ಮಿನಿ ಲಾಕ್‍ಡೌನ್ ಎಫೆಕ್ಟ್: ದುರ್ಬಲ ವರ್ಗ ಮತ್ತೆ ಸಂಕಷ್ಟಕ್ಕೆ..

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.23- ಕೊರೊನಾ ಎರಡನೇ ಅಲೆ ಶರವೇಗದಲ್ಲಿ ರಾಜ್ಯವನ್ನು ಆವರಿಸುತ್ತಿದ್ದು, ಇದರ ಫಲವಾಗಿ ಕರ್ನಾಟಕದಲ್ಲಿ ಮಿನಿ ಲಾಕ್‍ಡೌನ್ ಹೇರಲಾಗಿದ್ದು, ಇದರಿಂದ ದಿನದ ಆದಾಯವನ್ನೇ ನಂಬಿಕೊಂಡಿರುವ ದುರ್ಬಲ ವರ್ಗದ ಮಂದಿ ಮತ್ತೆ ಅತಂತ್ರಕ್ಕೊಳಗಾಗಿದ್ದಾರೆ.
ರಾಜ್ಯವ್ಯಾಪಿ ಕೋವಿಡ್ 19ರ ಎರಡನೇ ಅಲೆ ರಭಸವಾಗಿ ಹರಡುತ್ತಿದೆ.

ಇದರ ಅಬ್ಬರಕ್ಕೆ ಅಂಕುಶ ಹಾಕಲು ರಾಜ್ಯ ಸರ್ಕಾರ ನೈಟ್ ಕಫ್ರ್ಯೂ, ವೀಕೆಂಡ್ ಕಫ್ರ್ಯೂ ಸೇರಿ ಕಠಿಣ ಕ್ರಮಗಳನ್ನೊಳಗೊಂಡ ಮಿನಿ ಲಾಕ್‍ಡೌನ್ ಹೇರಿದೆ. ಲಾಕ್‍ಡೌನ್ ಹೇರಿಕೆಯಿಂದ ಇದೀಗ ಮತ್ತೆ ಆರ್ಥಿಕ ಚಟುವಟಿಕೆಗಳಿಗೆ ಹಿನ್ನಡೆಯಾ ಗುತ್ತಿದೆ. ಮತ್ತೆ ವಿವಿಧ ಕಾರ್ಮಿಕ ವರ್ಗದವರವನ್ನು ಸಂಕಷ್ಟಕ್ಕೆ ದೂಡುತ್ತಿದೆ.

ಕಳೆದ ಬಾರಿಯ ಲಾಕ್‍ಡೌನ್ ನಿಂದ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಸೇರಿದಂತೆ ವಿವಿಧ ದುರ್ಬಲ ವರ್ಗದವರ ಭವಿಷ್ಯ ಡೋಲಾಯಮಾನವಾಗಿತ್ತು. ಇದನ್ನರಿತ ಸರ್ಕಾರ ದಿನದ ದುಡಿಮೆ ಕಳೆದುಕೊಂಡ ದುರ್ಬಲ ವರ್ಗದವರಿಗೆ ವಿಶೇಷ ನೆರವಿನ ಪ್ಯಾಕೇಜ್ ಘೋಷಿಸಿತ್ತು. ಕಾರ್ಮಿಕರು, ಆಟೋ, ಟ್ಯಾಕ್ಸಿ ಚಾಲಕರು, ಕೂಲಿ ಕಾರ್ಮಿಕರು ಸೇರಿದಂತೆ ವಿವಿಧ ವರ್ಗದವರಿಗೆ ಬರೋಬ್ಬರಿ 2,272 ಕೋಟಿ ರೂ. ಪರಿಹಾರ ಮೊತ್ತವನ್ನು ಘೋಷಿಸಿತ್ತು. ಆದರೆ, ವಾಸ್ತವದಲ್ಲಿ ಈ ಪರಿಹಾರ ಸೀಮಿತ ಫಲಾನುಭವಿಗಳ ಕೈಗೆ ಮಾತ್ರ ಸೇರಿದೆ.

ದೊಡ್ಡ ಮಟ್ಟದ ಪರಿಹಾರ ಘೋಷಣೆ ಮಾಡಿದರೂ, ಅದು ಕೆಲವೇ ಕೆಲ ಫಲಾನುಭವಿಗಳ ಕೈ ಸೇರಿದೆ. ಪರಿಹಾರ ಘೋಷಣೆ ಮಾಡಿ ವರ್ಷ ಆಗುತ್ತಿದ್ದರೂ, ಪೂರ್ಣ ಪ್ರಮಾಣದಲ್ಲಿ ಪರಿಹಾರ ಮಾತ್ರ ಇನ್ನೂ ದುರ್ಬಲ ವರ್ಗದವರ ಕೈ ಸೇರಿಲ್ಲ.

ಹೂ, ತರಕಾರಿ, ಮೆಕ್ಕೆ ಜೋಳ ಬೆಳೆಗಾರರು, ನೇಕಾರರು, ಕ್ಷೌರಿಕರು, ಮಡಿವಾಳ, ಆಟೋ, ಟ್ಯಾಕ್ಸಿ ಚಾಲಕರಿಗೆ, ಕಟ್ಟಡ ಕಾರ್ಮಿಕರು ಸೇರಿದಂತೆ ಆರ್ಥಿಕವಾಗಿ ದುರ್ಬಲರಿಗೆ ಪರಿಹಾರ ಘೋಷಿಸಲಾಗಿತ್ತು. ಆದರೆ, ಹೇಳಿದಷ್ಟು ಫಲಾನುಭವಿಗಳಿಗೆ ಪರಿಹಾರವೇ ಪಾವತಿಯಾಗಿಲ್ಲ.

ಪರಿಹಾರ ಪಾವತಿ ಅಂಕಿ – ಅಂಶ ನೋಡಿದರೆ, ವಿಶೇಷ ಪ್ಯಾಕೇಜ್ ಘೋಷಣೆಗೆ ಮಾತ್ರ ಸೀಮಿತವಾಗಿದೆ ಅನ್ನೋ ಪ್ರಶ್ನೆ ಮೂಡಿದೆ.ಆಟೋ, ಕ್ಯಾಬ್ ಚಾಲಕರಿಗೆ ಸಿಕ್ಕಿದ್ದೆಷ್ಟು? ಉದ್ದೇಶಿತ ಆಟೋ, ಟ್ಯಾಕ್ಸಿ ಚಾಲಕರ ಸಂಖ್ಯೆ- 7.75 ಲಕ್ಷಪರಿಹಾರ ಮೊತ್ತ- 5,000 ರೂ.ಪರಿಹಾರ ಪಡೆದ ಫಲಾನುಭವಿಗಳು- 2,15,669 ಒಟ್ಟು ಪಾವತಿಸಿದ ಮೊತ್ತ- 107.83 ಕೋಟಿ ರೂ.ಬಾಕಿ ಉಳಿದಿರುವುದು- 1.31 ಕೋಟಿ ರೂ.

ಕ್ಷೌರಿಕ, ಅಗಸರಿಗೆ ಘೋಷಿಸಿದ ಪರಿಹಾರ 5,000 ರೂ., ಸ್ವೀಕೃತವಾದ ಅರ್ಜಿ 1,41,602, ಪರಿಹಾರ ಪಡೆದ ಫಲಾನುಭವಿಗಳು 1,19,642, ಹಾಗೂ ಪಾವತಿಸಿರುವ ಮೊತ್ತ- 59.82 ಕೋಟಿ ರೂ.ಗಳು ಮಾತ್ರ.

ಕಟ್ಟಡ ಕಾರ್ಮಿಕರಿಗೆ 5,000 ರೂ. ಪರಿಹಾರ ಘೋಷಣೆ ಮಾಡಲಾಗಿತ್ತು. ಪರಿಹಾರ ಪಡೆದ ಫಲಾನುಭವಿಗಳು 16,48,431 ಮಂದಿಯಾದರೆ ಪಾವತಿಸಿದ ಮೊತ್ತ- 824.21 ಕೋಟಿ ರೂ. ಇನ್ನು 1,02,034 ಬಾಕಿ ಉಳಿದ ಅರ್ಜಿಗಳಾಗಿವೆ. ಕೈಮಗ್ಗ ನೇಕಾರರಿಗೆ 2000 ರೂ. ಪರಿಹಾರ ಘೋಷಣೆ, ಒಟ್ಟು ರುವ ನೇಕಾರರು 54,000 ಮಂದಿ, ಅರ್ಜಿ ನೋಂದಾವಣೆ 50,511 ಈ ಪೈಕಿ ಪರಿಹಾರ ಪಡೆದ ಫಲಾನುಭವಿಗಳು 46,259, ಪಾವತಿಸಿದ ಮೊತ್ತ 9.25 ಕೋಟಿ ರೂ.ಗಳು.

ವಿದ್ಯುತ್ ಮಗ್ಗ ಕಾರ್ಮಿಕರಿಗೆ 2000 ರೂ. ಪರಿಹಾರ ಘೋಷಿಸಿದ್ದು, ಒಟ್ಟು 1.25 ಲಕ್ಷ ಕಾರ್ಮಿಕರಿದ್ದಾರೆ. ಅರ್ಜಿ ನೋಂದಾವಣೆ 57,449 ಇದ್ದರೆ, 48,004 ಆಹಾರ ಕಿಟ್ ಫಲಾನುಭವಿಗಳು ಪರಿಹಾರ ಪಡೆದಿದ್ದಾರೆ. ಪಾವತಿಸಿದ ಮೊತ್ತ- 9.60 ಕೋಟಿ ರೂ.ಗಳಾಗಿವೆ.

ಕಾರ್ಮಿಕರಿಗೆ ನೀಡಿದ ಆಹಾರ ಕಿಟ್: ಸಿದ್ಧಪಡಿಸಿದ ಆಹಾರ ಕಿಟ್- 89,86,533, ಸಿದ್ಧಪಡಿಸಿದ ಆಹಾರದ ಪ್ಯಾಕೆಟ್- 6,08,000, ಸಿದ್ಧಪಡಿಸಿದ ಆಹಾರ ಕಿಟ್ ಖರ್ಚು 25.73 ಕೋಟಿ ರೂ. ಆಹಾರ ಸಾಮಗ್ರಿಗಳ ಕಿಟ್ ಖರ್ಚು 46.12 ಕೋಟಿ ರೂ.

ಹಣ್ಣು, ತರಕಾರಿ, ಹೂ ಬೆಳೆಗಾರರಿಗೆ ಸಿಕ್ಕ ಪರಿಹಾರ: 15,000 ರೂ. ಪರಿಹಾರ ಘೋಷಣೆ, 1,39,295 ಫಲಾನು ಭವಿಗಳು, ಪಾವತಿಸಿದ ಮೊತ್ತ 110.12 ಕೋಟಿ ರೂ.

ಮೆಕ್ಕೆ ಜೋಳ ಬೆಳೆಗಾರರಿಗೆ 5000 ರೂ. ಪರಿಹಾರ ಘೋಷಿಸಿದ್ದು, ಉದ್ದೇಶಿತ ರೈತರ ಸಂಖ್ಯೆ 10 ಲಕ್ಷದಷ್ಟಿದ್ದು, ಒಟ್ಟು ಪರಿಹಾರದ ಮೊತ್ತ 500 ಕೋಟಿ ರೂ.ಗಳು, 8,00,099 ಪರಿಹಾರ ಪಡೆದಿರುವ ಫಲಾನುಭವಿಗಳು, ಪಾವತಿಸಿದ ಮೊತ್ತ 388.71 ಕೋಟಿ ರೂ.ಗಳು.

Facebook Comments