ಪ್ರೀತಿ ನಿರಾಕರಿಸಿದ ಯುವತಿ, ಭಗ್ನ ಪ್ರೇಮಿ ಆತ್ಮಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಕೊರಟಗೆರೆ, ಅ.14- ಪ್ರೀತಿ ನಿರಾಕರಿಸಿದ ಪ್ರಿಯತಮೆಗೆ ನೀನಿಲ್ಲದ ಜೀವನ ನನಗೆ ಬೇಡ. ನಾನು ಸಾಯುತ್ತೇನೆ ಎಂದು ಭಗ್ನಪ್ರೇಮಿಯೊಬ್ಬ ಕುತ್ತಿಗೆ ಕುಣಿಕೆ ಹಾಕಿಕೊಳ್ಳುವ ಫೋಟೋ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.

ತಾಲ್ಲೂಕಿನ ಕೋಳಾಲ ಹೋಬಳಿ ತೀತಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಡ್ಡೊಬನಹಳ್ಳಿ ಗ್ರಾಮದ ನಿವಾಸಿ ಚಂದ್ರು ಆತ್ಮಹತ್ಯೆ ಮಾಡಿಕೊಂಡ ಯುವಕ ಎನ್ನಲಾಗಿದೆ. ತುಮಕೂರಿನ ಖಾಸಗಿ ಕಾಲೇಜುವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ಪ್ರೀತಿಸುತ್ತಿದ್ದ ಹುಡುಗಿ ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂಬ ಕೊರಗು ಸಹಿಸಲಾಗದೆ ಆತ್ಮಹತ್ಯೆಗೆಶರಣಾಗಿ ದ್ದಾನೆ ಎನ್ನಲಾಗಿದೆ.

ಆತ್ಮಹತ್ಯೆಗೂ ಮುನ್ನ ವಾಟ್ಸಪ್‍ನಲ್ಲಿ ಪ್ರಿಯತಮೆಗೆ ಮೆಸೇಜ್ ಮಾಡಿದ್ದು, ಈ ವೇಳೆ ಪ್ರೇಮಿಯ ಪ್ರೀತಿಯನ್ನು ನಿರಾಕರಿಸಿದ್ದು, ಬೇರೊಬ್ಬನನ್ನು ಪ್ರೀತಿಸುತ್ತಿರುವುದಾಗಿ ಫೋಟೋ ಕಳುಹಿಸಲಾಗಿದೆ.

ಇದನ್ನು ಸಹಿಸಲಾಗದೆ ಅಘಾತವಾಗಿ ಅವಳಿಲ್ಲದ ಜೀವನ ಸಾಧ್ಯವಿಲ್ಲ ಎಂದು ಹೇಳಿ ತಂದೆತಾಯಿ ಹಾಗೂ ಗೆಳೆಯರಿಗೆ ಕೊನೆಯ ಸ್ಟೇಟಸ್‍ನಲ್ಲಿ ಧನ್ಯವಾದ ತಿಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Facebook Comments