ಸ್ಟ್ರಾಂಗ್ ರೂಮ್‌ಗಳು ಓಪನ್, ಮತಎಣಿಕೆಗೆ ಕ್ಷಣಗಣನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ 23- ಶತಕೋಟಿ ಭಾರತೀಯರು ಚಾತಕಪಕ್ಷಿಯಂತೆ ಎದುರು ನೋಡುತ್ತಿರುವ 17ನೇ ಲೋಕಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಮುಂದಿನ 5 ವರ್ಷಕ್ಕೆ ದೇಶವನ್ನು ಮುನ್ನಡೆಸುವವರು ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.

ಈಗಾಗಲೇ ಸ್ಟ್ರಾಂಗ್ ರೂಮ್ ಗಳು ಓಪನ್ ಆಗುತ್ತಿದ್ದು, 8 ಗಂಟೆಯಿಂದ ಮತಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮೊದಲು ಇವಿಎಂ ಗಳಲ್ ಮತಎಣಿಕೆ ಮಾಡಲಾಗುತ್ತಿದ್ದು ನಂತರ ವಿವಿಪ್ಯಾಟ್ ಗಳ ಮತಗಳೊಂದಿಗೆ ತಾಳೆ ಹಾಕಲಾಗುತ್ತದೆ.

ಇಂದು ಬೆಳಗ್ಗೆ ದೇಶದ 542 ಲೋಕಸಭಾ ಕ್ಷೇತ್ರಗಳೊಂದಿಗೆ ಆಂಧ್ರಪ್ರದೇಶ, ಸಿಕ್ಕಿಂ ಹಾಗೂ ಒರಿಸ್ಸಾ ವಿಧಾನಸಭಾ ಕ್ಷೇತ್ರಗಳಿಗೂ ಏಕಕಾಲದಲ್ಲಿ ಮತಗಳ ಎಣಿಕೆ ಪ್ರಾರಂಭವಾಗಲಿದ್ದು, ಸಂಜೆ 4 ಗಂಟೆಯೊಳಗೆ ಸ್ಪಷ್ಟ ಜನಾದೇಶ ಹೊರಬೀಳಲಿದೆ.

ಕರ್ನಾಟಕದ 28 ಲೋಕಸಭೆ ಹಾಗೂ ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶವು ಪ್ರಕಟವಾಗಲಿದೆ. ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ಸತ್ಯಾಸತ್ಯತೆ ಬಗ್ಗೆ ಕೆಲವು ವಿರೋಧ ಪಕ್ಷಗಳು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರತಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ 5 ಮತಗಟ್ಟೆಗಳಲ್ಲಿ ಇವಿಎಂ ಹಾಗೂ ವಿವಿಪ್ಯಾಟ್‍ಗಳ ಮತಗಳನ್ನು ತಾಳೆ ಹಾಕಿ ಎಣಿಕೆ ಮಾಡುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿರುವುದರಿಂದ ಈ ಬಾರಿ ಫಲಿತಾಂಶ ಪ್ರಕಟಗೊಳ್ಳಲು ವಿಳಂಬವಾಗಲಿದೆ.

ಮೊದಲು ಇವಿಎಂಗಳ ಮತ ಎಣಿಕೆ ಮುಗಿಯಲಿದ್ದು, ನಂತರ ವಿವಿಪ್ಯಾಟ್ ಮತಗಳನ್ನು ತಾಳೆ ಹಾಕಲಾಗುವುದು. ಇದರಿಂದ 3ರಿಂದ 4 ಗಂಟೆ ಫಲಿತಾಂಶ ಪ್ರಕಟಗೊಳ್ಳಲು ವಿಳಂಬವಾಗಲಿದೆ ಎಂದು ಆಯೋಗ ತಿಳಿಸಿದೆ. ಹಿಂದಿನ ಚುನಾವಣೆಗಳಲ್ಲಿ ಇವಿಎಂಗಳಲ್ಲೇ ಮತ ಎಣಿಕೆ ನಡೆಯುತ್ತಿದ್ದರಿಂದ ಸರಿಸುಮಾರು 12 ಗಂಟೆಯೊಳಗೆ ಬಹುತೇಕ ಫಲಿತಾಂಶ ಸಿಗುತ್ತಿತ್ತು.

[ LOKSABHA ELECTIONS 2019 RESULT – Live Updates]

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin