ಮಹಾಲಕ್ಷ್ಮಿಲೇಔಟ್‍ನಲ್ಲಿ ಜೆಡಿಎಸ್ ಪಾದಯಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.18- ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಇಂದು ಪಾದಯಾತ್ರೆ ನಡೆಸಿತು. ಕ್ಷೇತ್ರದ ವೀರಾಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಶಂಕರಮಠದ ವೃತ್ತದವರೆಗೂ ಬೆಂಗಳೂರು ನಗರದ ಜೆಡಿಎಸ್ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ, ಮತದಾರರಿಗೆ ಕರಪತ್ರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆರ್.ಪ್ರಕಾಶ್, ಎರಡು ಬಾರಿ ಈ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದವರು ಈಗ ಪಕ್ಷ ತೊರೆದಿದ್ದಾರೆ.  ಅವರಿಗೆ ಪಕ್ಷ ಹಾಗೂ ಕ್ಷೇತ್ರದ ನಾಗರಿಕರ ಪರವಾಗಿ 27 ಪ್ರಶ್ನೆಗಳನ್ನು ಕೇಳಿರುವ ಕಿರುಹೊತ್ತಿಗೆ ತಂದಿದ್ದೇವೆ. ಪಕ್ಷದಿಂದ ಅವರಿಗಾಗಿರುವ ಲಾಭ ಮತ್ತು ಪಕ್ಷಕ್ಕೆ ಅವರ ಕೊಡುಗೆ ಏನು ? ಪಕ್ಷದಿಂದ ಅವರಿಗೆ ಏನು ತೊಂದರೆಯಾಗಿದೆ ಎಂಬಿತ್ಯಾದಿ ಪ್ರಶ್ನೆಗಳು ಅದರಲ್ಲಿದೆ ಎಂದರು.

ರಾಜಕೀಯ ಲಾಭಕ್ಕಾಗಿ ಅವರು (ಗೋಪಾಲಯ್ಯ) ಪಕ್ಷದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಪಾದಯಾತ್ರೆ ನಡೆಸಲಾಯಿತು ಎಂದರು.
ಮಾಜಿ ಉಪಮೇಯರ್ ಭದ್ರೇಗೌಡ, ಮಹಾಲಕ್ಷ್ಮಿಲೇಔಟ್ ಪಕ್ಷದ ಅಧ್ಯಕ್ಷ ಚಂದ್ರೇಗೌಡ, ಪಕ್ಷದ ಮುಖಂಡರಾದ ದೇವರಾಜು, ನಾರಾಯಣಸ್ವಾಮಿ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Facebook Comments