ಆ.5ರಂದು ನ್ಯೂಯಾರ್ಕ್ ಟೈಮ್ಸ್ ಸ್ಕ್ವೈರ್‌ನಲ್ಲಿ ಪ್ರದರ್ಶನಗೊಳ್ಳಲಿವೆ ಶ್ರೀರಾಮನ ಪ್ರತಿರೂಪಗಳು

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್,ಜು.30-ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಆ.5ರಂದು ನಡೆಯಲಿರುವ ರಾಮಮಂದಿರ ನಿರ್ಮಾಣ ಶಿಲಾನ್ಯಾಸ ಸಮಾರಂಭ ವಿಶ್ವದ ಗಮನಸೆಳೆದಿದೆ.

ಈ ನಿಮಿತ್ತ ಅಂದು ಅಮೆರಿಕದ ಗಗನಚುಂಬಿ ನಗರಿ ನ್ಯೂಯಾರ್ಕ್‍ನ ಪ್ರಸಿದ್ದ ಟೈಮ್ ಚೌಕದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿತವಾಗಿದೆ.

ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಬೃಹತ್ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಸಂದರ್ಭದಲ್ಲೇ ಅಮೆರಿಕದ ಟೈಮ್ ಸ್ಕ್ವೈರ್‍ನಲ್ಲಿ ಶ್ರೀರಾಮನ ಪ್ರತಿರೂಪಗಳು ಮತ್ತು ರಾಮಮಂದಿರದ ಬೃಹತ್ 3ಡಿ ಪ್ರತಿಬಿಂಬಗಳು ದೊಡ್ಡ ಪರದೆಯ ಮೇಲೆ ಬಿತ್ತರಗೊಳ್ಳಲಿದೆ.

ನ್ಯೂಯಾರ್ಕ್‍ನಲ್ಲಿರುವ ಹಿಂದೂ ಸಮುದಾಯದ ಮುಖಂಡ ಮತ್ತು ಅಮೆರಿಕನ್ ಇಂಡಿಯಾ ಪಬ್ಲಿಕ್ ಅಫೇರ್ಸ್ ಕಮಿಟಿ ಅಧ್ಯಕ್ಷ ಜಗದೀಶ್ ಸೆವಾನಿ ಅಂದು ಟೈಮ್ ಸ್ಕ್ವೈರ್‍ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಿದ್ದು, ಅಮೆರಿಕದಲ್ಲಿರುವ ಭಾರತೀಯ ಗಣ್ಯರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.

Facebook Comments

Sri Raghav

Admin