ವಿಧಾನಸಭೆಯಲ್ಲಿ ಸಚಿವ ಮಾಧುಸ್ವಾಮಿ ಮತ್ತು ಡಿ.ಕೆ.ಶಿ ನಡುವೆ ಮಾತಿನ ಚಕಮಕಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಅವಿಶ್ವಾಸ ನಿರ್ಣಯದ ಚರ್ಚೆಯ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಮಾತಿನಚಕಮಕಿ ನಡೆಯಿತು.

ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರೂ ಆದ ಹಿರಿಯ ಶಾಸಕ ಡಿ.ಕೆ.ಶಿವಕುಮಾರ್, ಲಕ್ಷಾಂತರ ಉದ್ಯೋಗಗಳು ಕಡಿತವಾಗಿವೆ. ಪಿಂಚಣಿ ಬಿಡುಗಡೆಯಾಗಿಲ್ಲ. ಈ ಸರ್ಕಾರ ಏನು ಮಾಡುತ್ತಿದೆ ಎಂದು ಕಿಡಿಕಾರಿದರು.

ಬಿಜೆಪಿಯಿಂದ ಆಯ್ಕೆಯಾದ 25 ಸಂಸದರಿಗೂ ಈ ಸರ್ಕಾರದ ಮೇಲೆ ವಿಶ್ವಾಸವಿದೆ. ಮುಖ್ಯಮಂತ್ರಿಯವರನ್ನು ಜೊತೆಯಲ್ಲಿ ಕರೆದುಕೊಂಡು ಪ್ರಧಾನಿ ಬಳಿ ಕರೆದುಕೊಂಡು ಹೋಗಿ ರಾಜ್ಯಕ್ಕೆ ಹೆಚ್ಚಿನ ಹಣ ಕೊಡಿಸುವ ಕೆಲಸ ಮಾಡಲಿಲ್ಲ ಎಂದು ಹೇಳಿದರು.

ರಾಜ್ಯದಿಂದ ಲಕ್ಷಾಂತರ ಕಾರ್ಮಿಕರು ನಡೆದು, ಬಸ್‍ನಲ್ಲಿ, ರೈಲಿನಲ್ಲಿ ಹೊರ ಹೋದರು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 50 ಸಾವಿರ ಕೋಟಿ ರೂಪಾಯಿ ಕೊಟ್ಟಿದ್ದಾರೆ. ಆದರೆ ಆ ಯೋಜನೆಗೆ ನಮ್ಮ ರಾಜ್ಯದಿಂದ ಒಬ್ಬರನ್ನು ಸೇರಿಸಿಕೊಂಡಿಲ್ಲ. ಬಿಹಾರ, ಜಾರ್ಖಾಂಡ್‍ ಸೇರಿದಂತೆ ಉತ್ತರ ಭಾಗದ ರಾಜ್ಯಗಳಿಗೆ

ಕರ್ನಾಟಕ ಭಾಗದ ರೈಲು ಮಾರ್ಗಗಳನ್ನು ಖಾಸಗಿಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ನಮ್ಮ ಒಬ್ಬ ಸಚಿವನು ಮಾತನಾಡಿಲ್ಲ. ಸರ್ಕಾರವೂ ಮಾತನಾಡಿಲ್ಲ, ಮುಖ್ಯಮಂತ್ರಿಯವರಿಗೆ ಈ ವಿಷಯ ಗೋತ್ತಿದೆಯೋ ಇಲ್ಲವೋ ಗೋತ್ತಿಲ್ಲ ಎಂದರು.

ವಸತಿ ಸಂಕೀರ್ಣ ಗುತ್ತಿಗೆ ಕಾಮಗಾರಿ ಯೋಜನೆಯ ಬಗ್ಗೆ ತನಿಖೆಗೆ ಒಪ್ಪಿಸಿ. ನಮ್ಮ ಮೇಲೆಲ್ಲಾ ತನಿಖೆ ನಡೆಯುತ್ತಿಲ್ಲವಾ, ಸಿಬಿಐಗೆ ನಿಮ್ಮ ಸರ್ಕಾರವೇ ಅನುಮತಿ ನೀಡಿಲ್ಲವೇ. ಅಧಿಕಾರ ಇಲ್ಲದವರ ಮೇಲೆ ಆರೋಪ ಮಾಡಲ್ಲ. ಖಾಸಗಿ ಟಿವಿ ರಸಹ್ಯ ಕಾರ್ಯಾಚರಣೆಯಲ್ಲಿ ಸತ್ಯಾಂಶ ಇಲ್ಲವೆಂದಾದ ಮೇಲೆ ಎಫ್‍ ಐ ಆರ್‍ ಹಾಕಿ ಒದ್ದು ಒಳಗೆ ಹಾಕಿ. ನಾವು ಸುಳ್ಳು ಹೇಳಿದ್ದರೆ ನಮ್ಮ ಮೇಲೂ ಕೇಸು ಹಾಕಿ. ಸವಾಲು ಸ್ವೀಕರಿಸಿ. ನೀವು ತಪ್ಪು ಮಾಡಿಲ್ಲ ಎಂದರೆ ಯಾಕೆ ಹೆದರಿಕೆ ಎಂದು ಹೇಳಿದರು.

ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಗಿಟ್ಟಿಸಲು ಬಿಜೆಪಿ ಶಾಸಕರು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಇರುವ ಆರು ಸ್ಥಾನಗಳಿಗೆ 40 ಮಂದಿ ಆಕಾಂಕ್ಷಿಗಳಿದ್ದಾರೆ. ಎಲ್ಲರೂ ಎದ್ದು ಭೀಮ, ಅರ್ಜುನರಂತೆ ವೀರಾವೇಶ ತೋರಿಸಿದ್ದಾರೆ. ನಿಮ್ಮ ಅಬ್ಬರವನ್ನು ಮುಖ್ಯಮಂತ್ರಿ ಗಮನಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಉತ್ತರ ನೀಡಿದ ಸಚಿವ ಮಾಧುಸ್ವಾಮಿ, ನನಗೆ ಒಬ್ಬ ವಿದ್ಯಾರ್ಥಿ ಕೇಳಿದ ಜೈಲಿಗೆ ಹೋಗಿ ಬಂದಾಗ ಮೆರವಣಿಗೆ ಮಾಡುತ್ತಾರಾ ಎಂದು ಕೇಳಿದ. ಕೆಲವರು ಹಾಗೇನಪ್ಪ ಎಂದು ನಾನು ಹೇಳಿದೆ ಎಂದಾಗಾ ಡಿ.ಕೆ.ಶಿವಕುಮಾರ್ ಕಿಡಿಕಿಡಿಯಾಗಿ ಪ್ರತಿಕ್ರಿಯಿಸಿದರು. ನೀವೆ ಮುಖ್ಯಮಂತ್ರಿ ಯಡಿಯೂರಪ್ ಅವರನ್ನು ಹಗರಣದಲ್ಲಿ ಸಿಲುಕುವಂತೆ ಮಾಡುತ್ತಿದ್ದೀರಿ ಎಂದು ಆರೋಪಿಸಿದರು.

ನೀವು ದೆಲ್ಲಿಗೆ ಹೋಗಿ ಬಂದ ಮೇಲೆ ಏನೇಲ್ಲಾ ಬೆಳವಣಿಗೆಯಾಗಿದೆ ಎಂದು ನನಗೂ ಗೋತ್ತಿದೆ. ನಾನು ನಿಮ್ಮ ಜೊತೆಯಲ್ಲಿ ಈ ಅಧಿವೇಶನಕ್ಕೆ ಬಂದೆ. ನನ್ನಂತೆ ನೀವೂ ಕೂಡ ಕೆಟ್ಟ ಪರಿಸ್ಥಿತಿಯಲ್ಲಿ ಇಲ್ಲಿಗೆ ಬಂದಿದ್ರಿ. ಆಮೇಲೆ ನಾನು ಎರಡು ಮೂರು ಬಾರಿ ಸೋಲು ಕಂಡೆ, ನಿಮಗೆ ಗೆಲ್ಲಲೂ ಏನೇಲ್ಲಾ ಬೇಕು ಅದೇಲ್ಲಾ ನಿಮ್ಮ ಬಳಿ ಇತ್ತು, ನನ್ನ ಬಳಿ ಇರಲಿಲ್ಲ. ನಿಮ್ಮ ಹತ್ತಿರ ಅದೇಲ್ಲಾ ಹೇಗೆ ಬಂತು ಎಂದು ನನಗೆ ಗೋತ್ತು.

ಬೇರೆಯವರ ಮೇಲೆ ಟೀಕೆ ಮಾಡುವಾಗ ತಾವೇನೋ ಎಂದು ನೋಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು. ಇದಕ್ಕೆ ಡಿ.ಕೆ.ಶಿವಕುಮಾರ್ ಆಕ್ರೋಶ ಭರಿತ ಉತ್ತರ ನೀಡಿದರು.

Facebook Comments

Sri Raghav

Admin