ಮಹಾರಾಷ್ಟ್ರ ಕಟ್ಟಡ ಕುಸಿತ ದುರಂತ : ಇಬ್ಬರ ಸಾವು, ನಾಪತ್ತೆಯಾದವರಿಗೆ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಆ.25- ಮಹಾರಾಷ್ಟ್ರದ ರಾಯ್‍ಗಢ ಜಿಲ್ಲೆಯಲ್ಲಿ ನಿನ್ನೆ ಸಂಭವಿಸಿದ ಐದು ಅಂತಸ್ತುಗಳ ಕಟ್ಟಡ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ.

ಈ ದುರ್ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದು, 18 ಮಂದಿ ಈಗಲೂ ಕಣ್ಮರೆಯಾಗಿದ್ದಾರೆ. ನಾಪತ್ತೆಯಾಗಿರುವವರಿಗಾಗಿ ಕಟ್ಟಡದ ಭಗ್ನಾವಶೇಷಗಳಲ್ಲಿ ರಕ್ಷಣಾ ಕಾರ್ಯಕರ್ತರು ತೀವ್ರ ಶೋಧ ಮುಂದುವಿಸಿದ್ದಾರೆ.

ಕಟ್ಟಡ ಕುಸಿತ ದುರಂತದಲ್ಲಿ ಈವರೆಗೆ ಇಬ್ಬರು ಮೃತಪಟ್ಟಿದ್ದಾರೆ. ಎಂಟು ಜನರನ್ನು ಈವರೆಗೆ ರಕ್ಷಿಸಲಾಗಿದೆ. ಮಕ್ಕಳೂ ಸೇರಿದಂತೆ 19 ಮಂದಿ ಭಗ್ನಾವಶೇಷಗಳ ಅಡಿ ಸಿಲುಕಿದ್ದು, ಅವರ ರಕ್ಷಣೆ ಕಾರ್ಯ ಮುಂದುವರಿದಿದೆ ಎಂದು ರಾಯಗಢ್ ಪೆÇಲೀಸ್ ವರಿಷ್ಠಾಕಾರಿ ಅನಿಲ್ ಪರಸ್ಕರ್ ತಿಳಿಸಿದ್ದಾರೆ.

ಪ್ರಧಾನಿ ಭರವಸೆ : ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಅಗತ್ಯವಾದ ಎಲ್ಲ ನೆರವು ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
ಗುತ್ತದೆ.

Facebook Comments

Sri Raghav

Admin