ಪ್ರೀತಿ-ಮದುವೆ-ದೋಖಾ : ನ್ಯಾಯಕ್ಕಾಗಿ ಸಿಎಂ ಮೊರೆ ಹೋದ ಗರ್ಭಿಣಿ ಯುವತಿ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಸೆ.18- ಕೇಕ್ ಖರೀದಿಸಲು ಬರುತ್ತಿದ್ದ ಯುವತಿಯ ಮರಳು ಮಾಡಿ ಪ್ರೀತಿಸಿ ಮದುವೆಯೂ ಆದ ಬೇಕರಿ ಮಾಲೀಕ ಇದೀಗ 7 ತಿಂಗಳ ಗರ್ಭಿಣಿ ಪತ್ನಿಯನ್ನು ತೊರೆದು ಬೇರೊಂದು ವಿವಾಹವಾಗಿ ಮೋಸ ಮಾಡಿ ತಲೆ ಮರೆಸಿಕೊಂಡಿದ್ದು, ನ್ಯಾಯಕ್ಕಾಗಿ ಯುವತಿ ಮುಖ್ಯಮಂತ್ರಿಗಳ ಮೊರೆ ಹೋಗಿದ್ದಾರೆ.

ತುಮಕೂರು ತಾಲ್ಲೂಕಿನ ಬೆಳ್ಳಾವಿ ಗ್ರಾಮದ ಬಸ್ ನಿಲ್ದಾಣದಲ್ಲಿ ಪ್ರತಾಪ್ ಎಂಬಾತ ಬೇಕರಿ ನಡೆಸುತ್ತಿದ್ದನು. ಈ ಬೇಕರಿಗೆ ಆಗಾಗ್ಗೆ ಕೇಕ್ ತರಲು ಹೋಗುತ್ತಿದ್ದ  ಇದೇ ಗ್ರಾಮದ ದಿವ್ಯಾ ಎಂಬ ಯುವತಿಯನ್ನು ಪ್ರತಾಪ್ ಪರಿಚಯ ಮಾಡಿಕೊಂಡಿದ್ದು, ಅದು ಸ್ನೇಹಕ್ಕೆ ತಿರುಗಿ  ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ.

ನಂತರದ ದಿನಗಳಲ್ಲಿ ಪ್ರತಾಪ್ ಮತ್ತು ದಿವ್ಯಾ ರಿಜಿಸ್ಟ್ರಾರ್ ಮದುವೆ ಮಾಡಿಕೊಂಡಿದ್ದು ಅನ್ಯೋನ್ಯವಾಗಿಯೇ ಜೀವನ ನಡೆಸುತ್ತಿದ್ದರು ಎನ್ನಲಾಗಿದ್ದು, ಇದೀಗ ದಿವ್ಯಾ 7 ತಿಂಗಳ ಗರ್ಭಿಣಿಯಾಗಿದ್ದಾರೆ.  ಈ ನಡುವೆ ಪ್ರತಾಪ್ ಪತ್ನಿ ತೊರೆದು ಚಿಕ್ಕಮಗಳೂರಿನ ಬೇರೊಂದು ಯುವತಿ ಜತೆ ವಿವಾಹವಾಗಿದ್ದಾನೆ.

ಈ ವಿಷಯ ತಿಳಿದು ಕಂಗಲಾದ ದಿವ್ಯಾ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ನನ್ನ ಗಂಡನನ್ನು ಹುಡುಕಿಕೊಡಿ, ನನಗೆ ನ್ಯಾಯ ಒದಗಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ತನಗಾದ ಅನ್ಯಾಯದ ಬಗ್ಗೆ ನೊಂದ ಯುವತಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಗಂಡನನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ.

Facebook Comments

Sri Raghav

Admin