ಬೆಳೆ ವಿಮೆ ಯೋಜನೆ ಅಭಿಪ್ರಾಯ ಕೋರಿ ರಾಜ್ಯಗಳಿಗೆ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.25- ಕೃಷಿಕರ ಬೆಳೆಗಳಿಗೆ ವಿಮೆ ಯೋಜನೆಯನ್ನು ಕಡ್ಡಾಯಗೊಳಿಸಬೇಕೇ ಅಥವಾ ಐಚ್ಛಿಕವನ್ನಾಗಿಸಬೇಕೇ ಎಂಬ ಬಗ್ಗೆ ಅಭಿಪ್ರಾಯ ಕೋರಿ ಎಲ್ಲಾ ರಾಜ್ಯ ಸರ್ಕಾರಗಳಿಗೂ ಪತ್ರ ಬರೆಯಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಇಂದು ಮಾಹಿತಿ ನೀಡಿದೆ.

ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರ ಲಿಖಿತ ಪ್ರಶ್ನೆಗೆ ಉತ್ತರಿಸಿದ ಕೃಷಿ ಖಾತೆ ಸಹಾಯಕ ಸಚಿವ ಪುರುಷೋತ್ತಮ ರೋಪಾಲಾ ಈ ಸಂಬಂಧ ನಿನ್ನೆ ಎಲ್ಲಾ ರಾಜ್ಯ ಸರ್ಕಾರಗಳಿಗೂ ಪತ್ರ ಬರೆದು ಅಭಿಪ್ರಾಯ ಕೋರಲಾಗಿದೆ. ಪ್ರಸ್ತುತ ಈ ಯೋಜನೆ ಕಡ್ಡಾಯ ವಾಗಿದೆ. ಆದರೆ ಕೆಲವು ರಾಜ್ಯಗಳು ಮತ್ತು ರೈತ ಸಂಘಟನೆಗಳು ಇದನ್ನು ಐಚ್ಛಿಕವನ್ನಾಗಿ ಮಾಡಬೇಕೆಂಬ ಬೇಡಿಕೆ ಇಟ್ಟಿದೆ. ಹೀಗಾಗಿ ಅಭಿಪ್ರಾಯ ಮತ್ತು ಸಲಹೆಗಳನ್ನು ಕೋರಿ ಎಲ್ಲಾ ರಾಜ್ಯಗಳಿಗೂ ಪತ್ರ ಬರೆಯಲಾಗಿದೆ ಎಂದರು.

Facebook Comments