ಜಾತಿ, ಧರ್ಮ ಬದಿಗೊತ್ತಿ ಶಿಕ್ಷಣ ನೀಡಿದ ಸಿದ್ದಗಂಗಾ ಶ್ರೀಗಳು : ಜೆ.ಸಿ.ಮಾಧುಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಜ.26- ಆರೋಗ್ಯ, ಶಿಕ್ಷಣ, ವಸತಿ ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡಲಾಗಿದೆ. ಶೈಕ್ಷಣಿಕವಾಗಿ ದೊಡ್ಡ ಕ್ರಾಂತಿಯನ್ನೇ ಮಾಡಿದ್ದು, ಸಿದ್ಧಗಂಗಾ ಮಠದ ಶ್ರೀಗಳು ಜಾತಿ, ಧರ್ಮ ಬದಿಗೊತ್ತಿ ಶಿಕ್ಷಣ ನೀಡಿದ ಹಿನ್ನೆಲೆಯಲ್ಲಿ ದೇಶವಿದೇಶಗಳಲ್ಕಿ ಅಕ್ಷರ ಕಲಿತವರಿದ್ದಾರೆ. ಅದೇ ರೀತಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯೂ ಸೇರಿದಂತೆ ಎಲ್ಲರೂ ಕ್ರಾಂತಿ ಮಾಡಿದ್ದಾರೆ. ಇದು ನಮ್ಮ ಜಿಲ್ಲಾಯ ಹೆಮ್ಮೆಯ ವಿಚಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕೇವಲ ರಾಜಕೀಯಕ್ಕಾಗಿ ಮಾತ್ರವಲ್ಲದೆ, ಆರ್ಥಿಕ, ಸಾಮಾಜಿಕವಾಗಿ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಭಾರತ ದೇಶವನ್ನು ಸ್ವಾತಂತ್ರ್ಯ ಪಡೆಯಲಾಯಿತು ಎಂದರು. ಸಂವಿಧಾನ ದೇಶದ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿ, ಏಕರೂಪ ಕಾನೂನು ರೂಪಿಸಿ. ಎಲ್ಲರಿಗೂ ಎಲ್ಲರಂತೆ ಬಾಳುವ ಹಕ್ಕನ್ನು, ಮತದಾನದ ಹಕ್ಕನ್ನು ನೀಡಿದೆ ಎಂದು ತಿಳಿಸಿದರು.

ವಿಶ್ವದಲ್ಲೇ ಭಾರತ ದೇಶ ಆಹಾರ ಸಾಮಾಗ್ರಿ ಶೇಖರಣೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದ್ದು, ಜಿಲ್ಲಾಯೂ ಶೈಕ್ಷಣಿನ ಅಭಿವೃದ್ಧಿಯಲ್ಲಿ ಮುಂದಿದೆ ಎಂದು ಹೇಳಿದರು. ಇದೇ ವೇಳೆ ಸಚಿವ ತೆರೆದ ಜೀಪಿನಲ್ಲಿ ಕವಾಯತು ತುಕಡಿಗಳನ್ನು ಪರಿವೀಕ್ಷಣೆ ಮಾಡಿದರು.

ರಾಜ್ಯ ಮೀಸಲು ಪೊಲೀಸ್ ಪಡೆ, ಗೃಹ ರಕ್ಷಕದಳ, ಮಹಿಳಾ ಪೊಲೀಸ್ ತಂಡ 1, ಮಹಿಳಾ ಪೊಲೀಸ್ ಪಡೆ 2, ಮಹಿಳಾ ಪೊಲೀಸ್ ಪಡೆ 3, ಅರಣ್ಯ ರಕ್ಷಕ ತಂಡ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ಪಡೆ, ಕಲ್ಪತರು ಪಡೆ ಶಿಸ್ತು ಬದ್ಧ ಪಥ ಸಂಚಲನ ನಡೆಸಿ, ಗೌರವ ಸಲ್ಲಿಸಿತು. ಡಿಎಆರ್ ಪೊಲೀಸ್ ಬ್ಯಾಂಡ್ ತಂಡದಿಂದ ರಾಷ್ಟ್ರ ಗೀತೆ ಹಾಗೂ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿನಿಯತು ನಾಡಗೀತೆ ಹಾಡಿದರು.

ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಜಿಲ್ಲಾಯ ಸಾಧಕರಿಗೆ ಸನ್ಮಾನ ನಡೆಸಿದ್ದರು. ಅಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಅಡಿಯಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ ಆಸ್ಪತ್ರೆಗಳಿಗೆ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್, ವಿಧಾನ ಪರಿಷತ್ ಸದಸ್ಯ ಕಾಂತರಾಜ, ತಿಪ್ಪೇಸ್ವಾಮಿ, ಮೇಯರ್ ಫರೀದ್ ಬೇಗಂ, ಜಿಪಂ ಅಧ್ಯಕ್ಷೆ ಲತಾ ರವಿಕುಮಾರ್, ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿ ಕೃಷ್ಣ, ಸಿಇಒ ಶುಭಾ ಕಲ್ಯಾಣ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Facebook Comments