ಕೇವಲ 49 ರೂ.ಗಳಿಗೆ ಲಾಭವಾಗಲಿದೆ ಕೊರೋನಾ ನಿಗ್ರಹ ಮಾತ್ರೆ ಕೋವಿಹಾಲ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.2-ಕೋವಿಡ್-19 ವೈರಾಣು ಸೋಂಕಿನ ಲಘು ಮತ್ತು ಸಾಧಾರಣ ಲಕ್ಷಣ ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಲುಪಿನ್ ಔಷಧಿ ತಯಾರಿಕಾ ಸಂಸ್ಥೆ ಅಭಿವೃದ್ದಿಗೊಳಿಸಿರುವ ಕೋವಿಹಾಲ್ಟ್ (ಫೆವಿ ಪಿರವಿರ್) ಮಾತ್ರೆ ಭಾರತದಲ್ಲಿ ನಿನ್ನೆಯಿಂದ ಲಭ್ಯವಿದೆ. ಒಂದು ಮಾತ್ರೆಗೆ 49 ರೂ.ಗಳಿಗೆ ದೊರೆಯುತ್ತದೆ.

ತುರ್ತು ಬಳಕೆಗಾಗಿ ಈ ಮಾತ್ರೆಯನ್ನು ಬಳಸಲು ಲುಪಿನ್ ಡ್ರಗ್ಸ್ ಕಂಪನಿಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿದೆ.

ಅಲ್ಪ ಮತ್ತು ಲಘು ಕೊರೊನಾ ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಸುರಕ್ಷಿತ ಮತ್ತು ಸಮರ್ಥ ರೀತಿಯಲ್ಲಿ ಬಳಕೆಗಾಗಿ ಕೋವಿಹಾಲ್ಟ್ ಮಾತ್ರೆಯನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದು ಲುಪಿನ್ ಸಂಸ್ಥೆ ತಿಳಿಸಿದೆ.

ನಿನ್ನೆಯಷ್ಟೇ ಸನ್ ಫಾರ್ಮಸ್ಯೂಟಿಕಲ್ಸ್ ಸಂಸ್ಥೆಯ ಫ್ಲೂಗಾರ್ಡ್ ಎಂಬ ಕೊರೊನಾ ನಿಯಂತ್ರಣ ಗುಳಿಗೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಒಂದು ಗುಳಿಗೆಗೆ 35 ರೂ.ಗಳನ್ನು ನಿಗದಿಗೊಳಿಸಲಾಗಿದೆ.

Facebook Comments

Sri Raghav

Admin