ಲೋಕಾಯುಕ್ತ ಕಚೇರಿಗೂ ಕೊರೊನಾ ಎಂಟ್ರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.1- ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತ ಕಚೇರಿಗೂ ಕೊರೊನಾ ಎಂಟ್ರಿ ಕೊಟ್ಟಿದೆ. ವಿಕಾಸಸೌಧದ ಭದ್ರತೆಗೆ ನಿಯೋಜಿಸಿದ್ದ ಪೆÇಲೀಸ್ ಕಾನ್‍ಸ್ಟೆಬಲ್‍ಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.

ಸೋಂಕಿತ ಕಾನ್‍ಸ್ಟೆಬಲ್ ಲೋಕಾಯುಕ್ತ ಕಚೇರಿಗೂ ಎಂಟ್ರಿ ಕೊಟ್ಟಿದ್ದ. ಹೀಗಾಗಿ ಇಡೀ ಲೋಕಾಯುಕ್ತ ಕಚೇರಿಯನ್ನು ಸ್ಯಾನಿಟೈಸರ್ ಮಾಡಲಾಗುತ್ತಿದೆ.

ಕಚೇರಿ ಸಿಬ್ಬಂದಿಗೆ ಒಂದು ದಿನ ರಜೆ ಕೊಟ್ಟು ಕಳುಹಿಸಲಾಗಿದೆ.  ಸೋಂಕಿತ ಕಾನ್‍ಸ್ಟೆಬಲ್ ಜೊತೆ ಸಂಪರ್ಕವಿರಿಸಿಕೊಂಡಿದ್ದ ಲೋಕಾಯುಕ್ತ ಸಿಬ್ಬಂದಿಯಲ್ಲಿ ಆತಂಕ ಎದುರಾಗಿದೆ.

Facebook Comments