ಲಾರಿ ಕದ್ದು ಮಾರಿದ್ದ ಇಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಫೆ.17- ರಾಷ್ಟ್ರೀಯ ಹೆದ್ದಾರಿ 4ರ ರಸ್ತೆಬದಿ ನಿಲ್ಲಿಸಿದ್ದ 11 ಲಕ್ಷ ರೂ. ಮೌಲ್ಯದ ಅಶೋಕ ಲೈಲ್ಯಾಂಡ್ ಲಾರಿಯನ್ನು ಕದ್ದು ಮಾರಾಟ ಮಾಡಿದ್ದ ಇಬ್ಬರನ್ನು ಶಿರಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂಲತಃ ತಮಿಳುನಾಡಿನ ಮಣಿಕಂಠನ್(51) ಮತ್ತು ಗಂಗಾನಗರದ ಮನೋಜ್ ತಿರಕಿ(38) ಬಂಧಿತರು.

ಘಟನೆ ವಿವರ: ಕಳೆದ ಫೆ.23ರಂದು ರಾತ್ರಿ ಸಿರಾ ಟೌನ್ ಸಂತೇಪೇಟೆ ಸರ್ಕಾರಿ ಸ್ಕೂಲ್ ಮುಂಭಾಗ ಸಿರಾ-ತುಮಕೂರು ಹಳೇ ಎನ್‍ಎಚ್-4 ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಸುಮಾರು 11 ಲಕ್ಷ ರೂ. ಮೌಲ್ಯದ 12 ಚಕ್ರದ ಲೈಲ್ಯಾಂಡ್‍ಲಾರಿಯನ್ನು ಕಳ್ಳರು ಕಳವು ಮಾಡಿದ್ದರು.  ಈ ಸಂಬಂಧ ಸಂತೆಪೇಟೆಯ ನಾಗರಾಜು ಎಂಬುವರು ಶಿರಾ ಪಟ್ಟಣ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಲಾರಿ ಮತ್ತು ಆರೋಪಿಗಳನ್ನು ಪತ್ತೆ ಮಾಡಲು ಎಸ್‍ಪಿ ಕುಮಾರಪ್ಪ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಆರೋಪಿಗಳನ್ನು ಬಂಧಿಸಿ ವಿಚರಣೆ ಮಾಡಲಾಗಿ, ಇವರು ಲಾರಿಯನ್ನು ಕಳ್ಳತನ ಮಾಡಿ ತಮಿಳುನಾಡಿನ ಸೇಲಂಗೆ ತೆಗೆದುಕೊಂಡು ಹೋಗಿ ಪಳನಿಸ್ವಾಮಿ ಮತ್ತು ಸೆಂಥಿಲ್‍ನಾಥನ್ ಎಂಬುವರಿಗೆ ಮಾರಾಟ ಮಾಡಿದ್ದರು.

ಪಳನಿಸ್ವಾಮಿ ಮತ್ತು ಸೆಂಥಿಲ್‍ನಾಥನ್‍ರವರು ಪ್ರಸಾದ್ ಹಾಗೂ ಭಾಷಾ ಎಂಬುವರಿಗೆ ಮತ್ತೊಮ್ಮೆ ವಾಹನವನ್ನು ಮಾರಾಟ ಮಾಡಿದ್ದರೆ, ಪ್ರಸಾದ್ ಮತ್ತು ಭಾಷಾ ಲಾರಿಯ ಇಂಜಿನ್ ನಂಬರ್, ಚಾಸಿಸ್ ನಂಬರ್ ಮತ್ತು ಆರ್‍ಸಿ ನಂಬರ್‍ಗಳನ್ನು ಬದಲಿಸಿ ಬೇರೆ ವಾಹನದ ಆರ್‍ಸಿ ನಂಬರ್, ಇಂಜಿನ್ ನಂಬರ್ ಮತ್ತು ಚಾಸಿಸ್ ನಂಬರ್, ಆರ್‍ಸಿ ನಂಬರ್‍ಗಳನ್ನು ಬದಲಿಸಿ ಲಾರಿಯನ್ನು ಮೇಲ್ನೋಟಕ್ಕೆ ಹೊಸ ವಾಹನದಂತೆ ಬದಲಾವಣೆ ಮಾಡಿ ಬೇರೆ ನಂಬರ್ ನೀಡಿ ತಮಿಳುನಾಡಿನ ಕುಮಾರ್ ಎಂಬುವರಿಗೆ 12.60 ಲಕ್ಷ ರೂ.ಗಳಿಗೆ ಮಾರಾಟ ಮಾಡಿರುವುದಾಗಿ ತನಿಖೆ ವೇಳೆ ತಿಳಿದು ಬಂದಿರುತ್ತದೆ.

Facebook Comments