ನದಿಯಲ್ಲಿ ಮ್ಯಾಜಿಕ್ ಮಾಡಲು ಹೋದ ಜಾದೂಗಾರನ ಗತಿ ಏನಾಯ್ತು ಗೊತ್ತೇ..!

ಈ ಸುದ್ದಿಯನ್ನು ಶೇರ್ ಮಾಡಿ

ಕೊಲ್ಕತಾ(ಪಿಟಿಐ), ಜೂ.17- ಪಶ್ಚಿಮ ಬಂಗಾಳದ ಹೂಗ್ಲಿ ನದಿಯಲ್ಲಿ ಅತ್ಯಂತ ಅಪಾಯಕಾರಿ ಜಾದೂ ಚಮತ್ಕಾರ ಮಾಡಲು ಹೋದ ಜಾದೂಗಾರನೊಬ್ಬ ನಾಪತ್ತೆಯಾಗಿದ್ದು ಜಲ ಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಚಂಚಲ್ ಲಹಿರಿ (41) ಕಣ್ಮರೆಯಾಗಿದ್ದು, ಆತನ ಪತ್ತೆಗಾಗಿ ನದಿಯಲ್ಲಿ ತೀವ್ರ ಶೋಧ ನಡೆದಿದೆ. ನದಿಯ ನೀರಿನೊಳಗೆ ಬಂಧನದಿಂದ ಪಾರಾಗುವ ಚಮತ್ಕಾರವನ್ನು ಈತ ಪ್ರದರ್ಶಿಸಲು ನಿನ್ನೆ ಮಧ್ಯಾಹ್ನ ಹೂಗ್ಲಿ ನದಿಗೆ ಕಬ್ಬಿಣದ ಪಂಜರದೊಂದಿಗೆ ಇಳಿದ. ಆದರೆ ಈತ ಕೆಲವೇ ನಿಮಿಷಗಳಲ್ಲಿ ಕಣ್ಮರೆಯಾದ.

ನೂರಾರು ಪ್ರೇಕ್ಷಕರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ. ಆರು ವರ್ಷಗಳ ಹಿಂದೆ ಇದೇ ರೀತಿಯ ಚಮತ್ಕಾರ ಪ್ರದರ್ಶಿಸಿ ಚಂಚ ಲ್ ಯಶಸ್ವಿಯಾಗಿದ್ದರು. ಆದರೆ ನಿನ್ನೆ ನಡೆದ ರಿವರ್ ಮ್ಯಾಜಿಕ್ ಅವರಿಗೆ ಕೈ ಕೊಟ್ಟಿತು.

ಈವರೆಗೂ ಪತ್ತೆಯಾಗದ ಚಂಚಲ್ ನೀರು ಪಾಲಾಗಿರಬಹುದೆಂದು ಶಂಕಿಸಲಾಗಿದೆ. ಶೋಧ ಕಾರ್ಯ ಮುಂದುವರೆದಿದೆ.

Facebook Comments