“ನಮ್ಮದು ರಾಜಾಹುಲಿ ಸರ್ಕಾರ, ಯಾವ ‘ಬಂಡೆ’ಗೂ ಜಗ್ಗಲ್ಲ”

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಆ.15- ನಮ್ಮದು ರಾಜಾಹುಲಿ ಸರ್ಕಾರ. ನಮ್ಮ ಮುಂದೆ ಡೈನಾಮಿಕ್ ಬಂಡೆ. ಆ ಬಂಡೆ, ಈ ಬಂಡೆ ಯಾವುದೂ ನಡೆಯುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬೆಂಗಳೂರಿನ ಗಲಭೆಯಲ್ಲಿ ಪಾಲ್ಗೊಂಡಿದ್ದ ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳನ್ನು ನಿಷೇಧ ಮಾಡುವ ಕುರಿತು ಸಚಿವ ಈಶ್ವರಪ್ಪ ಅವರು ಮಾತನಾಡಿರುವುದು ಯಾವ ಉದ್ದೇಶದಿಂದ ಎಂಬುದು ನನಗೆ ಗೊತ್ತಿಲ್ಲ ಎಂದರು.

ಜಮೀರ್ ಅಹಮದ್ ಅವರು ಒಬ್ಬ ಶಾಸಕನಾಗಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಮರೆತಿದ್ದಾರೆ. ವೈಯಕ್ತಿಕವಗಿ ನೋಡುವುದಾದರೆ ಆತ ನನಗೆ ಒಳ್ಳೆಯ ಸ್ನೇಹಿತ. ಆದರೆ ಏಕೆ ಇಂತಹ ನಿರ್ಧಾರ(ಗಲಭೆಯಲ್ಲಿ ಮೃತಪಟ್ಟ ಯುವಕರಿಗೆ 5 ಲಕ್ಷ ರೂ. ಕೊಡುವುದಾಗಿ ಹೇಳಿರುವುದು) ತೆಗೆದುಕೊಂಡಿದ್ದಾರೋ ನನಗೆ ಗೊತ್ತಿಲ್ಲ ಎಂದು ಹೇಳಿದರು.

ಸಮುದಾಯವನ್ನು ಓಲೈಸಿಕೊಳ್ಳಲು ಬೇರೆ, ಬೇರೆ ಮಾರ್ಗಗಳಿವೆ. ಅವರ ಇಂತಹ ನಡೆ ಸರಿಯಲ್ಲ ಎಂದರು. ದಿನೇಶ್ ಗುಂಡೂರಾವ್ ಅವರು ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆಗಳನ್ನು ಸಾಕ್ಷ ಕೊಟ್ಟು ನಿಷೇಧ ಮಾಡಬೇಕೆಂದು ಹೇಳಿರುವುದು ಹಾಸ್ಯಾಸ್ಪದ ಎಂದು ಮಾಧುಸ್ವಾಮಿ ಹೇಳಿದರು.

ಐದು ವರ್ಷಗಳ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದ ಅವಯಲ್ಲಿ ಇಂತಹ ಸಂಘಟನೆಗಳಿಂದ ಏನೇನು ಬೆಳವಣಿಗೆಗಳು ಆಗಿದ್ದವು ಎಂಬುದನ್ನು ದಿನೇಶ್ ಗುಂಡೂರಾವ್ ಅವರು ನೆನೆಪಿಸಿಕೊಳ್ಳಲಿ ಆಗ ಅರ್ಥವಾಗುತ್ತದೆ. ಮತದಾರರನ್ನು ಓಲೈಸಿಕೊಳ್ಳಲು ಈ ರೀತಿಯ ರಾಜಕಾರಣವನ್ನು ಮಾಡಬೇಕೆ ಎಂದು ಕುಟುಕಿದರು.

Facebook Comments

Sri Raghav

Admin