ಲವ್‍ಜಿಹಾದ್ ಕಡಿವಾಣಕ್ಕೆ ಅಗತ್ಯವಿದೆ ಮತಾಂತರ ವಿರೋಧಿ ಮಸೂದೆ

ಈ ಸುದ್ದಿಯನ್ನು ಶೇರ್ ಮಾಡಿ

# ಮಹಾಂತೇಶ್ ಬ್ರಹ್ಮ 
ಪ್ರೀತಿ ಎರಡೂವರೆ ಅಕ್ಷರಗಳ ಪದ. ಇದು ಎಲ್ಲಾ ಬಂಧನಗಳನ್ನು ಮೀರಿದ ಪವಿತ್ರ ಸಂಬಂಧ. ಪ್ರೀತಿಗೆ ಜಾತಿ ಇಲ್ಲ, ಧರ್ಮವಿಲ್ಲ, ಭಾಷೆ ಇಲ್ಲ. ಇದ್ಯಾವುದರ ಭೇದವಿಲ್ಲದೆ ನಿಷ್ಕಲ್ಮಶ ಭಾವದಲ್ಲೇ ಪ್ರೀತಿ ಮಾಡಿದ ಅದೆಷ್ಟೋ ಪ್ರೇಮಿಗಳು ಇಂದು ಇತಿಹಾಸದ ಪುಟಗಳಲ್ಲಿ ಅಮರರಾಗಿದ್ದಾರೆ. ನೀರಿಗಿಲ್ಲದ ಜಾತಿ, ಬೆಳಕಿಗಿಲ್ಲದ ಜಾತಿ, ಗಾಳಿಗಿಲ್ಲದ ಜಾತಿ ಪ್ರೀತಿಗೇಕೆ ಎಂದು ಹೋರಾಟ ಮಾಡಿ ಅದೆಷ್ಟೋ ಹುಡುಗ-ಹುಡುಗಿಯರು ಮನೆ ಬಿಟ್ಟು ಓಡಿ ಹೋಗಿ ಮದುವೆ ಮಾಡಿಕೊಳ್ಳುವವರ ಸಂಖ್ಯೆ ಬಹಳ ದೊಡ್ಡದಿದೆ.

ಈ ಜಗತ್ತಿನಲ್ಲಿ ಎಲ್ಲರೂ ಪ್ರೀತಿಸಬಹುದು. ಆದರೆ, ಎಲ್ಲರಿಗೂ ಪವಿತ್ರವಾದ ಪ್ರೀತಿ ಸಿಗುತ್ತದೆ ಎಂಬುದು ಖಾತ್ರಿ ಇಲ್ಲ. ಏಕೆಂದರೆ ಇದು ಕಂಪ್ಯೂಟರ್ ಜಗತ್ತು. ಈ 20ನೆ ಶತಮಾನದಲ್ಲಿ ಪ್ರೀತಿಗಿಂತ ಸ್ವಾರ್ಥವೇ ಹೆಚ್ಚು. ಪ್ರೀತಿಯ ಹೆಸರಲ್ಲಿ ನಡೆಯಬಾರದ ಅನೇಕ ಘಟನೆಗಳು ನಡೆಯುತ್ತವೆ. ಅದರಲ್ಲಿ ಲವ್ ಜಿಹಾದ್ ಸಹ ಒಂದು.

ಲವ್ ಜಿಹಾದ್ ಎಂದರೆ ಮುಸ್ಲಿಂ ಹುಡುಗ ಹಿಂದು ಹುಡುಗಿಯನ್ನು ಪ್ರೀತಿಸುವ ನಾಟಕವಾಡಿ ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಆಕೆಯನ್ನು ಮದುವೆ ಮಾಡಿಕೊಂಡು ಸ್ವಲ್ಪ ದಿನಗಳ ಕಾಲ ಆಕೆಯ ಜತೆ ಸಂಸಾರ ಮಾಡಿ ಸಕಲ ಸುಖಗಳನ್ನು ಅನುಭವಿಸಿ ಕೊನೆಗೆ ಆಕೆಗೆ ಕೊಡಬಾರದ ಚಿತ್ರಹಿಂಸೆ ಕೊಟ್ಟು ಅವಳೇ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿಗೆ ಆಕೆಯ ಮನಸ್ಥಿತಿ ಕುಗ್ಗಿಸಿ ಸೆಲ್ಫ್‍ಸುಸೈಡ್‍ಗೆ ದೂಡುವುದು.

ಇದಕ್ಕೆ ತಾಜ ಉದಾಹರಣೆ ಎಂದರೆ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್‍ಗೆ ಬಲಿಯಾಗಿದ್ದ ಹಿಂದು ಹುಡುಗಿ ಅಂಜಲಿ ತಿವಾರಿ ಅಲಿಯಾಸ್ ಆಯೇಷಾ ಚಿತ್ರಹಿಂಸೆಯನ್ನು ತಾಳಲಾರದೆ ಪೊಲೀಸ್ ಠಾಣೆ ಮುಂದೆಯೇ ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟಳಲ್ಲ ಪಾಪ, ಆ ನತದೃಷ್ಟೆ ಅಂಜಲಿ ತಿವಾರಿ ಮಾಡಿದ್ದ ದೊಡ್ಡ ತಪ್ಪೆಂದರೆ ಮುಸ್ಲಿಂ ಹುಡುಗನ ತಳಕು ಬಳುಕಿನ ಮಾತುಗಳಿಗೆ ಮರುಳಾಗಿ ಲವ್ ಜಿಹಾದ್‍ಗೆ ಬಲಿಯಾಗಿದ್ದು.

ಇಪ್ಪತ್ತು ವರ್ಷಗಳ ಕಾಲ ಕಣ್ರೆಪ್ಪೆಯಂತೆ ಜೋಪಾನವಾಗಿ ಹೆತ್ತು ಹೊತ್ತು ಸಾಕಿ ಸಲಹಿದ್ದ ಅಪ್ಪ-ಅಮ್ಮನನ್ನೇ ಬಿಟ್ಟು ಹಿಂದು ಧರ್ಮವನ್ನು ತಿರಸ್ಕರಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದು, ಆ ಪಾಪದ ಕೂಪದೊಳಗೆ ಹೋದಾಗಲೇ ಆಕೆಗೆ ಅನಿಸಿದ್ದು, ಮಾನಸಿಕವಾಗಿ ಕಾಡಿದ್ದೇನೆಂದರೆ ನಾನು ಜೀವನದಲ್ಲಿ ಮತ್ತೆ ಸರಿಮಾಡಿಕೊಳ್ಳಲಾಗದಂತಹ ತಪ್ಪು ಮಾಡಿಬಿಟ್ಟೆ. ಅದೇ ನೋವಿನಲ್ಲೇ ಬೆಂಕಿಯಲ್ಲಿ ಧಗಧಗನೆ ಉರಿದು ಬಾಳಿ ಬದುಕಬೇಕಾಗಿದ್ದ ಅಂಜಲಿ ತಿವಾರಿ ಪ್ರಾಣ ಬಿಟ್ಟಳಲ್ಲ ಆಕೆಯ ತಂದೆ-ತಾಯಿಗೆ ನ್ಯಾಯ ಕೊಡುವವರು ಯಾರು..?

ಈಗ ಮತ್ತೊಂದು ಲವ್ ಜಿಹಾದ್ ಪ್ರಕರಣ ದೇಶದ ತುಂಬಾ ದೊಡ್ಡ ಸದ್ದು ಮಾಡುತ್ತಿದೆ. ಹೆಸರು ನಿಖಿತಾ ತೋಮರ್. ಅಪ್ಪಟ ಹಿಂದು ಹುಡುಗಿ. ಹರಿಯಾಣದ ಫರಿದಾಬಾದ್‍ನಲ್ಲಿ ಮೊದಲ ವರ್ಷದ ಡಿಗ್ರಿ ಓದುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿ. ಪಿಯುಸಿಯಲ್ಲಿ 95% ಅಂಕಗಳನ್ನು ಗಳಿಸಿದ್ದ ರ್ಯಾಂಕ್ ಸ್ಟುಡೆಂಟ್. ಅಪ್ಪ ಕೂಲಿ ಕಾರ್ಮಿಕ, ತಾಯಿ ಗೃಹಿಣಿ. ಮನೆಯಲ್ಲಿ ಅಂತಹ ಅನುಕೂಲವಿಲ್ಲದಿದ್ದರೂ ಈಕೆಯ ವಿದ್ಯಾಭ್ಯಾಸಕ್ಕೆ ತಂದೆ-ತಾಯಿ ಏನೂ ಕೊರತೆ ಮಾಡಿರಲಿಲ್ಲ. ಇದೆಲ್ಲವನ್ನೂ ಅರಿತಿದ್ದ ನಿಖಿತಾ ಓದಿನಲ್ಲಿ ಸದಾ ಮುಂದು.

ಭವಿಷ್ಯದ ಬಗ್ಗೆ ಸುಂದರವಾದ ಕನಸುಗಳು. ಕೂಲಿ ಮಾಡಿ ಕಷ್ಟಪಟ್ಟು ಓದಿಸುತ್ತಿರುವ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಜತೆಗೆ ನಾನು ಚೆನ್ನಾಗಿ ಓದಿ ಏರ್‍ಫೆಪೊರ್ಸ್‍ಗೆ ಸೇರಿ ಲೆಫ್ಟಿನೆಂಟ್ ಸೇನಾಧಿಕಾರಿಯಾಗಿ ತಾಯಿ ಭಾರತಮಾತೆಯ ಸೇವೆ ಮಾಡಬೇಕು ಎಂದು ತನ್ನ ಗೆಳತಿಯರ ಜತೆ ಯಾವಾಗಲೂ ಮಾತನಾಡುತ್ತಿದ್ದಳು.

ಅದೇ ಗುರಿಯೊಂದಿಗೆ ತುಂಬಾ ಚೆನ್ನಾಗಿ ಓದುತ್ತಿದ್ದಳು ನಿಖಿತಾ. ಒಂದು ಗಾದೆ ಮಾತಿದೆಯಲ್ಲ, ರಸ್ತೆಯಲ್ಲಿ ನಾವು ಸರಿಯಾಗೇ ಹೋಗುತ್ತಿದ್ದರೂ ಅಕ್ಕ ಪಕ್ಕದವರು ಸರಿ ಇರಲ್ಲ..! ಹಾಗಾಯಿತು ನಿಖಿತಾ ಕಥೆ. ಇವಳ ಪಾಡಿಗೆ ಇವಳು ಓದು-ಬರಹ, ಕಾಲೇಜು, ಮನೆ, ಅಪ್ಪ-ಅಮ್ಮ, ಗೆಳತಿಯರು ಅಂತ ಹಾಯಾಗಿ ಇದ್ದ ಈ ಹುಡುಗಿಯ ಬೆನ್ನ ಹಿಂದೆ ಪ್ರೀತ್ಸೆ ಪ್ರೀತ್ಸೆ ಅಂತ ಹಳೆ ಸಿನಿಮಾಗಳ ವಿಲನ್ ರೀತಿ ಎಂಟ್ರಿ ಕೊಟ್ಟಿದ್ದು ತೌಸಿಫ್ ಎಂಬ ಕಾಂಗ್ರೆಸ್ ಪಕ್ಷದ ರಾಜಕೀಯ ಪ್ರಭಾವಿ ಮುಸ್ಲಿಂ ಕುಟುಂಬದ ಯುವಕ.

ನಿನ್ನನ್ನು ಬಹಳ ಹಚ್ಚಿಕೊಂಡು ಹುಚ್ಚನಂತೆ ಪ್ರೀತಿ ಮಾಡುತ್ತಿರುವೆ. ನಿನ್ನ ಕಂಡರೆ ನಂಗೆ ಅದೇನೋ ಒಂಥರ. ಗೋಡೆ ತರ, ಇಟ್ಟಿಗೆ ತರ ಅಂತ ಉರ್ದು ಹಿಂದಿ ಎರಡು ಮಿಕ್ಸ್ ಮಾಡಿ ರೈಲು ಬಿಡಲು ಶುರು ಮಾಡಿದ್ದಾನೆ. ಆದರೆ, ಇದ್ಯಾವುದಕ್ಕೂ ಕ್ಯಾರೇ ಎನ್ನದೆ ನಿಖಿತಾ ತನ್ನ ಓದಿನ ಕಡೆ ಗಮನ ಕೊಟ್ಟಿದ್ದಾಳೆ. ಇದರಿಂದ ಕೆರಳಿ ಕೆಂಡಾಮಂಡಲವಾದ ತೌಸಿಫ್ 2018ರಲ್ಲಿ ಅದೇ ಹಳೆ ಸಿನಿಮಾಗಳ ವಿಲನ್ ಸ್ಟೈಲ್ ನಲ್ಲಿ ನಿಖಿತಾಳನ್ನು ತನ್ನ ಕಾರಿನಲ್ಲಿ ಕಿಡ್ನಾಪ್ ಮಾಡಿ ಧಮ್ಕಿ ಹಾಕಿದ್ದಾನೆ.

ಈ ವಿಚಾರ ನಿಖಿತಾ ಮನೆಯವರಿಗೆ ಗೊತ್ತಾದಾಗ ಪೆÇಲೀಸ್ ಠಾಣೆಗೆ ದೂರು ಕೊಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಭಾವಿ ರಾಜಕಾರಣಿಗಳಾದ ತೌಸಿಫ್‍ಕುಟುಂಬದವರು ಇವರನ್ನು ಕರೆಸಿ ದೂರು ಕೊಡುವುದು ಬೇಡ. ನಮ್ಮ ಹುಡುಗನಿಗೆ ಬುದ್ಧಿ ಹೇಳಿ ನಿಮ್ಮ ಹುಡುಗಿಯ ತಂಟೆಗೆ ಬರದ ಹಾಗೇ ನಾವು ಸರಿ ಮಾಡುತ್ತೇವೆ ಎಂದು ಭರವಸೆ ನೀಡಿ ಕಳುಹಿಸಿದ್ದಾರೆ.

ಇದಕ್ಕೆ ಸಮ್ಮತಿಸಿದ ನಿಖಿತಾಳ ಬಡ ಕುಟುಂಬ ಎಲ್ಲವನ್ನೂ ಕ್ಷಮಿಸಿ ಸುಮ್ಮನಾಗುತ್ತಾರೆ. ಗುಳ್ಳೆನರಿ ಬುದ್ಧಿ ಕಲಿತಿದ್ದ ತೌಸಿಫ್ ಸ್ವಲ್ಪ ದಿನ ಸುಮ್ಮನೆ ಮೌನವಾಗಿದ್ದು, ಮತ್ತೆ ಅದೇ ಹಳೇ ಸಿನಿಮಾಗಳ ವಿಲನ್ ತರ ಎಂಟ್ರಿ ಕೊಟ್ಟು ನಹಿ ಚೋಡೆಂಗೆ ಅಂತ ಎರಡು ವರ್ಷಗಳ ಕಾಲ ಪ್ಯಾರ್ ಲವ್ ಪ್ರೀತಿ ಅಂತ ನಿಖಿತಾಳ ಪ್ರಾಣ ತಿಂದಿದ್ದಾನೆ. ನನ್ನ ಮದುವೆ ಮಾಡಿಕೋ ನಮ್ಮ ಮುಸ್ಲಿಂ ಧರ್ಮಕ್ಕೆ ಮತಾಂತರವಾಗು ನಿನ್ನ ಹಿಂದೂ ಹೆಸರನ್ನು ತೆಗೆದು ಹಾಕಿ ಮುಸ್ಲಿಂ ಹೆಸರನ್ನು ಇಟ್ಟುಕೋ ನಿನ್ನ ರಾಣಿ ತರ ನೋಡಿಕೊಳ್ಳುವೆ ಎಂದು ಪುಸಲಾಯಿಸಿದ್ದಾನೆ.

ಅಪ್ಪಟ ಹಿಂದೂ ಹುಡುಗಿ ನಿಖಿತಾ ಇವನ ಬಣ್ಣದ ಮಾತುಗಳಿಗೆ ಮರುಳಾಗುವುದೇ ಇಲ್ಲ. ಆಗ ತೌಸಿಫ್ ತಲೆಯಲ್ಲಿ ಬಂದದ್ದು ಮತ್ತದೇ ಹಳೇ ಸಿನಿಮಾಗಳಲ್ಲಿ ವಿಲನ್ ಮಾಡುವ ಕಿಡ್ನಾಪ್ ಐಡಿಯಾ. ಆದರೆ, ಈಗ ಒಂದು ಅಂತಿಮ ತೀರ್ಮಾನಕ್ಕೆ ಬಂದಿದ್ದ ತೌಸಿಫ್ ಕಿಸೆಯಲ್ಲಿ ರಿವಾಲ್ವಾರ್ ಒಯ್ದಿದ್ದ. ಬಲವಂತವಾಗಿ ಮದುವೆ ಮಾಡಿಕೊಳ್ಳಲು ಕಾರಿನಲ್ಲಿ ಕಿಡ್ನಾಪ್ ಮಾಡಲು ಹೋದ ತೌಸಿಫ್‍ಗೆ ನಿಖಿತಾ ಬಗ್ಗಿಲ್ಲ.

ಆಗಲೇ ಕಿಸೆಯಲ್ಲಿದ್ದ ಪಿಸ್ತೂಲಿನಿಂದ ನಿಖಿತಾಳ ತಲೆ, ಹೊಟ್ಟೆ, ಎದೆಗೆ ಗುಂಡು ಹಾರಿಸಿದ್ದಾನೆ. ಬದುಕಿನ ತುಂಬಾ ಬಣ್ಣಬಣ್ಣದ ಕನಸುಗಳನ್ನು ಕಟ್ಟಿಕೊಂಡು ಬಾಳಿ ಬದುಕಬೇಕಾಗಿದ್ದ ನಿಖಿತಾ ಗುಂಡೇಟಿನಿಂದ ಕುಸಿದುಬಿದ್ದು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ತೌಸಿಫ್ ಸ್ಥಳದಿಂದ ಕಾರಿನ ಸಮೇತ ಅದೇ ಹಳೇ ಸಿನಿಮಾದ ವಿಲನ್ ರೀತಿಯಲ್ಲಿಯೇ ಪರಾರಿಯಾಗಿದ್ದಾನೆ. ಈಗ ಪೊಲೀಸರು ಅವನ ಹುಡುಕಾಟದಲ್ಲಿದ್ದಾರೆ. ಆದರೆ, ಈಗ ನಿಖಿತಾಳ ಸಾವಿಗೆ ನ್ಯಾಯ ಕೊಡುವವರು ಯಾರು..?

ಜೀವಕ್ಕಿಂತ ಹೆಚ್ಚು ಪ್ರೀತಿಸಿ ಆಕೆಯನ್ನು ಅಂಗೈಯಲ್ಲಿ ಇಟ್ಟು ಜೋಪಾನ ಮಾಡಿದ್ದ ನಿಖಿತಾಳ ತಂದೆ-ತಾಯಿಗೆ ಸಮಾಧಾನ ಹೇಳುವವರು ಯಾರು..? ತೌಸಿಫ್ ಕುಟುಂಬ ಮೊದಲೇ ರಾಜಕೀಯದ ಕುಟುಂಬ. ಇಬ್ಬರು ಕಾಂಗ್ರೆಸ್ ಪಕ್ಷದ ಶಾಸಕರಿದ್ದಾರೆ. ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರಿಗೆ ಬಹಳ ಆಪ್ತವಾಗಿರುವ ಇವರು ತಮ್ಮ ರಾಜಕೀಯ ಪ್ರಭಾವ ಬಳಸಿ ತೌಸಿಫ್‍ನನ್ನು ಕೇಸಿನಿಂದ ಅದೇಗೋ ಬಚಾಯಿಸಿಕೊಳ್ಳುತ್ತಾರೆ. ಆಮೇಲೆ ಖಂಡಿತವಾಗಿ ನಿಖಿತಾಳ ತಂದೆ-ತಾಯಿಗಂತೂ ಎಳ್ಳು ಕಾಳಷ್ಟು ನ್ಯಾಯ ಸಿಗುವುದಿಲ್ಲ ಬಿಡಿ. ಅದು ಭ್ರಮೆ ಮಾತ್ರ.

ಆದರೆ ಪ್ರಶ್ನೆ, ಪದೇ ಪದೇ ಹಿಂದೂ ಯುವತಿಯರನ್ನು ಲವ್ ಜಿಹಾದ್ ಮುಖಾಂತರ ಮತಾಂತರ ಮಾಡುವ ಅವರನ್ನು ಹತ್ಯೆಗೈಯುವ ಈ ಜಿಹಾದಿಗಳ ಪಾಪ ಕೃತ್ಯಗಳಿಗೆ ಕೊನೆಯೇ ಇಲ್ಲವಲ್ಲ ಎಂಬುದು ಸಮಾಜ ಚಿಂತಕರ ನೋವು.

ಯಾವುದೋ ಒಂದು ಹಿಂದೂ ಸಂಘಟನೆ ಬೆಂಗಳೂರಿನಲ್ಲಿ ಸರ್ವೆ ಮಾಡಿದೆ. ಅವರ ರಿಪೆರ್ಟ್ ಪ್ರಕಾರ ಬೆಂಗಳೂರಿನಲ್ಲಿ 42 ಸಬ್ ರಿಜಿಸ್ಟ್ರಾರ್ ಕಚೇರಿಗಳಿವೆ. ಹಿಂದೂ ಯುವತಿಯರು ಮುಸ್ಲಿಂ ಯುವಕರನ್ನು ಮದುವೆ ಮಾಡಿಕೊಳ್ಳುವ ಕುರಿತು ಪ್ರತಿ ತಿಂಗಳು 600 ಕೇಸ್ ರಿಜಿಸ್ಟರ್ ಆಗುತ್ತಿವೆಯಂತೆ. ಇನ್ನು ಕೇರಳದಲ್ಲಿ ಲವ್ ಜಿಹಾದ್ ವ್ಯಾಪಕವಾಗಿ ನಡೆಯುತ್ತಿರುವುದು ಇಡೀ ವಿಶ್ವದಲ್ಲೇ ಸುದ್ದಿಯಾಗಿದೆ. ಸೈರೋ ಮಲಬಾರ್ ಕ್ಯಾಥೊಲಿಕ್ ಚರ್ಚ್‍ನ ಪಾದ್ರಿಯೊಬ್ಬರು ಐಸಿಸ್ ಸಂಘಟನೆಯನ್ನು ನಿಷೇಧ ಮಾಡಬೇಕೆಂದು ಕೇರಳದ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.

ಅದಕ್ಕೆ ಅವರು ಕೊಟ್ಟಿರುವ ಸ್ಪಷ್ಟ ಕಾರಣ ಹೀಗಿದೆ. ಲವ್ ಜಿಹಾದಿಗಳು ಟಾರ್ಗೆಟ್ ಮಾಡುವುದು ಹಿಂದೂ, ಸಿಖ್ ಮತ್ತು ಕ್ರೈಸ್ತ ಹೆಣ್ಣು ಮಕ್ಕಳನ್ನು. ಆದ್ದರಿಂದ ಐಎಸ್‍ಐನವರು ಪಿಎಫ್‍ಐ ಸಂಘಟನೆಯವರಿಗೆ ಫಂಡ್ ಕಳುಹಿಸುತ್ತಾರೆ. ಪಿಎಫ್‍ಐನವರು ಕ್ಯಾಂಪಸ್ ಫ್ರಂಟ್ ಎಂಬ ಸಂಸ್ಥೆ ನಿರ್ಮಾಣ ಮಾಡಿ ಅಲ್ಲಿ ಲವ್ ಜಿಹಾದಿಗಳನ್ನು ತಯಾರು ಮಾಡಲಾಗುತ್ತಿದೆ.

ಅಲ್ಲಿಂದ ತರಬೇತಿ ಪಡೆದ ಹುಡುಗರು ಕ್ರೈಸ್ತ ಹೆಣ್ಣು ಮಕ್ಕಳನ್ನು ವಿವಿಧ ಆಸೆ-ಆಕರ್ಷಣೆಗೆ ಒಳಪಡಿಸಿ ಅವರನ್ನು ಮತಾಂತರ ಮಾಡಿ ಮದುವೆ ಮಾಡಿಕೊಂಡು ಕೊನೆಗೆ ಐಎಸ್‍ಐ ಉಗ್ರರು ಅವರನ್ನು ಬಂಧನದಲ್ಲಿಟ್ಟು ಲೈಂಗಿಕ ತೃಷೆ ತೀರಿಸಿಕೊಳ್ಳಲು ಯುವತಿಯರನ್ನು ಬಳಸಿಕೊಳ್ಳಲಾಗುತ್ತಿದೆ.ಈಗಾಗಲೇ ಸಾವಿರಾರು ಕ್ರೈಸ್ತ ಹೆಣ್ಣುಮಕ್ಕಳು ಈ ಜಾಲಕ್ಕೆ ಬಲಿಯಾಗಿದ್ದಾರೆ ಎಂದು ತಮ್ಮ ಅರ್ಜಿಯಲ್ಲಿ ವಿವರವಾಗಿ ದಾಖಲಿಸಿದ್ದಾರೆ.

2010ರಲ್ಲಿ ಶಾಸಕರಾಗಿದ್ದ ಉಮನ್ ಚಾಂಡಿ ಕೇರಳದ ಅಸೆಂಬ್ಲಿಯಲ್ಲಿ ಇದರ ಬಗ್ಗೆ ಒಂದು ದೊಡ್ಡ ಹೋರಾಟವೇ ಮಾಡಿದ್ದರು. ಇನ್ನು ಉತ್ತರ ಪ್ರದೇಶದಲ್ಲಿ ಸೇವ್ ಡಾಟರ್, ಸೇವ್ ಇಂಡಿಯಾ ಎಂಬ ಅಭಿಯಾನಗಳು ಲವ್ ಜಿಹಾದಿಗಳ ವಿರುದ್ಧ ನಡೆಯುತ್ತಿವೆ. ಕೌ ಬೆಲ್ಟ್ ರಾಜ್ಯಗಳಾದ ಬಿಹಾರ್, ರಾಜಸ್ಥಾನ, ಉತ್ತರಾಖಂಡ್, ಜಾರ್ಖಂಡ್ ಮಧ್ಯಪ್ರದೇಶ ಇನ್ನೂ ಮುಂತಾದ ರಾಜ್ಯಗಳಲ್ಲಿ ಅಲ್ಲಿನ ಮಧ್ಯಮ ಮತ್ತು ಕೆಳವರ್ಗದ ಸಾವಿರಾರು ಅಮಾಯಕ ಹುಡುಗಿಯರನ್ನು ಲವ್ ಜಿಹಾದ್‍ಗೆ ತಳ್ಳಲ್ಪಡಲಾಗಿದೆ.

ಇದಕ್ಕೆಲ್ಲ ಕಡಿವಾಣ ಹಾಕಬೇಕೆಂದರೆ ಕೇಂದ್ರ ಸರ್ಕಾರ ಮತಾಂತರ ವಿರೋಧಿ ಬಿಲ್ ತಂದರೆ ಮಾತ್ರ ಅಮಾಯಕ ಹಿಂದೂ ಹೆಣ್ಣು ಮಕ್ಕಳನ್ನು ಲವ್ ಜಿಹಾದಿಗಳಿಂದ ರಕ್ಷಿಸಬಹುದು. ಆಗಲೇ ಇದಕ್ಕೊಂದು ಕಡಿವಾಣ ಹಾಕಲು ಸಾಧ್ಯ ಎಂಬುದು ಹಿಂದೂಗಳ ವಾದ.

Facebook Comments