ಗೋವಾದಿಂದ ಮತ್ತೆ ಮಹದಾಯಿ ಕ್ಯಾತೆ, 2-3 ದಿನಗಳಲ್ಲಿ ಸುಪ್ರೀಂಗೆ ಅರ್ಜಿ

ಈ ಸುದ್ದಿಯನ್ನು ಶೇರ್ ಮಾಡಿ

ಪಣಜಿ, ಫೆ.22- ಮಹದಾಯಿ (ಮಾಂಡೋವಿ ನದಿ) ನೀರು ಹಂಚಿಕೆ ಕುರಿತು ಗೋವಾ ಮತ್ತು ಕರ್ನಾಟಕ ನಡುವೆ ಉದ್ಭವಿಸಿರುವ ವಿವಾದ ಈಗ ಮತ್ತೊಂದು ಕಾನೂನು ಸಮರಕ್ಕೆ ಕಾರಣವಾಗಲಿದೆ. ಮಹದಾಯಿ ನ್ಯಾಯಾಧೀಕರಣದ ಐತೀರ್ಪಿನ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂಕೋರ್ಟ್ ನೀಡಿದ ಆದೇಶಕ್ಕೆ ತಡೆ ನೀಡುವಂತೆ ಕಾನೂನು ಹೋರಾಟ ನಡೆಸಲು ಗೋವಾ ಸರ್ಕಾರ ಮುಂದಾಗಿದೆ.

ಸುಪ್ರೀಂಕೋರ್ಟ್‍ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಎರಡು-ಮೂರು ದಿನಗಳಲ್ಲಿ ಆದೇಶಕ್ಕೆ ತಡೆ ಕೋರಿ ಸುಪ್ರೀಂಕೋಟ್‍ಗೆ ಅರ್ಜಿ ಸಲ್ಲಿಸಲಾಗುವುದು. ಮಹದಾಯಿ ಕಾಮಗಾರಿ ಕೈಗೆತ್ತಿಕೊಳ್ಳದಂತೆ ಕರ್ನಾಟಕಕ್ಕೆ ಸೂಚಿಸಬೇಕೆಂದು ಕೋರಲಾಗುವುದು ಎಂದು ಹೇಳಿದರು.

ಈ ಹಿಂದೆ ಕೋರ್ಟ್ ಯಥಾಸ್ಥಿತಿ ಮುಂದುವರಿಸಲು ಆದೇಶಿದ್ದರೂ ಕರ್ನಾಟಕ ಕಾಮಗಾರಿ ನಡೆಸಿ ನದಿ ಹರಿಯುವ ದಿಕ್ಕನ್ನು ತಿರುವು ಮಾಡಿದೆ ಎಂದು ನಾನು ವಿಧಾನಸಭೆಯಲ್ಲಿಯೇ ಹೇಳಿದ್ದಾರೆ. ಕೋರ್ಟ್ ಆದೇಶ ಉಲ್ಲಂಘಿಸುವ ಚಾಳಿ ಕರ್ನಾಟಕ್ಕೆ ಇದೆ ಎಂದು ಸಾವಂತ್ ಆರೋಪಿಸಿದ್ದಾರೆ.

ಸುಪ್ರೀಂಕೋರ್ಟ್ ಮೊನ್ನೆ ನೀಡಿರುವ ಆದೇಶದಿಂದ ಗೋವಾಗೆ ಹಿನ್ನಡೆಯಾಗಿಲ್ಲ. ಜುಲೈನಲ್ಲಿ ಅಂತಿಮ ವಿಚಾರಣೆ ಇದೆ. ನಾವು ಬಲವಾದ ವಾದ ಮಂಡಿಸಲಿದ್ದೇವೆ ಎಂದು ಅವರು, ಪ್ರತಿಪಕ್ಷಗಳೂ ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದರು.

ಐತೀರ್ಪಿನ ಅಧಿಸೂಚನೆ ಹೊರಡಿಸುವತೆ ಗುರುವಾರವಷ್ಟೇ ಸುಪ್ರೀಂಕೋರ್ಟ್ ಆದೇಶ ನೀಡಿತ್ತು ಹಾಗೂ ಮಹದಾಯಿ ಐತೀರ್ಪನ್ನು ಪ್ರಶ್ನಿಸಿ ಗೋವಾ, ಕರ್ನಾಟಕ ಹಾಗೂ ಮಹಾರಾಷ್ಟ್ರ ಸಲ್ಲಿಸಿದ್ದ ಅರ್ಜಿಯನ್ನು ಜುಲೈ 15ರಂದು ವಿಚಾರಣೆ ನಡೆಸುವುದಾಗಿ ಹೇಳಿತ್ತು.

Facebook Comments

Sri Raghav

Admin