ಹೊಟೇಲ್‍ಗೆ ನುಗ್ಗಿದ ಕಂಟೈನರ್ ಲಾರಿ, ನಾಲ್ವರು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ನ.26- ವೇಗವಾಗಿ ಬಂದ ಕಂಟೈನರ್ ಲಾರಿ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ತಿರುವು ಪಡೆಯುತ್ತಿದ್ದ ಎರಡು ಕಾರುಗಳಿಗೆ ಡಿಕ್ಕಿ ಒಡೆದು ನಂತರ ಹೊಟೇಲ್‍ಗೆ ನುಗ್ಗಿದ ಪರಿಣಾಮ ಟೀ ಕುಡಿಯುತ್ತಿದ್ದ ಮೂವರು ಹಾಗೂ ಕಾರಿನಲ್ಲಿದ್ದ ಒಬ್ಬರು ಮೃತಪಟ್ಟಿರುವ ಘಟನೆ ಹೊರವಲಯದ ಚದಲಪುರ ಕ್ರಾಸ್ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.

ತಾಲ್ಲೂಕಿನ ಗವಿಗಾನಹಳ್ಳಿಯ ಗಾರೆ ಯಮುನಾಚಾರಿ, ವೆಂಕಟೇಶಪ್ಪ , ನಿತೀಶ್‍ಗೌಡ, ತಮಿಳುನಾಡಿನ ಕಲಂಜಲ್ , ಕಾರಿನಲ್ಲಿದ್ದ ಯಮುನಾ ಚಾರಿ,ಮೃತಪಟ್ಟ ದುರ್ದೈವಿಗಳು. ಬಾಗೇಪಲ್ಲಿ ಕಡೆಯಿಂದ ಬಂದ ಕಾರು ಚಿಕ್ಕಬಳ್ಳಾಪುರ ಕಡೆಗೆ ತಿರುವು ಪಡೆದುಕೊಳ್ಳುವಾಗ ಬೆಂಗಳೂರು ಕಡೆಯಿಂದ ವೇಗವಾಗಿ ಬಂದ ಕಂಟೈನರ್ ಲಾರಿ ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಹೊಟೇಲ್‍ಗೆ ನುಗ್ಗಿದೆ.

ಈ ಸಂದರ್ಭದಲ್ಲಿ ಟೀ ಕುಡಿಯಲು ನಿಂತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಕಾರಿನಲ್ಲಿದ್ದ ಯಮುನಾಚಾರಿಯೂ ಸಹ ಗಂಭೀರ ಗಾಯವಾಗಿ ಸಾವನ್ನಪ್ಪಿದ್ದಾರೆ, ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಡಿವೈಎಸ್‍ಪಿ ರವಿಶಂಕರ್, ಎಸ್‍ಪಿ ಮಿಥುನ್‍ಕುಮಾರ್, ಸಿಪಿಐ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಂದಿಗಿರಿಧಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments