ಮಾಜಿ ಕ್ರಿಕೆಟ್ ಪಟು ಮಾಧವ್ ಆಪ್ಟೆ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.23- ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಕ್ರಿಕೆಟಿಗ ಮಾಧವ್ ಆಪ್ಟೆ (87)ಅವರು ವಾಣಿಜ್ಯ ನಗರಿಯ ಬ್ರೀಚ್‍ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

1952 ಹಾಗೂ 1953ರ ಋತುವಿನಲ್ಲಿ ಭಾರತ ತಂಡದ ಆರಂಭಿಕ ಆಟಗಾರರಾಗಿ ಗುರುತಿಸಿಕೊಂಡಿದ್ದ ಮಾಧವ್ ಆಪ್ಟೆ ಏಕೈಕ ಶತಕ ಸೇರಿದಂತೆ 542 ರನ್‍ಗಳನ್ನು ಬಾರಿಸಿದ್ದಾರೆ. ಎಡಗೈ ಶೈಲಿಯ ಬ್ಯಾಟ್ಸ್‍ಮನ್ ಆಗಿದ್ದ ಮಾಧವ್ 67 ಪ್ರಥಮ ದರ್ಜೆ ಪಂದ್ಯಗಳಲ್ಲಿ 6 ಸೆಂಚುರಿ ಹಾಗೂ 16 ಅರ್ಧಶತಕ ಸೇರಿದಂತೆ 3336 ರನ್‍ಗಳನ್ನು ಬಾರಿಸಿದ್ದಾರೆ.

ಮಾಧವನ್ ಆಪ್ಟೆ ಅವರ ನಿಧನಕ್ಕೆ ಖ್ಯಾತ ಕ್ರಿಕೆಟ್ ಅಂಕಣಕಾರ ಹರ್ಷ ಭೋಗ್ಲೆ, ಕ್ರಿಕೆಟಿಗರಾದ ಸಚಿನ್‍ತೆಂಡೂಲ್ಕರ್, ವಿನೋದ್‍ಕಾಂಬ್ಳಿ, ಯೂಸಫ್ ಪಠಾಣ್ ಸೇರಿದಂತೆ ಹಲವಾರು ದಿಗ್ಗಜರು ಸಂತಾಪ ಸೂಚಿಸಿದ್ದಾರೆ.

Facebook Comments