ನಾಳೆಯಿಂದ ದೇಶಾದ್ಯಂತ ಅನಿರ್ದಿಷ್ಠಾವಧಿವರೆಗೆ ಲಾರಿ ಮಾಲೀಕರ ಮುಷ್ಕರ

ಈ ಸುದ್ದಿಯನ್ನು ಶೇರ್ ಮಾಡಿ

Lorry---01

ಬೆಂಗಳೂರು, ಜೂ.17- ಅವೈಜ್ಞಾನಿಕವಾಗಿ ಪೆಟ್ರೋಲ್ -ಡೀಸೆಲ್ ಬೆಲೆ ಹೆಚ್ಚಳ ಮತ್ತು ಮೂರನೇ ಪಾರ್ಟಿ ಪ್ರೀಮಿಯಂ ದರ ಹೆಚ್ಚಳ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಅಖಿಲ ಭಾರತ ಟ್ರಕ್ ಮಾಲೀಕರ ಮಹಾ ಒಕ್ಕೂಟ ನಾಳೆಯಿಂದ (ಜೂ.18) ದೇಶಾದ್ಯಂತ ಅನಿರ್ದಿಷ್ಠಾವಧಿವರೆಗೆ ಮುಷ್ಕರ ನಡೆಸಲು ನಿರ್ಧರಿಸಿದೆ. ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅಖಿಲ ಭಾರತ ಸರಕು ಸಾಗಣೆ ವಾಹನಗಳ ಮಾಲೀಕರ ಸಂಘಗಳ ಮಹಾಒಕ್ಕೂಟದ ಅಧ್ಯಕ್ಷ ಬಿ.ಚನ್ನಾರೆಡ್ಡಿ ಅವರು, ಕೇಂದ್ರ ಸರ್ಕಾರ ಪದೇಪದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡುತ್ತಲೇ ಬರುತ್ತಿದೆ. ಅಲ್ಲದೇ, ಅವೈಜ್ಞಾನಿಕ ರೀತಿಯಲ್ಲಿ ಮೂರನೇ ಪಾರ್ಟಿ ಇನ್ಶೂರೆನ್ಸ್ ಪ್ರೀಮಿಯಂ ದರವನ್ನು ಹೆಚ್ಚಳ ಮಾಡಿದೆ. ಇದರಿಂದ ಟ್ರಕ್ ಮಾಲೀಕರು ಮತ್ತು ಸಿಬ್ಬಂದಿಗೆ ಭಾರೀ ಪ್ರಮಾಣದಲ್ಲಿ ಹೊರೆಯಾಗುತ್ತಿದೆ ಎಂದು ದೂರಿದರು.

ಹೆಚ್ಚಳವಾಗಿರುವ ತೈಲ ಬೆಲೆ ಇಳಿಕೆ ಮತ್ತು ಮೂರನೇ ಪಾರ್ಟಿ ಇನ್ಷೂರೆನ್ಸ್ ಪ್ರೀಮಿಯಂ ದರವನ್ನು ರದ್ದು ಮಾಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಟ್ರಕ್ ಮಾಲೀಕರು ಬೇಡಿಕೆ ಈಡೇರುವವರೆಗೆ ಮುಷ್ಕರ ನಡೆಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ. ರಸ್ತೆ ಸಾರಿಗೆ ವ್ಯವಸ್ಥೆ ಭಾರತದ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿದೆ. ಇದಲ್ಲದೇ, ರೈಲ್ವೆ, ವೈಮಾನಿಕ ಸರಕು ಸಾಗಣೆ ಮತ್ತು ಬಂದರು ಸಾಗಣೆ ವ್ಯವಸ್ಥೆಯೂ ಪ್ರಮುಖ ಸರಕು ಸಾಗಣೆ ವ್ಯವಸ್ಥೆಗಳಾಗಿವೆ. ಆದರೆ, ರೈಲ್ವೆ, ವೈಮಾನಿಕ ಮತ್ತು ಶಿಪ್ಪಿಂಗ್ಗೆ ರಸ್ತೆ ಸಾರಿಗೆ ಸರಕು ಸಾಗಣೆ ಅಗತ್ಯವಿದೆ. ಇದಿಲ್ಲದಿದ್ದರೆ ಈ ಮೂರೂ ಕ್ಷೇತ್ರಗಳಲ್ಲಿ ಸರಕು ಸಾಗಣೆಗೆ ಅವಕಾಶವೇ ಇರುವುದಿಲ್ಲ. ಟ್ರಕ್‍ಗಳಿಂದ ಈ ಮೂರೂ ಕ್ಷೇತ್ರಗಳಿಗೆ ಸರಕು ಸಾಗಿಸಿದರೆ ಮಾತ್ರ ಸರಕು ಸಾಗಣೆ ವ್ಯವಸ್ಥೆ ಸುಗಮವಾಗಿ ಸಾಗಲು ಸಾಧ್ಯವಾಗುತ್ತದೆ. ಇಂತಹ ಅತ್ಯಂತ ಪ್ರಮುಖವಾದ ಸರಕು ಸಾಗಣೆ ವ್ಯವಸ್ಥೆಯಾಗಿರುವ ಟ್ರಕ್‍ಗಳಿಗೆ ಭಾರೀ ಹೊಡೆತ ನೀಡುತ್ತಿರುವುದರಿಂದ ಭಾರೀ ತೊಂದರೆಯಾಗಿದೆ. ಅಲ್ಲದೆ ಹೆದ್ದಾರಿಗಳಲ್ಲಿ ದುಬಾರಿ ಟೋಲ್ ಕಟ್ಟಲೇಬೇಕಾಗಿರುವುದು ಸಂಕಷ್ಟಕ್ಕೆ ಈಡು ಮಾಡಿದೆ ಎಂದಿದ್ದಾರೆ.

2012 ರಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 45.73 ರೂಪಾಯಿ ಇದ್ದರೆ, 2018 ರಲ್ಲಿ 66.37 ರೂಪಾಯಿ ಇದೆ. ಅದೇ ರೀತಿ 2012 ರಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‍ಗೆ 73.5 ರೂಪಾಯಿ ಇದ್ದರೆ, ಪ್ರಸ್ತುತ 75.06 ರೂಪಾಯಿ ಇದೆ. ಬೇರೆ ರಾಜ್ಯಗಳಲ್ಲಿ ಈ ಬೆಲೆ ಇನ್ನೂ ಹೆಚ್ಚಿದೆ. ಈ ಬೆಲೆ ಏರಿಕೆಯನ್ನು ಗಮನಿಸಿದರೆ ರಸ್ತೆ ಸಾರಿಗೆಗೆ ಅಗತ್ಯವಾಗಿ ಬೇಕಾಗಿರುವ ಡೀಸೆಲ್ ಬೆಲೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚಳವಾಗುತ್ತಲೇ ಬರುತ್ತಿದೆ. ಆದರೆ, ಕೇಂದ್ರ ಪೆಟ್ರೋಲಿಯಂ ಇಲಾಖೆ ಈ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಲೇ ಅಪಾರ ಪ್ರಮಾಣದ ತೆರಿಗೆಗಳನ್ನು ಎಂದು ಒಕ್ಕೂಟದ ಮುಖ್ಯ ಕಾರ್ಯದರ್ಶಿ ಗೋಪಾಲಸ್ವಾಮಿ ದೂರಿದ್ದಾರೆ.

ಇನ್ನು ಇನ್ಶ್ಯೂರೆನ್ಸ್ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ (ಐಆರ್ಡಿಎಐ) ಥರ್ಡ್ ಪಾರ್ಟಿ ಇನ್ಶ್ಯೂರೆನ್ಸ್ ವಿಚಾರದಲ್ಲಿ ಟ್ರಕ್ ಮಾಲೀಕರನ್ನು ಗುರಿಯಾಗಿಟ್ಟುಕೊಂಡು ವಿಮಾ ಕಂತನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಿ ಟ್ರಕ್ ಮಾಲೀಕರಿಗೆ ಆರ್ಥಿಕ ಹೊರೆಯನ್ನು ಉಂಟು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ವಿಮಾ ರೀತಿಯಲ್ಲಿ ಥರ್ಡ್ ಪಾರ್ಟಿ ಇನ್ಶ್ಯೂರೆನ್ಸï ಪದ್ಧತಿಯನ್ನು ಡೀಟಾರಿಫ್ ಮಾಡಬೇಕೆಂದು ಅವರು ಒತ್ತಾಯಿಸಿದರು.

Facebook Comments

Sri Raghav

Admin