ಪೊಲೀಸರ ರಕ್ಷಣೆಯಲ್ಲಿ ಮದುವೆಯಾಗಿ ಮನೆ ಸೇರಿದ ಪ್ರೇಮಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Love-Marriage--01

ಕೆ.ಆರ್.ಪೇಟೆ, ಮೇ 31- ಕಳೆದ ಒಂದೂವರೆ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು ಸರಳ ವಿವಾಹವಾಗಿ ಪೊಲೀಸ್ ಮಧ್ಯಸ್ಥಿಕೆಯೊಂದಿಗೆ ಹುಡುಗನ ಮನೆಗೆ ತೆರಳಿದ್ದಾರೆ. ಕೆ.ಆರ್.ಪೇಟೆ ಪಟ್ಟಣದ ಸರಕಾರಿ ಪಾಲಿಟೆಕ್ನಿಕ್‍ನಲ್ಲಿ ಪ್ರಥಮ ವರ್ಷದ ಡಿಪೊ್ಲಮೋ ಓದುತ್ತಿದ್ದ ಸುಮಾ(19) ಮತ್ತು ಪಾಂಡವಪುರ ತಾಲೂಕಿನ ಅರಳುಕುಪ್ಪೆ ಗ್ರಾಮದ ಪ್ರಜ್ವಲ್ (23) ಪ್ರೇಮಿಸಿ ವಿವಾಹವಾದ ಪ್ರೇಮಿಗಳಾಗಿದ್ದಾರೆ. ಪಟ್ಟಣದ ಸರಕಾರಿ ಪಾಲಿಟೆಕ್ನಿಕ್‍ನಲ್ಲಿ ಪ್ರಥಮ ವರ್ಷದ ಡಿಪೊ್ಲಮೋ ಓದುತ್ತಿದ್ದ ಸುಮಾ(19) ಕೆ.ಆರ್.ಪೇಟೆ ಪಟ್ಟಣದ ತಮ್ಮ ಅಕ್ಕನ ಮನೆಗೆ ಆಗಾಗ್ಗೆ ಬರುತ್ತಿದ್ದ ಪ್ರಜ್ವಲ್ ನಡುವೆ ಸ್ನೇಹ ಬೆಳೆದು ಅದು ಪ್ರೇಮಾಂಕುರವಾಗಿದೆ.

ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪಟ್ಟಣದ ತನ್ನ ಅಕ್ಕನ ಮನೆಯಲ್ಲಿ ಓದುತ್ತಿದ್ದ ಪ್ರಜ್ವಲ್ ಪಿ.ಯು.ಸಿ. ಓದಿನ ನಂತರ ಮೈಸೂರಿನ ಖಾಸಗಿ ಕಂಪನಿಗೆ ಕೆಲಸಕ್ಕೆ ಹೋಗುತ್ತಿದ್ದರು. ಹುಡುಗಿ ಪಟ್ಟಣದ ಪಾಲಿಟಿಕ್ನಿಕ್ ಕಾಲೇಜಿಗೆ ಬರುತ್ತಿದ್ದಳು. ಇದ್ದಕಿದ್ದಂತೆಯೇ ಕಳೆದ ಒಂದು ವಾರದಿಂದ ಇಬ್ಬರು ಮನೆ ಬಿಟ್ಟು ನಾಪತ್ತೆಯಾಗಿ, ಮೇ 25 ರಂದು ಮಂಡ್ಯ ರಿಜಿಸ್ಟರ್ ಕಚೇರಿಯಲ್ಲಿ ರಿಜಿಸ್ಟರ್ ಮದುವೆ ಆಗಿದ್ದರು. ಈ ನಡುವೆ ಹುಡುಗಿಯ ಪೊೀಷಕರು ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಪಟ್ಟಣದ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದರು.

ಬೆಂಗಳೂರಿನಲ್ಲಿ ಸ್ವಲ್ಪ ದಿನವಿದ್ದ ಇವರು ಬುಧವಾರ ಪಟ್ಟಣದ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ರಿಜಿಸ್ಟರ್ ಮದುವೆಯಾಗಿರುವುದಾಗಿ ಹೇಳಿ ಮನೆಗೆ ಹೋಗಲು ತಿಳಿಸಿದರು. ಇವರಿಬ್ಬರು ಒಂದೇ ಗ್ರಾಮದವರಾಗಿದ್ದರಿಂದ ಇವರಿಬ್ಬರ ಪೊೀಷಕರನ್ನು ಠಾಣೆಗೆ ಕರೆಸಿ ಇಬ್ಬರೂ ಪ್ರಾಪ್ತ ವಯಸ್ಕರಾಗಿದ್ದು ಇಬ್ಬರೂ ಒಪ್ಪಿ ವಿವಾಹವನ್ನೂ ಸಹ ಆಗಿದ್ದಾರೆ ಹಾಗಾಗಿ ಎರಡೂ ಕುಟುಂಬದವರಿಗೆ ಸಬ್ ಇನ್ಸ್‍ಪೆಕ್ಟರ್ ಹೆಚ್.ಎಸ್.ವೆಂಕಟೇಶ್ ತಿಳುವಳಿಕೆ ಹೇಳಿ ನವ ದಂಪತಿಯನ್ನು ಹುಡುಗನ ಮನೆಗೆ ಕಳುಹಿಸಿಕೊಟ್ಟರು.

Facebook Comments

Sri Raghav

Admin