ಸದ್ಯದಲ್ಲೇ ಸಾರ್ವಜನಿಗರಿಗೆ ಕಾಡಿದೆ ‘ಗ್ಯಾಸ್’ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ. 1- ಲಾಕ್‍ಡೌನ್ ಸಡಿಲಿಕೆ ಆಗುತ್ತಿರುವ ಸಂದರ್ಭದಲ್ಲಿ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಈಗಾಗಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು 4 ರಿಂದ 5 ರೂ.ಗಳವರೆಗೆ ಏರಿಕೆಯಾಗುವ ಸೂಚನೆಗಳಿರುವ ಬೆನ್ನಲ್ಲೇ ಎಲ್‍ಪಿಜಿ ಸಿಲಿಂಡರ್ ದರವೂ ಏರಿಕೆಯಾಗುವ ಸೂಚನೆಗಳಿವೆ.

ಈಗಾಗಲೇ ದೆಹಲಿಯಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಮೇಲೆ ಇಂಡೇನ್ ಕಂಪೆನಿಯು 11 .50 ರೂ.ಗಳನ್ನು ಹೆಚ್ಚಿಸಿರುವುದರಿಂದ ಗ್ರಾಹಕರಿಗೆ ಬೆಲೆ ಏರಿಕೆಯ ಬರೆ ಎಳೆದಂತಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗಾಗ್ಗೆ ದರಗಳ ಪರಿಷ್ಕರಣೆಯಾಗುತ್ತಲೇ ಇರುತ್ತದೆ, ಮೇ ತಿಂಗಳಿನಲ್ಲಿ ಎಲ್‍ಪಿಜಿ ದರದಲ್ಲಿ 153 ರೂ.ಗಳು ಇಳಿಕೆಯಾಗಿತ್ತು, ಆದರೆ ಈಗ 11 ರೂ.ಗಳ ಏರಿಕೆಯಾಗಿದೆ.

ಈ ನಡುವೆ ಹೆಚ್ಚು ಕೊರೊನಾ ಪೀಡಿತರ ಸಂಖ್ಯೆಯ ದೇಶಗಳ ಸಾಲಿನಲ್ಲಿ ಭಾರತವು 7ನೇ ಸ್ಥಾನಕ್ಕೇರಿರುವುದರಿಂದ ಮುಂದಿನ ದಿನಗಳಲ್ಲಿ ಆರ್ಥಿಕತೆಯು ಮತ್ತಷ್ಟು ಕುಸಿಯುವ ಭೀತಿಯಲ್ಲಿದ್ದು ಪೆಟ್ರೋಲ್, ಡೀಸೆಲ್, ಎಲ್‍ಪಿಜಿ ದರಗಳು ಏರಿಕೆಯಾಗುವ ಮೂಲಕ ಜನರ ಜೋಬಿಗೆ ಕತ್ತರಿ ಬೀಳಲಿದೆ.

Facebook Comments