‘ಕೈ’ಬಿಟ್ಟು ಟಿಎಂಸಿ ಸೇರಿದ ಗೋವಾ ಮಾಜಿ ಸಿಎಂ..!

ಈ ಸುದ್ದಿಯನ್ನು ಶೇರ್ ಮಾಡಿ

ಪಣಜಿ, ಸೆ. 27- ಗೋವಾದಲ್ಲಿ ಅಸ್ತಿತ್ವ ಕಳೆದುಕೊಂಡಿರುವ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‍ಗೆ ಮತ್ತೊಂದು ಶಾಕ್ ಎದುರಾಗಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಲುಜಿನ್‍ಹೊ ಫಾಲ್ಕಿರೋ ಅವರು ಇಂದು ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ.

ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಯವರೊಂದಿಗೆ ಮಾತುಕತೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬಂದಿರುವ ಲುಜಿನ್‍ಹೊ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷದ ಚಿನ್ಹೆಯಿಂದ ಸ್ರ್ಪಸಲಿದ್ದಾರೆ.

ಕಳೆದ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕೇವಲ 5 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದ್ದು , ಲುಜಿನ್‍ಹೊ ಫಾಲ್ಕಿರೋ ಅವರು ನವೆಲಿಮ್ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು.

2012ರ ನಂತರ ಗೋವಾದಲ್ಲಿ ಕಾಂಗ್ರೆಸ್ ಪಕ್ಷವು ಅಸ್ತಿತ್ವ ಕಳೆದುಕೊಂಡಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತಷ್ಟು ಹಿನ್ನೆಡೆ ಅನುಭವಿಸುವುದು ಖಚಿತವಾಗಿದ್ದು ಟಿಎಂಸಿ ಹಾಗೂ ಆಮ್‍ಆದ್ಮಿ ಪಕ್ಷವು ಆ ರಾಜ್ಯದಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಮುಂದಾಗಿದೆ.

Facebook Comments