ಚುನಾವಣಾ ಪ್ರಣಾಳಿಕೆ ಜನಾಭಿಪ್ರಾಯ ಅಭಿಯಾನಕ್ಕೆ ಬಿಜೆಪಿ ಅಧ್ಯಕ್ಷ ನಡ್ಡಾ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಕೊಲ್ಕತಾ, ಫೆ.25 (ಪಿಟಿಐ)- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ್ ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಸೋಲಿಸಲೇಬೇಕೆಂದು ನಾನಾ ರೀತಿ ಕಸರತ್ತು ನಡೆಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಇಂದು ಚುನಾವಣಾ ಪ್ರಣಾಳಿಕೆ ಜನಾಭಿಪ್ರಾಯ ಅಭಿಯಾನಕ್ಕೆ ಚಾಲನೆ ನೀಡಿದೆ.

ಗುರುವಾರ ಕೊಲ್ಕತಾದಲ್ಲಿ ನಡೆಸಿದ ಬೃಹತ್ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ‘ಲೋಖೋ ಸೊನಾರ್ ಬಾಂಗ್ಲಾ’ ಹೆಸರಿನ ಜನಾಭಿಪ್ರಾಯ ಅಭಿಯಾನವನ್ನು ಸಂಗ್ರಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಚುನಾವಣೆ ಮುನ್ನ ಪಶ್ಚಿಮ ಬಂಗಾಳದ ಸುಮಾರು ಎರಡು ಕೋಟಿಗೂ ಅಧಿಕ ಜನರನ್ನು ಸಂಪರ್ಕಿಸಿ ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸುವ ನಿರ್ಧಾರ ತೆಗೆದುಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಜನರ ಹಿತ ಕಾಪಾಡುವ ಸರ್ಕಾರ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಈ ಅಭಿಯಾನ ಹಮ್ಮಿಕೊಂಡಿದೆ.

ಬಂಗಾಳದ ಜನತೆಯ ಅಭಿಪ್ರಾಯ ಮತ್ತು ಅವರ ಬೇಕು ಬೇಡಗಳನ್ನು ಕೇಳಿಕೊಂಡು ಅವರಿಗೆ ಇಷ್ಟವಾಗುವ ಹಾಗೂ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಪ್ರಣಾಳಿಕೆ ನಮ್ಮ ಪಕ್ಷ ಸಿದ್ಧಪಡಿಸಲಿದೆ ಎಂದು ಅವರು
ಹೇಳಿದರು.

ವಿಧಾನಸಭಾ ಚುನಾವಣೆ ಪ್ರಣಾಳಿಕೆ ತಯಾರಿಕೆ ಪ್ರಾರಂಭಿಸುವ ಮುನ್ನ ಬಿಜೆಪಿ ಬಂಗಾಳದ ಜನರ ಸಲಹೆ ಬಹಳ ಮುಖ್ಯವಾಗಿದೆ ಎಂದು ನಡ್ಡಾ ತಿಳಿಸಿದರು. ಇದೇ ಸಂದರ್ಭದಲ್ಲಿ ಬೆಂಗಾಲಿ ನಟಿ ಪಾಯೆಲ್ ಸರ್ಕಾರ್ ಅವರು ನಡ್ಡಾ ಅವರ ಎದುರು ಬಿಜೆಪಿ ಸೇರಿದರು.

Facebook Comments