ದವು.

ಅವಧಿ ಮುಗಿದಿರುವ 8 ನಗರಸಭೆ, 32 ಪುರಸಭೆ, 21 ಪಟ್ಟಣ ಪಂಚಾಯ್ತಿ ಸೇರಿ 61 ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ 1326 ಕ್ಷೇತ್ರಗಳಿಗೆ 5945 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಅದರಲ್ಲಿ ಕಾಂಗ್ರೆಸ್ನ 1500, ಬಿಜೆಪಿಯ 1398, ಜೆಡಿಎಸ್ನ 941, ಪಕ್ಷೇತರರು 1917 ಮಂದಿ ಅಭ್ಯರ್ಥಿಗಳಿದ್ದಾರೆ.

ಇನ್ನು ವಿವಿಧ ಕಾರಣಗಳಿಗೆ ತೆರವಾಗಿರುವ ಕ್ಷೇತ್ರಗಳಿಗೆ ನಡೆಯು ತ್ತಿರುವ ಉಪ ಚುನಾವಣೆಗಳ ಪೈಕಿ ಬಿಬಿಎಂಪಿಯ ಎರಡು ವಾರ್ಡ್ಗಳಿಗೆ 26 ಮಂದಿ ಮತ್ತು ಬೆಂಗಳೂರು ನಗರಸಭೆಯ ಹೆಬ್ಬಗೋಡಿ ವಾರ್ಡ್ಗೆ 4, ತುಮಕೂರಿನ ವಾರ್ಡ್ 22ಕ್ಕೆ 15, ಬೆಳಗಾವಿಯ ಸದಲಗ ಪುರಸಭೆ ವಾರ್ಡ್ಗೆ 7 ನಾಮಪತ್ರಗಳು, ಮುಗುಳಖೋಡ ಪುರಸಭೆ ವಾರ್ಡ್ಗೆ 5 ಸೇರಿದಂತೆ ಒಟ್ಟು 57 ನಾಮಪತ್ರಗಳು ಸಲ್ಲಿಕೆಯಾಗಿವೆ.

191 ಗ್ರಾಮ ಪಂಚಾಯ್ತಿಯ 201 ಸ್ಥಾನಗಳಿಗೆ ಹಾಗೂ 8 ತಾಲೂಕು ಪಂಚಾಯ್ತಿಗಳ 10 ಕ್ಷೇತ್ರಗಳಿಗೆ, 67 ನಗರ ಸ್ಥಳೀಯ ಸಂಸ್ಥೆಗಳ 1332 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin