ಪಾಸ್ವಾನ್, ಶೀಲಾದೀಕ್ಷಿತ್‍ಗೆ ಲೋಕಸಭೆಯಲ್ಲಿ ಶ್ರದ್ಧಾಂಜಲಿ, ಕಲಾಪ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.22-ನಿಧನರಾದ ಹಾಲಿ ಸಂಸದ ರಾಮಚಂದ್ರ ಪಾಸ್ವಾನ್ ಮತ್ತು ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ ಲೋಕಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಸದನದ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.

ಇಂದಿನ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ಓಂ ಬಿರ್ಲಾ ಅವರು ಪಾಸ್ವಾನ್ ಮತ್ತು ದೀಕ್ಷಿತ್ ನಿಧನಕ್ಕೆ ಸಂತಾಪ ಸೂಚಿಸಿದರು. ಲೋಕ ಜನಶಕ್ತಿ ಪಕ್ಷದ ಸದಸ್ಯರಾದ ರಾಮಚಂದ್ರ ಪಾಸ್ವಾನ್ ಬಿಹಾರದ ಸಮಷ್ಟಿಪುರ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾಗಿದ್ದರು.

ನಿನ್ನೆ ಅವರು ನಿಧನರಾದರು. ದೆಹಲಿಯ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರು ಸಹ ಲೋಕಸಭಾ ಸದಸ್ಯರಾಗಿದ್ದರು. ಶನಿವಾರ ಮಧ್ಯಾಹ್ನ ಅನಾರೋಗ್ಯದಿಂದ ಕೊನೆಯುಸಿರೆಳೆದರು.

Facebook Comments