BIG BREAKING : ಏ.30ರ ವರೆಗೂ ಲಾಕ್‌ಡೌನ್ ವಿಸ್ತರಣೆ, ಸಿಎಂ ಅಧಿಕೃತ ಘೋಷಣೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.11 :  ರಾಜ್ಯದಲ್ಲಿ ಮುಂದಿನ 15 ದಿನಗಳ ಕಾಲ ಲಾಕ್​ಡೌನ್​ ಅನಿವಾರ್ಯವಾಗಿದ್ದು, ಅದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ವಿಡಿಯೊ ಕಾನ್ಪರೆನ್ಸ್ ಬಳಿಕ ಅಧಿಕೃತವಾಗಿ ಪ್ರಕಟಿಸಿದ ಸಿಎಂ ಯಡಿಯೂರಪ್ಪ ,ರಾಜ್ಯದಲ್ಲಿ ಏಪ್ರಿಲ್​ 30ರವರೆಗೆ ಲಾಕ್​ಡೌನ್​ ಅನಿವಾರ್ಯವಾಗಿದ್ದು, ಈ ಸಲದ ಲಾಕ್​ಡೌನ್​ ವಿಭಿನ್ನವಾಗಿರಲಿದೆ ಎಂಬ ಮಾಹಿತಿ ನೀಡಿದರು.

ಕೊರೊನಾ ಬಗ್ಗೆ ಕಳವಳ ವ್ಯಕ್ತಪಡಿಸಿದರು. 2.44 ಲಕ್ಷ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್, ಮಾಸ್ಕ್ ಗಳನ್ನ ಪೊರೈಸಲಾಗುವುದು, ಏಪ್ರಿಲ್ 30ರ ಒಳಗೆ 300 ಲ್ಯಾಬ್ ಹೆಚ್ಚಳ ಮಾಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ 214 ಕೊರೊನಾ ಪ್ರಕರಣಗಳು ಕಂಡು ಬಂದಿರುವ ಕಾರಣ ಇದೀಗ 11ನೇ ಸ್ಥಾನದಲ್ಲಿದ್ದೇವೆ ಎಂದಿದ್ದಾರೆ. ಮುಂದಿನ ಕೆಲವು ವಾರ ತುಂಬಾ ಕಠಿಣವಾಗಿರುತ್ತವೆ ಎಂದರು.

ಮುಂದಿನ 15 ದಿನಗಳ ಲಾಕ್​ಡೌನ್​ ವಿಭಿನ್ನವಾಗಿರಲಿದ್ದು, ಅದನ್ನು ಪಾಲನೆ ಮಾಡುವುದರಲ್ಲಿ ಯಾವುದೇ ರೀತಿಯ ರಾಜಿ ಇಲ್ಲ ಎಂದರು. ಕೃಷಿ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ವಿನಾಯತಿ ನೀಡಿರುವ ಬಗ್ಗೆ ನಮೋ ಹೇಳಿದ್ದು, ಮುಂದಿನ ಎರಡು ದಿನಗಳಲ್ಲಿ ಅದರ ಮಾಹಿತಿ ನಮಗೆ ಸಿಗಲಿದೆ. ಸರ್ಕಾರಿ ಕಚೇರಿ ಈಗಾಗಲೇ ಮುಚ್ಚಿದ್ದು, ಭಾಗಶ: ಆರಂಭ ಮಾಡಲಾಗುವುದು ಎಂದರು.

ಲಾಕ್‍ಡೌನ್‍ನಿಂದ ಮೀನುಗಾರಿಕೆ, ಕೃಷಿ, ಕೈಗಾರಿಕಾ, ಕಾರ್ಮಿಕರಿಗೆ ಕೊಂಚ ರಿಲೀಫ್ ಸಿಕ್ಕಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಚಟುವಟಿಗೆ ನಡೆಸಬಹುದುದಾಗಿದೆ. ಉಳಿದವರು ಲಾಕ್‍ಡೌನ್ ಪಾಲಿಸದೇ ಇದ್ದರೆ ಸೀಲ್‍ಡೌನ್ ಜಾರಿಗೆ ಬರುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಗರವಾಸಿಗಳನ್ನು ಹಳ್ಳಿಗಳಿಗೆ ಕಳುಹಿಸಬಾರದು. ಮೀನುಗಾರಿಕೆಗೆ ವಿನಾಯ್ತಿ ನೀಡಿದ್ದಾರೆ. ಆರೋಗ್ಯ ಸೇತು ಮೊಬೈಲ್ ಆಪ್ ಜನಪ್ರಿಯಗೊಳಿಸಲು ಪ್ರಧಾನಿ ಸಲಹೆ ನೀಡಿದ್ದಾರೆ. ಆದರೆ ಲಾಕ್‍ಡೌನ್ ಸಡಿಲ ಮಾಡಬಾರದು. ಮುಂದಿನ 15 ದಿನ ಲಾಕ್‍ಡೌನ್ ಅನಿವಾರ್ಯವಾಗಿದೆ, ಏಪ್ರಿಲ್ 30ರ ತನಕ ಲಾಕ್‍ಡೌನ್ ಮಾರ್ಗಸೂಚಿ ಹೊರಡಿಸ್ತಾರೆ ಎಂದು ಸಿಎಂ ಹೇಳಿದರು.

ಕೃಷಿಕರು ಬೆಳೆದ ಯಾವುದೇ ಉತ್ಪನ್ನಗಳನ್ನು ಟೋಲ್‍ಗಳಲ್ಲಿ ತಡೆಯಬಾರದು. ಒಂದು ವೇಳೆ ತಡೆದರೆ, ಅಂತಹ ವರ ಮೇಲೆ ದಂಡ ವಿಧಿಸಲಾಗುವುದು. ದೇಶದ ನಾನಾ ಭಾಗಗಳಲ್ಲಿ ಏನೇ ಸ್ಥಿತಿ ಇರಬಹುದು ಆದರೆ ಕರ್ನಾಟಕದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ ಎಂದರು.

ರಾಜ್ಯದಲ್ಲಿ ರೆಡ್, ಗ್ರೀನ್, ಎಲ್ಲೋ ಅಂತ ಝೋನ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಆ ಬಗ್ಗೆ ಪ್ರಧಾನಿಗಳು ಗಮನಹರಿಸುತ್ತಾರೆ. ಅವರು ಮಾರ್ಗಸೂಚಿ ಕಳುಹಿಸುತ್ತಾರೆ. ಅದರಂತೆ ನಿಮಯ ಜಾರಿಗೆ ತರಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.

ಒಟ್ಟು 50 ವಿದೇಶಿ ತಬ್ಲಿಘಿಯರ ವಿರುದ್ಧ ಪ್ರಕರಣ ದಾಖಲಾಗಿದ್ದು, ಒಟ್ಟು 801 ತಬ್ಲಿಘಿರನ್ನು ಕ್ವಾರೆಂಟೈನ್ ಮಾಡಲಾಗಿದೆ. ಬೆಂಗಳೂರಿನಲ್ಲಿ 269, ಇತರ ಜಿಲ್ಲೆಗಳಲ್ಲಿ 472 ತಬ್ಲಿಘಿಗರ ಕ್ವಾರೆಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.

Facebook Comments

Sri Raghav

Admin