ನಾನು ಯಾವುದೇ ತಪ್ಪು ಮಾಡಿಲ್ಲ : ಲೂಸ್ ಮಾದ ಯೋಗಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.22- ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ನನ್ನನ್ನು ವಿಚಾರಣೆಗೆ ಕರೆದಿದ್ದರು. ಅವರು ಕೇಳಿದ ಪ್ರಶ್ನೆಗೆ ನನಗೆ ತಿಳಿದಿರುವ ಮಾಹಿತಿ ನೀಡಿದ್ದೇನೆ. ಮತ್ತೆ ವಿಚಾರಣೆಗೆ ಕರೆದರೆ ಹೋಗುತ್ತೇನೆ ಎಂದು ನಟ ಯೋಗಿ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಪಾರ್ಟಿಗಳಿಗೆ ಹೋಗುತ್ತಿರಲಿಲ್ಲ. ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಬಗ್ಗೆ ನನಗೆ ಗೊತ್ತಿಲ್ಲ.  ನಾನು ಯಾವುದೇ ತಪ್ಪು ಮಾಡಿಲ್ಲ. ಐಎಸ್‍ಡಿ ವಿಚಾರಣೆಯನ್ನು ಧೈರ್ಯವಾಗಿ ಎದುರಿಸಿದ್ದೇನೆ ಎಂದರು.

ತನಿಖಾಧಿಕಾರಿಗಳು ರಾಗಿಣಿ ಬಗ್ಗೆ ಯಾವುದೇ ಪ್ರಶ್ನೆ ಕೇಳಿಲ್ಲ. ದಿಗಂತ್ ಮತ್ತು ಐಂದ್ರಿತಾ ರೇ ಅವರ ಬಗ್ಗೆಯೂ ಪ್ರಶ್ನೆ ಕೇಳಿಲ್ಲ. ರಾಗಿಣಿ ಅವರೊಂದಿಗೆ ನಾನು ನಟಿಸಿದ್ದೇನೆಯೇ ಹೊರತು ಡ್ರಗ್ಸ್ ಪಾರ್ಟಿಯಲ್ಲಿ ಪಾಲ್ಗೊಂಡಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

Facebook Comments