ಸಿಎಎ ವಿರುದ್ಧದ ಹೋರಾಟ ವ್ಯವಸ್ಥಿತ ಪಿತೂರಿ : ಸಚಿವ ಮಾಧುಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಡಿ.25-ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟ ಮಾಡುತ್ತಿರುವುದು ಒಂದು ವ್ಯವಸ್ಥಿತ ಪಿತೂರಿ ಎಂದು ಕಿಡಿಕಾರಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಕೆಲವರನ್ನು ಎತ್ತಿಕಟ್ಟಿ ತೊಂದರೆ ಕೊಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಎ ಮತ್ತು ಎನ್‍ಆರ್‍ಸಿ ಕಾಯ್ದೆಗೂ ವ್ಯತ್ಯಾಸವಿದೆ. ಆದರೆ ಇದಕ್ಕೆ ಲಿಂಕ್ ಮಾಡಿ, ಹುನ್ನಾರ ಮಾಡಿ ತಪ್ಪು ಮಾಹಿತಿ ನೀಡಿ ಹೋರಾಟಕ್ಕಿಳಿಸುತ್ತಿದ್ದಾರೆ ಎಂದು ಹೇಳಿದರು.  ಧಾರ್ಮಿಕ ದೇಶಗಳೆಂದು ಘೋಷಿಸಿಕೊಂಡ ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರಿಗಾಗಿ ಸ್ವಲ್ಪ ಸಡಿಲಿಕೆ ನೀಡಲಾಗಿದೆ.

ಅವರಿಗೆ ಪೌರತ್ವ ನೀಡದಿದ್ದರೆ ಅವರು ಅಲ್ಲಿಗೂ ಹೋಗಲಾಗದೆ ಇಲ್ಲಿಯೂ ಇರಲಾರದೆ ತೊಂದರೆಯಾಗಲಿದೆ. ಹಾಗಾಗಿ ಅವರಿಗೆ ಪೌರತ್ವ ನೀಡಲು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ದೇಶ ವಿಭಜನೆ ಆದಾಗ ಅಲ್ಲಿಗೆ ಹೋಗಿ ಈಗ ಇಲ್ಲಿಗೆ ಬರ್ತೀವಿ ಅಂದ್ರೆ ಎಲ್ಲರಿಗೂ ಅವಕಾಶ ನೀಡಲು ಆಗಲ್ಲ. ಎನ್‍ಆರ್‍ಸಿ ಶುರುಮಾಡಿದ್ದೇ ಕಾಂಗ್ರೆಸ್‍ನವರು ಎಂದು ಹೇಳಿದ ಅವರು, ಓಟಿನ ಮೇಲೆ ಆಸೆ ಇಟ್ಟು ಕೊಂಡವರು ಶುರುಮಾಡಿರುವ ಕೆಲಸ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.

Facebook Comments