ಲೋಕಸಭೆಗೆ ಸ್ಪರ್ಧಿಸುವುದಿಲ್ಲ, ನನ್ನ ಟಾರ್ಗೆಟ್ ವಿಧಾನಸಭೆ : ಮಧು ಬಂಗಾರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.25-ನಾನು ಮುಂದೆ ಲೋಕಸಭೆಗೆ ಸ್ಪರ್ಧಿಸುವುದಿಲ್ಲ. ನನ್ನ ಟಾರ್ಗೆಟ್ ವಿಧಾನಸಭಾ ಚುನಾವಣೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೇರೆಲ್ಲೂ ಸ್ಪರ್ಧೆಮಾಡುವುದಿಲ್ಲ ಸೊರಬದಿಂದಲೇ ಸ್ಪರ್ಧಿಸುತ್ತೇನೆ. ಈ ಭಾರಿ ಸೊರಬದ ಜನ ನನ್ನ ಕೈಹಿಡಿಯುತ್ತಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.

ಹಿಂದಿನಂತೆ ಸೊರಬದ ಜೊತೆ ನನ್ನ ಸಂಬಂಧ ಮುಂದುವರಿಯಲಿದೆ ಎಂದು ಅಭಿಪ್ರಾಯಪಟ್ಟರು. ನಾರಾಯಣಗುರು ಸ್ಥಬ್ಧ ಚಿತ್ರ ತಿರಸ್ಕಾರ ವಿಚಾರವಾಗಿ ಕೇಳಿದ ಪ್ರಶ್ನೆಗೆ , ಒಂದು ಕಡೆ ಅವರನ್ನ ಬಿಜೆಪಿಯವರು ಪೂಜೆ ಮಾಡ್ತಾರೆ, ಮತ್ತೊಂದು ಕಡೆ ತಿರಸ್ಕರಿಸುತ್ತಾರೆ. ಇದು ಬಿಜೆಪಿಯವರ ಎಡಬಿಡಂಗಿ ತನ ಎಂದು ಟೀಕಿಸಿದರು.

ನಾರಾಯಣ ಗುರುಗಳು ಸಮಾಜ ಚಿಂತಕರು, ಅವರು ಜಾತೀಯತೆಯ ವಿರುದ್ಧವಾಗಿದ್ದವರು. ಆ ಜಾತಿ ಈ ಜಾತಿ ಎಂದು ನೋಡಿದವರಲ್ಲ. ಎಲ್ಲರೂ ನಮ್ಮವರೇ ಎಂದವರು. ಅಂತವರನ್ನ ಬಿಜೆಪಿ ಅಪಮಾನಿಸಿದೆ ಇದನ್ನ ನಾನು ತೀರ್ವವಾಗಿ ಖಂಡಿಸುತ್ತೇನೆ ನಾನು ಜೆಡಿಎಸ್ ಶಾಸಕನಾಗಿದ್ದಾಗಲೇ ನಾರಾಯಣ ಗುರು ಜಯಂತಿ ಬಗ್ಗೆ ಧ್ವನಿ ಎತ್ತಿದ್ದ.

ಆಗ ಸಿದ್ದರಾಮಯ್ಯನವರು ಘೋಷಿಸಿದರು. ನಾನು ರಾಜಕೀಯ ಕಾರಣಗಳ ಬಗ್ಗೆ ಮಾತನಾಡಲ್ಲ ಎಂದ ಅವರು, ಮುಂದೆ ಜನರೇ ಬಿಜೆಪಿಗೆ ಉತ್ತರ ಕೊಡ್ತಾರೆ ಎಂದರು.

Facebook Comments