ಇದ್ದಕ್ಕಿದ್ದಂತೆ ಛಿದ್ರವಾಯ್ತು 906 ವರ್ಷಗಳ ಪುರಾತನ ಮಹಾಕಾಳಿ ವಿಗ್ರಹ..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ನ.20- ಸುಮಾರು 906 ವರ್ಷಗಳ ಇತಿಹಾಸಹೊಂದಿರುವ ಬೇಲೂರು ರಸ್ತೆಯ ದೊಡ್ಡಗದವಳ್ಳಿ ಲಕ್ಷ್ಮೀದೇವಾಲಯದಲ್ಲಿರುವ ಮಹಾಕಾಳಿ ವಿಗ್ರಹ ಇದ್ದಕ್ಕಿದ್ದಂತೆ ಛಿದ್ರವಾಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಹಾಸನ-ಬೇಲೂರು ರಸ್ತೆಯ ಹಗರೆ ಬಳಿ ಇರುವ ಪುರಾತನ ಲಕ್ಷ್ಮೀದೇವಾಲಯದಲ್ಲಿ ಮಹಾಕಾಳಿ ವಿಗ್ರಹವಿತ್ತು.

ಈ ವಿಗ್ರಹ ಕೊಲ್ಲಾಪುರದ ಮಹಾಲಕ್ಷ್ಮಿ ವಿಗ್ರಹಕ್ಕೆ ಸ್ವಾಮ್ಯತೆ ಇತ್ತು. ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಒಳಪಟ್ಟಿದ್ದು, ಇದೀಗ ಈ ವಿಗ್ರಹ ಹಾನಿಗೀಡಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಈ ಪುರಾತನ ದೇವಾಲಯಕ್ಕೆ ಪ್ರತಿನಿತ್ಯ ಹಲವಾರು ಪ್ರವಾಸಿಗರು ಬಂದು ದೇವರ ದರ್ಶನ ಪಡೆಯುತ್ತಿದ್ದರು. ಇದ್ದಕ್ಕಿದ್ದಂತೆ ವಿಗ್ರ ಭಗ್ನವಾಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಒಂದು ಕಡೆ ಕಳ್ಳತನ ಶಂಕೆ ವ್ಯಕ್ತವಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದರು.

Facebook Comments