ಕೊರೋನಾ ನಿಯಂತ್ರಣಕ್ಕೆ ಲಾಕ್‍ಡೌನ್ ಮಾಡಿದರಷ್ಟೇ ಸಾಲದು : ಡಬ್ಲ್ಯುಎಚ್‍ಒ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಜಿನಿವಾ (ಸ್ವಿಟ್ಜರ್‍ಲೆಂಡ್), ಮಾ.26-ಭಾರತದಲ್ಲಿಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಶ್ವಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ), ಲಾಕ್‍ಡೌನ್‍ಮಾಡಿದರಷ್ಟೇ ಕೋವಿಡ್-19 ನಿರ್ಮೂಲನೆಯಾಗುವುದಿಲ್ಲ. ಈ ವೈರಸ್ ನಿಗ್ರಹಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಬಬೇಕೆಂದು ಗಂಭೀರಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದಡಬ್ಲ್ಯುಎಚ್‍ಒ ಮಹಾ ನಿರ್ದೇಶಕ ಟೆಡ್ರೋಸ್‍ ಅಧಾನೊಮ್‍ ಘೆಬ್ರಯೆಸುಸ್, ಕೋವಿಡ್ ವೈರಾಣು ವಿರುದ್ಧ ಹೋರಾಡಲು ಹಲವಾರು ದೇಶಗಳು ಲಾಕ್‍ಡೌನ್ ಅನುಷ್ಠಾನಗೊಳಿಸಿದೆ. ಆದರೆ ಲಾಕ್‍ಡೌನ್‍ನಿಂದ ಈ ಪಿಡುಗನ್ನು ಸಂಪೂರ್ಣ ನಿಗ್ರಹಿಸಲು ಸಾಧ್ಯವಿಲ್ಲ.

ದುಷ್ಪರಿಣಾಮವನ್ನು ಸ್ವಲ್ಪಕಾಲ ಮುಂದೂಡಬಹುದಷ್ಟೆಎಂದುಅವರು ತಿಳಿಸಿದ್ದಾರೆ.  ವಿದೇಶಗಳಿಂದ ಬರುವವರಿಂದಲೇ ಈ ಸೋಂಕು ಹೆಚ್ಚಾಗಿ ಹರಡುತ್ತಿದೆ. ಹೀಗಾಗಿ ಅವರೆಲ್ಲರನ್ನೂಕಡ್ಡಾಯವಾಗಿಕಟ್ಟುನಿಟ್ಟಿನತಪಾಸಣೆಗೆ ಒಳಪಡಿಸಬೇಕು. ಅವರನ್ನು ಹುಡುಕಿ ಪ್ರತ್ಯೇಕವಾಗಿಇಡಬೇಕು.

ಒಬ್ಬರಿಂದಒಬ್ಬರಿಗೆ ಸೋಂಕು ಹರಡದಂತೆಎಚ್ಚರಿಕೆ ವಹಿಸಬೇಕು. ಒಟ್ಟಾರೆಕೊರೊನಾ ವೈರಸ್ ವಿರುದ್ದ ಪರಿಣಾಮಕಾರಿ ಮತ್ತುಆಕ್ರಮಣಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಸಲಹೆ ಮಾಡಿದ್ದಾರೆ.

ಶಂಕಿತರರೋಗ ಪರೀಕ್ಷೆ ವಿಧಾನಗಳನ್ನು ಮತ್ತಷ್ಟು ಚುರುಕುಗೊಳಿಸಬೇಕು. ದೃಢಪಟ್ಟವನ್ನು ಪ್ರತ್ಯೇಕವಾಗಿರಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಸೋಂಕಿತರುಜನರೊಂದಿಗೆ ಸಂಪರ್ಕಕ್ಕೆ ಬರುವುದನ್ನುತಡೆಗಟ್ಟಬೇಕು. ಎಂದುಅವರುಎಚ್ಚರಿಕೆ ನೀಡಿದ್ಧಾರೆ.

Facebook Comments

Sri Raghav

Admin