ಕಠಿಣ ಲಾಕ್‍ಡೌನ್‍ಗೆ ಕ್ಯಾರೆ ಎನ್ನದ ಜನ, ವಾಹನಗಳನ್ನು ಸೀಜ್ ಮಾಡಿದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು.ಮೇ24 ಮಹಾಮಾರಿ ಕರೋನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ನಿಯಮಗಳನ್ನು ಪೊಲೀಸರು ನಗರದೆಲ್ಲೆಡೆ ಬಿಗಿ ಕ್ರಮ ಕೈಗೊಂಡಿದ್ದರೂ ಸಹ ಇದ್ಯಾವೂದಕ್ಕೂ ಡೊಂಟ್‍ಕೆರ್ ಮಾಡದ ಜನ ಇಂದು ಬೆಳಗ್ಗೆ ಬೇಕಾಬಿಟ್ಟಿಯಾಗಿ ಒಡಾಡುತ್ತಿದ್ದು ಇಂದೂ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

10 ಗಂಟೆ ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ಪ್ರತಿಯೋಂದು ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ ಇಂದು ಸೋಮವಾರವಾದ್ದರಿಂದ ನಗರದಲ್ಲಿ ಬೆಳಗ್ಗೆ ವಾಹನ ದಟ್ಟಣೆ ಹೆಚ್ಚಾಗಿತ್ತು. ಮಾಗಡಿರಸ್ತೆ, ನಾಗರಭಾವಿ. ಮೈಸೂರು ರಸ್ತೆ. ಯಶವಂತಪುರ. ಹೆಬ್ಬಾಳ.ತುಮಕೂರು ರಸ್ತೆ. ಶಿವಾಜಿ ನಗರ. ಶಾಂತಿನಗರ. ಕಾರ್ಪೂರೆಷನ್ ವೃತ್ತ. ಕೆ.ಆರ್ ಮಾರುಕಟ್ಟೆ ಸೆರಿದಂತೆ ನಗರದ ವಿವಿದೆಡೆ ಸಂಚಾರ ದಟ್ಟಣೆ ಹೆಚ್ಚಾಗಿತ್ತು.

ಬೆಳಗ್ಗೆ 6 ರಿಂದ 10 ಗಂಟೆ ವರೆಗೂ ಅಗತ್ಯ ವಸ್ತುಗಳ ಖರಿದಿಗೆ ಜನರು ಹೊರಬಂದಿದ್ದು ನಂತರ ಪೊಲೀಸರು ಅನಗತ್ಯವಾಗಿ ಒಡಾಡುತ್ತಿದ್ದವರನ್ನು ಪರಿಶೀಲಿಸಿದ್ರು ಆದ್ರೆ ಜನರು ಮಾತ್ರ ಪೊಲೀಸರ ಮಾತಿಗೆ ಕ್ಯಾರೆ ಎನ್ನದೆ ಕೆಲವರು ಮಾತ್ರ ಬೆಕಾ ಬಿಟ್ಟಿಯಾಗಿ ಒಡಾಡುತ್ತಿದ್ದ ದೃಶ್ಯನಗರದಲ್ಲಿ ಕಂಡು ಬಂದವು.

ಬಹುತೇಕ ಜನರು ವ್ಯಾಕ್ಸಿನೆಷನ್ ಅಂತ ಒಡಾಡುತ್ತಿದ್ರೆ ಆಸ್ಪತ್ರೆ. ಅಡುಗೆ ಅನಿಲ ತರಲು ಹೊಗುತ್ತಿದ್ದೆನೆ. ಎಂದು ಕುಂಟು ನೆಪ ಹೆಳಿಕೊಂಡು ಜನರು ಮಾತ್ರ ಒಡಾಟ ನಿಲ್ಲಿಸಿಲ್ಲ ಇಂತಹ ಸಿಲ್ಲಿ ಸಿಲ್ಲಿ ಕಾರಣ ಕೊಟ್ಟ ಸವಾರರ ವಾಹನಗಳನ್ನು ಪೊಲೀಸರು ಇಂದು ನಗರದ ವಿವಿದೆಡೆ ವಶಕ್ಕೆ ಪಡೆದು ಕೊಂಡಿದ್ದಾರೆ.

ಈ ಹಿಂದಿನ ಲಾಕ್‍ಡೌನ್ ತರ ಇರೋಲ್ಲ ಇನ್ನು 14 ದಿನ ಮನೆಯಲ್ಲಿ ಇರಿ ಕಠಿಣ ನಿಯಮಗಳು ಜಾರಿಯಲ್ಲಿರಲಿದೆ ಅನಗತ್ಯವಾಗಿ ಮನೆಯಿಂದ ಹೊರಬಂದ್ರೆ ಅಂತವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದೆಂದು ಹಲವು ಭಾರಿ ಎಚ್ಚರಿಕೆÀ ನೀಡಿ ದಂಡಹಾಕಿ ವಾಹನಗಳನ್ನು ವಶಕ್ಕೆ ಪಡೆದು ಕೊಂಡರೂ ಜನರು ಬುದ್ದಿ ಮಾತ್ರ ಕಲಿತಿಲ್ಲ ಮನಬಂದತೆ ಓಡಾಡುತ್ತಿದ್ದು 10 ಗಂಟೆ ನಂತರ ಬೆಂಗಳೂರು. ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಹೈ ಅಲರ್ಟ್ ಆದ ಖಾಕಿ ಪಡೆ ರಸ್ತೆಗಿಳಿದು ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡಿ ಖಡಕ್ ಎಚ್ಚರಿಕೆ ನೀಡುವ ಮೂಲಕ ಅನಗತ್ಯ ಓಡಾಡಕ್ಕೆ ಬ್ರೆಕ್ ಹಾಕಿದ್ದು ಸೂಕ್ತದಾಖಲೆ ಹಾಗೂ ಗುರುತಿನ ಚೀಟಿ ಇಲ್ಲದೆ ಓಡಾಡುತ್ತಿದ್ದವರ ವಾಹನಹಳನ್ನು ವಶಕ್ಕೆ ಪಡೆದು ಕೊಂಡರು.

ಸೊಂಕು ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ 14 ದಿನ ಲಾಕ್‍ಡೌನ್ ವಿಸ್ತರಣೆ ಮಾಡಲಾಗಿದೆ ಜನರು ಮಾತ್ರ ಎಚ್ಚೆತ್ತು ಕೊಂಡತ್ತೆ ಕಾಣುತ್ತಿಲ್ಲ ಅಗತ್ಯ ವಸ್ತುಗಳ ಖರಿದಿ ನೆಪದಲ್ಲಿ ಬೀದಿಗೆ ಬರುತ್ತಿದ್ದಾರೆ ಇದರಿಂದ ವಾಹನ ದಟ್ಟಣೆ ಜೋತೆಗೆ ಸಾಮಾಜಿಕ ಅಂತರ ಮಾಯವಾಗುತ್ತಿದ್ದು ಸೊಂಕು ಪಸರಿಸಲು ರಹದ್ದಾರಿಯಾದಾಂತಾಗಿದೆ ಜನರು ಸ್ವಯಂ ಜಾಗೃತರಾಗದ ಹೋರತು ಲಾಕ್‍ಡೌನ್ ವಿಸ್ತರಣೆ ಮಾಡಿ ಪ್ರಯೋಜನ ವಿಲ್ಲ ಮುಖ್ಯಮಂತ್ರಿಗಳು ಸಾರಿ ಸಾರಿ ಮನವಿ ಮಾಡಿಕೊಳ್ಳುತ್ತಿದ್ದರು ಜನರು ಮಾತ್ರ ಬೆಲೆ ಕೊಡುತ್ತಿಲ್ಲ ಪೊಲೀಸರು ಸಹ ಜನರಿಗೆ ಬುದ್ದಿ ಹೇಳಿ ಹೇಳಿ ಸಾಕಗಿ ವಾಹನಗಳ ಸೀಜ್ ಮಾಡೂತ್ತಿದ್ದರೂ ಅವರ ಮಾತಿಗೂ ಕ್ಯಾರೆ ಅನ್ನುತ್ತಿಲ್ಲ. ದಯಮಾಡಿ ಅನಗತ್ಯವಾಗಿ ಮನೆಯಿಂದ ಹೊರಬಾರದಿರಿ, ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸಿ ಕರೋನಾ ನಿಯಂತ್ರಣಕ್ಕೆ ಕೈ ಜೋಡಿಸಿ.

Facebook Comments