ಲವ್ ಜಿಹಾದ್ ನಿಯಂತ್ರಣ ಸುಗ್ರೀವಾಜ್ಞೆಗೆ ಉತ್ತರಪ್ರದೇಶ ರಾಜ್ಯಪಾಲರ ಅಂಕಿತ

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ,ನ.28-ಬಲವಂತದ ಮತಾಂತರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಉತ್ತರಪ್ರದೇಶ ಸರ್ಕಾರ ಜಾರಿಗೆ ತಂದಿರುವ ಸುಗ್ರಿವಾಜ್ಞಾಗೆ ಗವರ್ನರ್ ಆನಂದಿಬೇನ್ ಅಂಕಿತ ಹಾಕಿದ್ದಾರೆ. ಬಲವಂತದ ಮತಾಂತರಕ್ಕೆ ಮುಂದಾಗುವವರಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸುವುದು ಸೇರಿದಂತೆ ಹಲವಾರು ಅಕ್ರಮಗಳ ತಡೆಗೆ ಮುಖ್ಯಮಂತ್ರಿ ಆದಿತ್ಯ ಯೋಗಿನಾಥ್ ಕಳೆದ ವಾರ ಸುಗ್ರೀವಾಜ್ಞಾ ಜಾರಿಗೆ ತಂದಿದ್ದರು.

ಯೋಗಿ ಅವರು ಜಾರಿಗೆ ತಂದಿರುವ ಸುಗ್ರೀವಾಜ್ಞಾಗೆ ರಾಜ್ಯಪಾಲರಾದ ಆನಂದಿ ಬೇನ್ ಅವರು ಅಂಕಿತ ಹಾಕಿದ್ದಾರೆ ಎಂದು ಉತ್ತರಪ್ರದೇಶ ಸರ್ಕಾರ ಸ್ಪಷ್ಟಪಡಿಸಿದೆ. ಅನ್ಯಕೋಮಿನ ವ್ಯಕ್ತಿಗಳು ಮತಾಂತರ ಉದ್ದೇಶದಿಂದ ಬೇರೆ ಕೋಮಿನವರು ವಿವಾಹವಾಗಿ ನಂತರ ಬಲವಂತದಿಂದ ಮತಾಂತರ ಮಾಡಲು ಯತ್ನಿಸಿದರೆ ಅಂತಹವರು ಶಿಕ್ಷಾರ್ಹರಾಗುತ್ತಾರೆ.

ಬಿಜೆಪಿ ಸರ್ಕಾರಗಳು ಅಸ್ಥಿತ್ವದಲ್ಲಿರುವ ಕೆಲವು ರಾಜ್ಯಗಳಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ಮತಾಂತರಗೊಳಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಉತ್ತರಪ್ರದೇಶ ಸರ್ಕಾರ ಇಂತಹ ಕಠಿಣ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

Facebook Comments