ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ಕಡಿವಾಣಕ್ಕೆ ಸುಗ್ರೀವಾಜ್ಞೆ

ಈ ಸುದ್ದಿಯನ್ನು ಶೇರ್ ಮಾಡಿ

ಲಖನೌ, ಸೆ.18- ಲವ್ ಜಿಹಾದ್ ಮತ್ತು ಬಲವಂತ ಮತಾಂತರಕ್ಕೆ ಕಡಿವಾಣ ಹಾಕಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಶೀಘ್ರ ಸುಗ್ರೀವಾಜ್ಞೆ ಜಾರಿಗೊಳಿಸಲು ಸಜ್ಜಾಗಿದೆ.

ರಾಜ್ಯದಲ್ಲಿ ಇತ್ತೀಚೆಗೆ ಲವ್ ಜಿಹಾದ್ ಹೆಸರಿನಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರಗೊಳಿಸುವ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಇದಕ್ಕೆ ಕಡಿವಾಣ ಹಾಕಲು ನಿರ್ಧರಿಸಿದೆ.

ಅತಿ ಶೀಘ್ರದಲ್ಲೇ ಸುಗ್ರೀವಾಜ್ಞೆ ಹೊರಡಿಸ ಲಾಗುತ್ತದೆ ಎಂದು ಸರ್ಕಾರದ ಉನ್ನತ ಮೂಲ ಗಳು ತಿಳಿಸಿವೆ. ಈ ಮೂಲಕ ಲವ್ ಜಿಹಾದ್ ವಿರುದ್ಧ ಸುಗ್ರೀವಾಜ್ಞೆ ಜಾರಿ ಗೊಳಿಸುತ್ತಿರುವ ಪ್ರಥಮ ರಾಜ್ಯ ಎಂಬ ಹೆಗ್ಗಳಿ ಕೆಗೆ ಉತ್ತರ ಪ್ರದೇಶ ಪಾತ್ರವಾಗಲಿದೆ.

ಈ ಹಿಂದೆ ಕೋಮುಗಲಭೆಗೆ ಕಾರಣರಾದವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ನಷ್ಟ ಭರಿಸಲು ಪ್ರಥಮ ಬಾರಿಗೆ ಕ್ರಮ ಕೈಗೊಂಡಿದ್ದ ಉತ್ತರ ಪ್ರದೇಶ ಗೋವಧೆಯನ್ನು ತಡೆಗಟ್ಟಲು ಸಹ ಅತ್ಯಂತ ಪರಿಣಾಮಕಾರಿ ದಿಟ್ಟ ಹೆಜ್ಜೆ ಇರಿಸಿತ್ತು.

ಈಗ ಲವ್ ಜಿಹಾದ್ ಮತ್ತು ಹಿಂದೂಗಳ ಬಲವಂತ ಮತಾಂತರವನ್ನು ತಡೆಗಟ್ಟಲು ಸುಗ್ರೀವಾಜ್ಞೆ ಹೊರಡಿಸಲು ಸಜ್ಜಾಗಿದೆ.
ಇದು ಕಟ್ಟುನಿಟ್ಟಾಗಿ ಜಾರಿಗೆ ಬಂದರೆ ದೇಶದ ಇತರ ರಾಜ್ಯಗಳೂ ಸಹ ಇದನ್ನು ಅನುಸರಿಸುವ ಸಾಧ್ಯತೆ ಇದೆ.

Facebook Comments