ಪ್ರೇಮಿಗಳ ದಿನದ ಮುನ್ನ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಫೆ.13-ಪ್ರೇಮಿಗಳ ದಿನದ ಮುನ್ನಾ ದಿನವಾದ ಇಂದು ಪ್ರೇಮಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ ವೆಲ್ಲಹಳ್ಳಿ ವಾಸಿ ಮೇಘನಾ(20) ಸಾವಿಗೆ ಶರಣಾಗಿದ್ದಾರೆ.ಮೇಘನಾ ಹಾಗೂ ಮಣಿಕಂಠ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಜಾತಿ ಬೇರೆ ಬೇರೆ ಹಾಗಾಗಿ ಇವರ ಮದುವೆಗೆ ಯುವತಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು.

ಆದರೆ ಮನೆಯವರು ಮೇಘನಾಳನ್ನು ಒಪ್ಪಿಸಿ ಬೇರೊಬ್ಬ ಯುವಕನೊಂದಿ ವಿವಾಹನ ನಿಶ್ಚಿತಾರ್ಥ ಮಾಡಿಸಿದ್ದರು.ವಿಷಯ ತಿಳಿದ ಮಣಿಕಂಠ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನಿಗೆ ತಮ್ಮಿಬ್ಬರ ಪ್ರೀತಿ ವಿಷಯ ತಿಳಿಸಿ ನಂತರ ಮೇಘನಾಳಿಗೆ ದೂರವಾಣಿ ಕರೆ ಮಾಡಿ ತಾವಿಬ್ಬರೂ ಒಟ್ಟಾಗಿದ್ದು ಪೋಟೊವನ್ನು ಫೇಸ್‍ಬುಕ್‍ನಲ್ಲಿ ಹಾಕುವುದಾಗಿ ಬೆದರಿಕೆ ಒಡ್ಡಿದ್ದನಂತೆ.

ಇದರಿಂದ ಮನನೊಂದು ಮೇಘನ ಇಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಈ ಬಗ್ಗೆ ದೊಡ್ಡಕವಲಂದೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ನಾಪತ್ತೆಯಾಗಿರುವ ಮಣಿಕಂಠನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Facebook Comments