ಮಧ್ಯಪ್ರದೇಶ ಸಿಎಂ ಕೊರೊನಾದಿಂದ ಬಚಾವ್, ಆಸ್ಪತ್ರೆಯಿಂದ ಡಿಸ್ಚಾರ್ಜ್

ಈ ಸುದ್ದಿಯನ್ನು ಶೇರ್ ಮಾಡಿ

ಭೋಪಾಲ್, ಆ.5-ಬಿಜೆಪಿ ಹಿರಿಯ ಧುರೀಣ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವಾಣ್ ಡೆಡ್ಲಿ ಕೊರೊನಾದಿಂದ ಪಾರಾಗಿದ್ದಾರೆ.

ಕೋವಿಡ್-19 ವೈರಸ್ ಸೋಂಕಿನಿಂದ ಚೇತರಿಸಿಕೊಂಡ ಮುಖ್ಯಮಂತ್ರಿ ಅವರನ್ನು ಇಂದು ಬೆಳಗ್ಗೆ ಆಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡಲಾಗಿದೆ ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

11 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಮನೆಗೆ ಶಿವರಾಜ್ ಸಿಂಗ್ ಚೌಹಾಣ್ ಮನೆಗೆ ತೆರೆಳಿದ್ದಾರೆ. ಇನ್ನೂ ಒಂದು ವಾರ ಕಾಲ ಕ್ವಾರಂತೈನ್‍ನಿಲ್ಲಿ ಇದ್ದು ಆರೋಗ್ಯದ ಕಡೆ ನಿಗಾ ವಹಿಸುವಂತೆ ಮುಖ್ಯಮಂತ್ರಿ ಅವರಿಗೆ ವೈದ್ಯರು ಸಲಹೆ ಮಾಡಿದ್ದಾರೆ.

61 ವರ್ಷದ ಚೌಹಾಣ್ ಅವರಿಗೆ ಜುಲೈ 25ರಂದು ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ನಂತರ ಅವರು ಚಿಕಿತ್ಸೆಗೆ ಒಳಗಾಗಿದ್ದರು.

Facebook Comments

Sri Raghav

Admin