ಹೋಟೆಲ್ ಉದ್ಯಮಿ ಮೇಲೆ ಹಲ್ಲೆ, ದರೋಡೆ ನಡೆಸಿದಲ್ಲದೆ 8 ತಿಂಗಳ ಗರ್ಭಿಣಿ ಮೇಲೆ 8 ಮಂದಿ ಗ್ಯಾಂಗ್‍ರೇಪ್

ಈ ಸುದ್ದಿಯನ್ನು ಶೇರ್ ಮಾಡಿ

Gang-Rape

ಮುಂಬೈ/ಸಾಂಗ್ಲಿ, ಆ.3-ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂಥ ನೀಚ ಕೃತ್ಯ ನಡೆದಿದೆ. ಹೋಟೆಲ್ ಮಾಲೀಕನೊಬ್ಬನ ಮೇಲೆ ಹಲ್ಲೆ ನಡೆಸಿ ನಗ-ನಾಣ್ಯ ದರೋಡೆ ಮಾಡಿದ ಎಂಟು ಜನ ದುಷ್ಕರ್ಮಿಗಳು, 8 ತಿಂಗಳ ಗರ್ಭಿಣಿ ಮೇಲೆ ಸಾಮೂಹಿತ ಅತ್ಯಾಚಾರ ಎಸಗಿದ್ದಾರೆ.  ತಮ್ಮ ಹೋಟೆಲ್ ವ್ಯಾಪಾರಕ್ಕಾಗಿ ಸಹಾಯಕರನ್ನು ನೇಮಕ ಮಾಡಿಕೊಳ್ಳಲು ಸಾಂಗ್ಲಿಯ ತಸ್‍ಗಾಂವ್‍ನ ತುರ್ಚಿ ಫಾಟಾ ಎಂಬ ಪ್ರದೇಶಕ್ಕೆ ಈ ದಂಪತಿ ತೆರಳಿದ್ದಾಗ ಈ ಹೀನ ಕೃತ್ಯ ನಡೆದಿದೆ.

ನಿಮ್ಮ ಹೋಟೆಲ್ ವ್ಯವಹಾರಕ್ಕಾಗಿ ನೆರವು ನೀಡಲು ಸಹಾಯಕರಾಗಿ ದಂಪತಿಯನ್ನು ನಾನು ಹುಡುಕಿದ್ದೇನೆ. ಅವರಿಗೆ ಮುಂಗಡ 20,000 ರೂ.ಗಳೊಂದಿಗೆ ತುರ್ಚಿ ಫಾಟಾಗೆ ಬರುವಂತೆ ಮುಕುಂದ ಮಾನೆ ಎಂಬಾತ ಹೊಟೇಲ್ ಮಾಲೀಕನಿಗೆ ತಿಳಿಸಿದೆ.  ಅದರಂತೆ ಆತ ತನ್ನ 20 ವರ್ಷದ ಗರ್ಭಿಣಿ ಪತ್ನಿಯೊಂದಿಗೆ ಕಾರಿನಲ್ಲಿ ಆ ಸ್ಥಳಕ್ಕೆ ಹೋದರು. ಆದರೆ ಅಲ್ಲಿ ಮುಕಂದ ಮಾನೆ ಮತ್ತು ಇನ್ನೂ ಏಳು ಜನರು ಇದ್ದರು. ಹೋಟೆಲ್ ಮಾಲೀಕರ ಕಾರಿನಿಂದ ಇಳಿಯುತ್ತಿದ್ದಂತೆ ಆತನ ಮೇಲೆ ಪೈಪ್‍ಗಳು ಮತ್ತು ಕೋಲುಗಳಿಂದ ಹಲ್ಲೆ ನಡೆಸಿದ ಗುಂಪು ಹಣ, ಚಿನ್ನಾಭರಣ ಮತ್ತಿತರ ವಸ್ತುಗಳನ್ನು ದರೋಡೆ ಮಾಡಿ ನಂತರ ಕಾರಿನಲ್ಲಿ ಆತನನ್ನು ಕೂಡಿ ಹಾಕಿದರು. ನಂತರ ಆತನ ಪತ್ನಿಯನ್ನು ಎಳೆದೊಯ್ಡು ಸಾಮೂಹಿಕ ಅತ್ಯಾಚಾರ ಎಸಗಿದರು.

ಈ ಕೃತ್ಯ ನಡೆಸಿದ ನಂತರ ನಾವು ಸ್ಥಳೀಯವಾಗಿ ತುಂಬಾ ಪ್ರಭಾವಿಗಳು, ನೀವು ಪೊಲೀಸರಿಗೆ ದೂರು ನೀಡಿದರೂ ಏನೂ ಪ್ರಯೋಜನವಾಗುವುದಿಲ್ಲ ಎಂದು ಎಚ್ಚರಿಕೆ ನೀಡಿ ಪರಾರಿಯಾದರು.  ನಂತರ ಸಂತಸ್ತ್ರ ದಂಪತಿ ತಸ್‍ಗಾಂವ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಎಂಟು ಆರೋಪಿಗಳಲ್ಲಿ ಮುಕುಂದ್ ಮಾನೆ, ಸಾಗರ್, ಜಾವೇದ್ ಖಾನ್ ಮತ್ತು ವಿನೋದ್ ಅವರ ಹೆಸರುಗಳನ್ನು ತಿಳಿಸಲಾಗಿದೆ.  ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ.

Facebook Comments

Sri Raghav

Admin