ಸಂಧಾನ ಮಾತುಕತೆ ಅಪೂರ್ಣ, ಇಂದಿನಿಂದ ಟ್ರಕ್ ಮುಷ್ಕರ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Lorry-Strike--01
ನವದೆಹಲಿ, ಜು.20-ಕೇಂದ್ರ ಸರ್ಕಾರದೊಂದಿಗೆ ನಿನ್ನೆ ತಡರಾತ್ರಿ ನಡೆದ ಸಂಧಾನ ಮಾತುಕತೆ ಅಪೂರ್ಣಗೊಂಡಿದ್ದು. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಟ್ರಕ್ ಮಾಲೀಕರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಡಿಸೇಲ್ ಬೆಲೆ ಹಾಗೂ ಟೋಲ್ ಶುಲ್ಕ ಇಳಿಸಬೇಕೆಂಬುದು ಟ್ರಕ್ ಮಾಲೀಕರ ಪ್ರಮುಖ ಬೇಡಿಕೆಯಾಗಿದೆ. ಎಐಎಂಟಿಸಿ ಸಂಘಟನೆ ಕರೆ ಮೇರೆಗೆ ಟ್ರಕ್ ಮುಷ್ಕರ ಪ್ರಾರಂಭವಾಗಿದೆ. ಆದರೆ ಕೆಲವಡೆ ಟ್ರಕ್‍ಗಳ ಸಂಚಾರ ಎಂದಿನಂತಿದೆ.

ಇಂದು 1.30ರ ನಸುಕಿನವರೆಗೂ ಹಣಕಾಸು ಸಚಿವ ಪಿಯೂಷ್ ಗೋಯೆಲ್ ಅವರೊಂದಿಗೆ ನಡೆದ ಮಾತುಕತೆ ಅಪೂರ್ಣವಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಒಮ್ಮತದ ನಿರ್ಧಾರ ವ್ಯಕ್ತವಾಗಿಲ್ಲ. ಹೀಗಾಗಿ ನಾವು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದೇವೆ ಎಂದು ಎಐಎಂಟಿಸಿ ಮಹಾ ಪ್ರಧಾನ ಕಾರ್ಯದರ್ಶಿ ನವೀನ್ ಗುಪ್ತಾ ಹೇಳಿದ್ದಾರೆ. ಇಂದು ಅಪರಾಹ್ನ ಕೂಡ ಸರ್ಕಾರದ ಉನ್ನತಾಧಿಕಾರಿಗಳ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.

Facebook Comments

Sri Raghav

Admin