ಪುಟ್ಟ ಕೀಟದಿಂದ ಎತ್ತರದ ಜಿರಾಫೆ ತನಕ ಪ್ರಾಣಿಗಳ ಮಾಪನ..!

ಈ ಸುದ್ದಿಯನ್ನು ಶೇರ್ ಮಾಡಿ

Ds

ಇಂಗ್ಲೆಂಡ್ ರಾಜಧಾನಿ ಲಂಡನ್ ಮೃಗಾಲಯಲ್ಲಿ ಪ್ರತಿ ವರ್ಷ ಪ್ರಾಣಿ-ಪಕ್ಷಿಗಳ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಅವುಗಳ ತೂಕ ಮತ್ತು ಅಳತೆಯನ್ನು ನೋಡುವ ಕಾರ್ಯವನ್ನು ಮೃಗಾಲಯ ಪಾಲಕರು ಆರಂಭಿಸಿದ್ದಾರೆ. ಈ ಕುರಿತು ಒಂದು ವರದಿ.  ಪ್ರತಿವರ್ಷ ಲಂಡನ್ ಮೃಗಾಲಯದಲ್ಲಿ ಪ್ರಾಣಿ-ಪಕ್ಷಿಗಳ ಆರೋಗ್ಯ ತಪಾಸಣೆ, ತೂಕ ಮತ್ತು ಅಳತೆ ಮಾಪನ ನಡೆಯುತ್ತದೆ. ಈ ವರ್ಷವೂ ಈ ಕಾರ್ಯ ಮುಂದುವರಿದಿದೆ. 18,430 ಪ್ರಾಣಿಗಳನ್ನು ಆರೋಗ್ಯ ತಪಾಸಣೆ ಮಾಡುವುದು ಸಾಮಾನ್ಯ ಸಂಗತಿಯಲ್ಲ. ಇದಕ್ಕೆ ಸಮಯ ಮತ್ತು ಸಂಯಮ ಬೇಕು. ಪ್ರಾಣಿ-ಪಕ್ಷಿ ಗಳು ಚಂಚಲ ಸ್ವಭಾವವುಳ್ಳ ಕಾರಣ ಮೃಗಪಾಲಕರಿಗೆ ಇದೊಂದು ಸವಾಲಿನ ಕೆಲಸವೂ ಆಗಿದೆ. ಭೂಮಂಡಲದ ಅತ್ಯಂತ ಎತ್ತರದ ಪ್ರಾಣಿ ಜಿರಾಫೆಯ ಎತ್ತರವನ್ನು ಅಳತೆ ಮಾಡಲಾಯಿತು.

Ds-3

ಮರದಿಂದ ಮರಕ್ಕೆ ಹಾರುವ ಅಳಿಲು ಮಂಗಗಳ ವಿಭಾಗದಲ್ಲಿ ಮರ್ಕಟಗಳನ್ನು ತೂಕ ಮಾಡುವುದು ಮೃಗಾಲಯದ ಸಿಬ್ಬಂದಿಗೆ ದೊಡ್ಡ ತಲೆನೋವಿನ ಕೆಲಸವಾಯಿತು. ಮೃಗಾಲಯದಲ್ಲಿ 712 ವಿವಿಧ ಜಾತಿಯ ಪ್ರಾಣಿ ಪಕ್ಷಿಗಳಿದ್ದು, ಆಹಾರದ ಆಮಿಷವೊಡ್ಡಿ ಪ್ರಾಣಿಗಳನ್ನು ಮಾಪಕದ ಮೇಲೆ ಕೂರಿಸಲು ಹರಸಾಹಸ ಪಡಬೇಕಾಯಿತು.

Ds-1

ಆದರೆ ಪೆಂಗ್ವಿನ್‍ಗಳನ್ನು ತೂಕ ಮಾಡುವುದು ಸಿಬ್ಬಂದಿಗೆ ತುಂಬಾ ಸುಲಭವಾಗಿತ್ತು. ಮನುಷ್ಯರಂತೆ ಸಾಲುಗಟ್ಟಿ ನಿಂತು ತಮ್ಮ ಆರೋಗ್ಯ ತಪಾಸಣೆ ಮತ್ತು ತೂಕ ಮಾಪನಕ್ಕೆ ಒಳಪಟ್ಟವು. ಇದಕ್ಕಾಗಿ ಅವುಗಳಿಗೆ ಮೀನು ಆಹಾರದ ಲಂಚ ನೀಡಬೇಕಾಯಿತು. ಆರು ಮರಿಗಳ ಜನ್ಮದಾತ ಜಾಯಿ ಜಾಯಿ ಹೆಸರಿನ ಸುಮಾತ್ರ ಹುಲಿ ಎಂಟು ಅಡಿ ಎತ್ತರವಿದ್ದು, 135 ಕಿಲೋ ತೂಕವಿದೆ. ಅಪರೂಪದ ಕೀಟವನ್ನು ಸಹ ಮಾಪನಕ್ಕೆ ಒಳಪಡಿಸಲಾಯಿತು.  ಮೃಗಾಲಯದಲ್ಲಿ ನಡೆಯುವ ಮಾಪನ ಪ್ರಕ್ರಿಯೆ ಯಿಂದ ಲಭಿಸುವ ಮಾಹಿತಿಯನ್ನು ವಿಶ್ವದ ವಿವಿಧ ಮೃಗಾಲಯಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಅವುಗಳ ಆರೋಗ್ಯ ರಕ್ಷಣೆ ಮತ್ತು ಸಂತಾನೋತ್ಪತ್ತಿ ಕಾರ್ಯದಲ್ಲಿ ಇದು ನೆರವಾಗುತ್ತದೆ ಎನ್ನುತ್ತಾರೆ ಮೃಗಾಲಯದ ವ್ಯವಸ್ಥಾಪಕರು.

Ds-4 Ds-2

Facebook Comments

Sri Raghav

Admin