ಲಾಕಪ್‍ಡೆತ್ ಪ್ರಕರಣಗಳಲ್ಲಿ ಆಂಧ್ರ ಮೊದಲ ಸ್ಥಾನ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.21- ಪೊಲೀಸ್ ವಶದಲ್ಲಿದ್ದಾಗ ವಿಚಾರಣಾಧೀನ ಕೈದಿಗಳು ಸಾವನ್ನಪ್ಪಿರುವ ಪ್ರಕರಣಗಳು ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು ನಡೆದಿರುವ ವರದಿಯಾಗಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿ ಅನುಸಾರ 2017ರಲ್ಲಿ 100ಕ್ಕೂ ಹೆಚ್ಚು ಕಸ್ಟಡಿಯಲ್ ಸಾವುಗಳು ಸಂಭವಿಸಿವೆ.

ಇನ್ನು 2016ಕ್ಕಿಂತಲೂ ಶೇ.9ರಷ್ಟು ಹೆಚ್ಚಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸುವ ಮುಂಚೆಯೇ 58 ಮಂದಿ ಸಾವನ್ನಪ್ಪಿದರೆ, 42 ಮಂದಿ ಪೊಲೀಸ್ ವಶ ಅಥವಾ ನ್ಯಾಯಾಂಗ ಬಂಧನದಲ್ಲಿದ್ದಾಗ ಮೃತಪಟ್ಟಿದ್ದಾರೆ. ಅದರಲ್ಲಿ ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದ್ದು, 27 ಮಂದಿ ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದಲ್ಲಿ 15, ಗುಜರಾತ್‍ನಲ್ಲಿ 10 ಮಂದಿ ಸಾವನ್ನಪ್ಪಿರುವುದಾಗಿ ಪೊಲೀಸ್ ಇಲಾಖೆಯ ಸುಧಾರಣಾ ಘಟಕದ ಯೋಜನಾ ಮುಖ್ಯಸ್ಥರಾದ ದೇವಿಕಾ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಸ್ಟಡಿ ಸಾವುಗಳು ಹೆಚ್ಚಾಗುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಅವರು, ಇದು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ. ಈ ಬಗ್ಗೆ ನಾವು ಹೆಚ್ಚು ಗಮನ ಹರಿಸಬೇಕು. ಜನರನ್ನು ಸುರಕ್ಷಿತವಾಗಿ ಹಾಗೂ ಜೀವಂತವಾಗಿಡಲು ಆದ್ಯತೆ ನೀಡಬೇಕೆಂದು ಹೇಳಿದ್ದಾರೆ.

Facebook Comments