ಬಿಬಿಎಂಪಿ ಮಾಜಿ ಸದಸ್ಯ ಎಂ.ಶಿವರಾಜ್‍ಗೆ ಪಿತೃ ವಿಯೋಗ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.13- ಶಂಕರಮಠ ವಾರ್ಡ್‍ನ ಬಿಬಿಎಂಪಿ ಮಾಜಿ ಸದಸ್ಯ ಎಂ.ಶಿವರಾಜ್ ಅವರ ತಂದೆ ಮಹದೇವಪ್ಪ ಅವರು ನಿಧನರಾಗಿದ್ದು , ಇಂದು ಅವರ ಸ್ವಂತ ಊರಾದ ಮೈಸೂರಿನ ಮೇಗಳಾಪುರ ಬಳಿಯ ಮಾದವಗೆರೆ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಸಮಾಜ ಸೇವಕರು ಹಾಗೂ ರಂಗಭೂಮಿ ಕಲಾವಿದರೂ ಆಗಿದ್ದ ಮಹದೇವಪ್ಪ ಅವರು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ನಿಧನರಾಗಿದ್ದು , ಇಂದು ಕಮಲಾನಗರದ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

Facebook Comments