ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ : ಇಲ್ಲಿದೆ ಕಾಲ್ಪನಿಕ ಚರ್ಚೆ ಮತ್ತು ವಾಸ್ತವಿಕತೆ

ಈ ಸುದ್ದಿಯನ್ನು ಶೇರ್ ಮಾಡಿ

ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ,  ಕನ್ನಡ ಪರ ಹೋರಾಟಗಾರರು, ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರು ಸೇರಿದಂತೆ ಬಹುತೇಕ ಎಲ್ಲರೂ ಮಹಾಜನ್ ವರದಿಯೇ ಅಂತಿಮ ಎಂದು ಪದೇ ಪದೇ ಪ್ರಸ್ತಾಪಿಸುತ್ತಿರುವ ಸಂದರ್ಭದಲ್ಲಿ ಮಹಾಜನ್ ವರದಿಯ ವಾಸ್ತವಿಕತೆ ಮತ್ತು ಅದರ ಅಪ್ರಸ್ತುತತೆಯ ಬಗ್ಗೆ  ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಅವರು ಈ ಸಂಜೆಗೆ  ವಿಶೇಷವಾಗಿ ನಿರೂಪಿಸಿದ್ದಾರೆ.

ಮಹಾಜನ್ ವರದಿಯೇ ಅಪ್ರಸ್ತುತ. ಆ ವರದಿಯೇ ಅಂತಿಮ ಎಂದು ಹೇಳುತ್ತಿರುವುದು ಅನರ್ಥ. 54 ವರ್ಷಗಳ ಹಿಂದಿನ ವರದಿಯನ್ನು ಒಪ್ಪುವುದು ಸರಿಯಲ್ಲ. ಇದು ನಮಗೆ ಮಾರಕವೇ ಹೊರತು ಪೂರಕವಲ್ಲ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಕೇರಳ ಗಡಿ ವಿವಾದಕ್ಕೆ ಸಂಬಂಸಿದಂತೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಹಾಜನ್ ಅವರ ನೇತೃತ್ವದಲ್ಲಿ ರಚನೆಯಾದ ಏಕಸದಸ್ಯ ಸಮಿತಿ 1967ರಲ್ಲಿ ನೀಡಿರುವ ವರದಿಯನ್ನು ಮಹಾರಾಷ್ಟ್ರವೂ ಒಪ್ಪಿಲ್ಲ, ಸಂಸತ್ತಿನಲ್ಲೂ ಪುರಸ್ಕಾರವಾಗಿಲ್ಲ.

ಹಾಗಾಗಿ ಆ ವರದಿ ಸದ್ಯದ ಪರಿಸ್ಥಿತಿಯಲ್ಲಿ ಅಪ್ರಸ್ತುತ. ಮಹಾಜನ್ ವರದಿಯಿಂದ ಪ್ರಸ್ತುತ ಕಾಲಘಟ್ಟದಲ್ಲಿ ನಾವು ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಮಹಾಜನ್ ವರದಿ ನೀಡಿದ ನಂತರ ಈ ಐದೂವರೆ ದಶಕಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ರಾಜ್ಯಗಳ ನಡುವೆ ನದಿ ನೀರಿನ ಹಂಚಿಕೆ ಪ್ರಕರಣಗಳು ಇತ್ಯರ್ಥವಾಗಿವೆ. ಈಗ ನಾವು ಆ ವರದಿಯೇ ಅಂತಿಮ ಎಂದು ಹೇಳುವುದು ಸರಿಯಲ್ಲ ಎಂಬ ಸ್ಪಷ್ಟ ಅಭಿಮತವನ್ನು ಶಾಸನಬದ್ಧ ದಾಖಲೆಗಳೊಂದಿಗೆ ಬಿಡಿಸಿಡಲಾಗಿದೆ.

1967ರ ಮಹಾಜನ್ ವರದಿಗಿಂತ ಮೊದಲು 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಪ್ರಕಾರ ಎಲ್ಲಾ ರಾಜ್ಯಗಳನ್ನು ಗುರುತಿಸಿ ಗಣರಾಜ್ಯವಾಯಿತು. ತದನಂತರ ಮಹಾರಾಷ್ಟ್ರ ಸರ್ಕಾರ ಕರ್ನಾಟಕದಿಂದ ಸುಮಾರು 814 ಹಳ್ಳಿಗಳು ಬರಬೇಕು ಅದನ್ನು ಬಿಟ್ಟುಕೊಡಿ ಎಂದು ತನ್ನ ಹಕ್ಕು ಪ್ರತಿಪಾದಿಸಿತು.

ಅದೇ ರೀತಿ ಕರ್ನಾಟಕ ದಕ್ಷಿಣ ಸೊಲ್ಲಾಪುರ, ಜತ್, ಅಕ್ಕಲಕೋಟೆ ಹೀಗೆ ಕನ್ನಡ ಮಾತನಾಡುವ ಸುತ್ತಮುತ್ತಲ ಪ್ರದೇಶಗಳು ನಮಗೆ ಸೇರಬೇಕು ಎಂದು ಹಕ್ಕು ಪ್ರತಿಪಾದಿಸಿತು.  ಈ ಎರಡೂ ರಾಜ್ಯಗಳ ವಿವಾದ ಬಗೆಹರಿಸಲು ಕೇಂದ್ರ ಸರ್ಕಾರ ನಾಲ್ಕು ತಜ್ಞರನ್ನೊಳಗೊಂಡ (ಫೋರ್‍ಮನ್) ಸಮಿತಿ ನೇಮಕ ಮಾಡಿತು.  ಕರ್ನಾಟಕದ ಪರವಾಗಿ ದಿ.ಎಸ್.ಎಸ್.ಮಳೀಮಠ್ ಅವರು ಅಂದರೆ ಈಗಿನ ವಿ.ಎಸ್.ಮಳೀಮಠ್ ತಂದೆ; ಸಾಹುಕಾರ್ ಚನ್ನಯ್ಯನವರನ್ನು ಕರ್ನಾಟಕ ಸರ್ಕಾರ ನೇಮಿಸಿತು.

ಮಹಾರಾಷ್ಟ್ರದಿಂದ ವಿ.ಎಂ.ಫಟಸ್ಕರ್, ಎಂ.ಡಿ.ಭಟ್ ಇಬ್ಬರನ್ನು ನೇಮಿಸಿತು. ಅಲ್ಪ ಸ್ವಲ್ಪ ಅಂಕು ಡೊಂಕು ಇದ್ದರೆ ಸಣ್ಣಪುಟ್ಟ ಬದಲಾವಣೆ ಮಾಡಲು ಉದ್ದೇಶಿಸಲಾಗಿತ್ತು. ಆ ಪ್ರಕಾರ ನಮ್ಮ ಆಗಿನ ಮೈಸೂರು ರಾಜ್ಯದ ದಿ.ಎಸ್.ಎಸ್.ಮಳೀಮಠ್ ಮತ್ತು ಸಾಹುಕಾರ ಚೆನ್ನಯ್ಯನವರು ವರದಿ ಕೊಟ್ಟರು. ನಮಗೆ ಏನು ಬರಬೇಕು ಕೊಡಿ, ನಾವು ಯಾವುದನ್ನೂ ಕೊಡುವುದಿಲ್ಲ ಎಂದು ವರದಿ ಕೊಟ್ಟರು.

ಅವರು ಅವರದೇ ರೀತಿಯಲ್ಲಿ ವರದಿ ಕೊಟ್ಟರು. ಕಡೆಗೆ ವರದಿ ತಿರಸ್ಕಾರವಾಯಿತು. ನಂತರ ಪುನಃ ಮಹಾರಾಷ್ಟ್ರ ಸರ್ಕಾರದ ಮನವಿ ಮೇಲೆ ಕೇಂದ್ರ ಸರ್ಕಾರ ಒನ್‍ಮ್ಯಾನ್ ಕಮಿಷನ್ ಮಾಡಿತು. ಆ ಒನ್‍ಮ್ಯಾನ್ ಕಮಿಷನ್ನೇ ಮಹಾಜನ್ ಕಮಿಷನ್. ನಿವೃತ್ತ ಮುಖ್ಯನ್ಯಾಯಮೂರ್ತಿ ಮಹಾಜನ್ ಅವರು ಏನು ವರದಿ ಕೊಡ್ತಾರೋ ಅದನ್ನು ಎರಡೂ ರಾಜ್ಯಗಳು ಒಪ್ಪಿಕೊಳ್ಳಬೇಕು ಎಂದು ತೀರ್ಮಾನಿಸಲಾಯಿತು. ಆ ಪ್ರಕಾರ ಅವರು ವರದಿ ಕೊಟ್ಟರು. ವರದಿ ಕೊಡಬೇಕಾದರೆ ಬರೀ ಕರ್ನಾಟಕ-ಮಹಾರಾಷ್ಟ್ರ ಮಾತ್ರವಲ್ಲ ತಮಿಳುನಾಡು-ಕರ್ನಾಟಕ, ಕೇರಳ-ಕರ್ನಾಟಕ, ಕಾಸರಗೋಡು ವಿಷಯ ಇರಬಹುದು.

ಎಲ್ಲೆಡೆ ಪ್ರವಾಸ ಮಾಡಿ, ಎಲ್ಲವನ್ನೂ ಅಳೆದು ತೂಗಿ 1967ರಲ್ಲಿ  ವರದಿ ಕೊಟ್ಟರು. ವರದಿಯ ಪ್ರಕಾರ ಬೆಳಗಾವಿ ನಗರವನ್ನು ನಮಗೇ ಬಿಟ್ಟರು. ಆದರೆ ಬೆಳಗಾವಿ ತಾಲೂಕಿನ 62 ಹಳ್ಳಿಗಳನ್ನು ನಾವು ಮೈಸೂರು ರಾಜ್ಯದಿಂದ ಮಹಾರಾಷ್ಟ್ರಕ್ಕೆ ಕೊಡಬೇಕು. 152 ಹಳ್ಳಿಗಳನ್ನು ಖಾನಾಪುರ ತಾಲೂಕಿನಿಂದ ಮಹಾರಾಷ್ಟ್ರಕ್ಕೆ ಬಿಟ್ಟು ಕೊಡಬೇಕು. ಅದೇ ರೀತಿ ಚಿಕ್ಕೋಡಿ ತಾಲೂಕಿನಲ್ಲಿ ನಿಪ್ಪಾಣಿ ಟೌನ್ ಅದರ ಜೊತೆ ಇರುವ 40 ಹಳ್ಳಿಗಳನ್ನು ನಿಪ್ಪಾಣಿ ಭಾಗ್ ಅಂತ ನಾವು ಏನ್ ಕರೀತೀವಿ. ಅದನ್ನು ನಾವು ಅವರಿಗೆ ಬಿಟ್ಟುಕೊಡಬೇಕು ಎಂದು ತೀರ್ಮಾನ ಮಾಡಿದ್ದರು. ಈ ಪ್ರಕಾರ ಹೋದರೆ ನಾವು ಇಷ್ಟು ಹಳ್ಳಿಗಳನ್ನು ಕೊಡಬೇಕು.

ಅಕ್ಕಲಕೋಟ್ ನಗರ, ಜತ್ ತಾಲೂಕಿನಲ್ಲೇನಿದೆ ನಮಗೆ ಅವರು ಕೊಡಬೇಕು. ಜತ್ ತಾಲೂಕಿನಲ್ಲಿ ಸೌತ್ ಸೊಲ್ಲಾಪುರದಿಂದ 65 ಹಳ್ಳಿ, ಸೊಲ್ಲಾಪುರ ಸಿಟಿ ಕೊಟ್ಟಿಲ್ಲ. ಇದು ಬಹಳ ಮುಖ್ಯ. ಇದು ಯಾರಿಗೂ ಗೊತ್ತಿಲ್ಲ. ಜತ್ ತಾಲೂಕಿನಲ್ಲಿ 44 ಹಳ್ಳಿಗಳು, ಅಕ್ಕಲಕೋಟೆ ತಾಲೂಕು ಪೂರ್ತಿ ಗದ್ದೆಇಂಗಲ್ ಜಲ್ಲೆ, 15 ಹಳ್ಳಿಗಳು ಕೊಡಬೇಕು ಅಂತ ಆಯ್ತು. ಅವತ್ತಿನ ಪರಿಸ್ಥಿತಿಯಲ್ಲಿ ಮೈಸೂರು ರಾಜ ಮಹಾಜನ್ ವರದಿ ಒಪ್ಪಿದರು. ಆದರೆ ಮಹಾರಾಷ್ಟ್ರದವರು ಒಪ್ಪಲಿಲ್ಲ.

ಯಾವಾಗ ಅವರು ಒಪ್ಪಲಿಲ್ಲವೋ 1967ರಲ್ಲಿ ಸಲ್ಲಿಕೆಯಾದ ವರದಿ 70ರಲ್ಲಿ ಸಂಸತ್ತಿನಲ್ಲಿ ಮಂಡನೆಯಾಯಿತು. ಅದನ್ನು ಅಲ್ಲಿ ಒಪ್ಪಲೂ ಇಲ್ಲ, ತಿರಸ್ಕರಿಸಲೂ ಇಲ್ಲ. ಇಲ್ಲಿಯವರೆಗೂ ಒಪ್ಪಲಿಲ್ಲವೋ ಇದೀಗ ಒಪ್ಪಲಾಗಲ್ಲ. ಅವತ್ತಿನ ಪರಿಸ್ಥಿತಿಯೇ ಬೇರೆ ಈಗಿನ ಪರಿಸ್ಥಿತಿಯೇ ಬೇರೆ. ಈಗ ನಾವು ಮಹಾಜನ್ ವರದಿ ಅಂತಿಮ ಅಂತೀವಿ. ಆದರೆ ಈಗ ಅದು ಸಾಧ್ಯವಿಲ್ಲ. ನಮಗೆ ಬರಬೇಕಾದುದು ಬರೀ ಹಳ್ಳಿಗಳು. ಈ ಹಳ್ಳಿಗಳಲ್ಲಿ ಮಹಾರಾಷ್ಟ್ರ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ.

ಕೃಷ್ಣ ವಾಟರ್ ಹಂಚಿಕೆ ವಿವಾದ 1 ಅಂಡ್ 2 ಈಗಾಗಲೇ ಮುಗಿದು ಹೋಗಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರದವರಿಗೆ ನದಿ ನೀರು ಹಂಚಿಕೆಯಾಗಿದೆ. ಅದರಲ್ಲೂ ಆಂಧ್ರ-ತೆಲಂಗಾಣ ವಿವಾದ ಬಾಕಿ ಇದೆ. ಈಗ ಇದನ್ನು ನಾವು ಕೊಟ್ಟು ಬಿಟ್ಟರೆ ಅವರಿಗೆ ಪುನಃ ಮಲಪ್ರಭಾದಲ್ಲಿ ಕೃಷ್ಣಾ ಜಲ ವಿವಾದವನ್ನು ಮಹಾರಾಷ್ಟ್ರದವರು ಆರಂಭ ಮಾಡುತ್ತಾರೆ. ಅವರು ಸುಮ್ಮನೆ ಕೂರುವ ಜನ ಅಲ್ಲ; ಮಹಾರಾಷ್ಟ್ರದವರು.

ಅವರು ಯಾವಾಗಲೂ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಆಗಾಗ ತೊಂದರೆ ಮಾಡುತ್ತಲೇ ಇರುತ್ತಾರೆ. ಎಲ್ಲರೂ ಮಹಾಜನ್ ವರದಿ ಅಂತಿಮ ಅಂತಾರೆ. ಮಹಾಜನ್ ವರದಿ 1967ರಲ್ಲಿ ಪ್ರಸ್ತುತ ಇರಬಹುದು. ಆಗ ಕೊಟ್ಟಿದ್ದರೆ ಮಹಾದಾಯಿ ಕ್ಲೇಮ್ ಇರಲಿಲ್ಲ.

ಮಹಾದಾಯಿಯಲ್ಲಿ ನೀರು ತಂದು ಅದನ್ನು ಉತ್ತರ ಕರ್ನಾಟಕಕ್ಕೆ ಕುಡಿಯುವುದಕ್ಕೆ. ವಿದ್ಯುತ್ ಉತ್ಪಾದನೆಗೆ ಬಳಸುತ್ತಿದ್ದೇವೆ. ನೂರಾರು ಕೋಟಿ ಸುರಿದಿದ್ದೀವಿ. ಈಗ ಇದೊಂದು ಹುಬ್ಬಳ್ಳಿ, ಧಾರವಾಡಕ್ಕೆ ಬಹುದೊಡ್ಡ ಜಲಮೂಲವಾಗಿದೆ. ನಾವು ಈಗ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಏಕೆ ಎಂದರೆ ಮಲಪ್ರಭಾದಲ್ಲಿರುವ ನೀರು ಸಾಕಾಗುತ್ತಿಲ್ಲ.  ಈ ಕಡೆ ಕುಡಿಯುವುದಕ್ಕೆ ತೆಗೆದುಕೊಂಡರೆ ವ್ಯವಸಾಯಕ್ಕೆ ಕಡಿಮೆ ಆಗುತ್ತೆ. ಆ ಕಡೆ ವ್ಯವಸಾಯಕ್ಕೆ ಕೊಟ್ಟರೆ ಕುಡಿಯುವ ನೀರಿಗೆ ತೊಂದರೆ ಆಗುತ್ತೆ.

ಈ ಮೊದಲು ಏನಾಗುತ್ತಿತ್ತು ಎಂದರೆ ಹುಬ್ಬಳ್ಳಿ, ಧಾರವಾಡ ಸ್ಮಾಲ್ ಸಿಟಿ, ಕೆರೆಗಳಿಂದ ನೀರು ತೆಗೆದುಕೊಳ್ಳಬಹುದಿತ್ತು. ಇವತ್ತು ಅದು ಆಗುತ್ತಿಲ್ಲ.  ಹುಣಕಲ್ ಕೆರೆ ಇರಬಹುದು. ನೀರ್‍ಸಾಗರ್ ಇರಬಹುದು. ಅವೆಲ್ಲ ಬತ್ತಿಹೋಗಿವೆ. ಕುಡಿಯುವುದಕ್ಕೆ ಆಗುವುದಿಲ್ಲ. ಆಗ ಕುಡಿಯಲು ನೀರು ಇಲ್ಲದಂತಾಗುತ್ತದೆ. ಮಲಪ್ರಭೆ, ಘಟಪ್ರಭೆ, ಮಾರ್ಕಂಡೇಯ ಹೋಗುತ್ತೆ. ಆದುದರಿಂದ ನಾವು ಇದನ್ನು ಒಪ್ಪಲು ಸಾಧ್ಯವಿಲ್ಲ. ಬಹಳಷ್ಟು ಜನರಿಗೆ ಕೇಸಿನ ವ್ಯಾಪ್ತಿಯೇ ಗೊತ್ತಿಲ್ಲ. ಕೇಸಲ್ಲಿ ತಿರುಳು ಏನು, ನಮ್ಮ ಡಿಫೆನ್ಸ್ ಏನು? ಅನ್ನೋದು ಬಹಳಷ್ಟು ಜನಕ್ಕೆ ಬೇಕಿಲ್ಲ; ಗೊತ್ತಿಲ್ಲ.  1967ರಲ್ಲಿ ಕೊಟ್ಟಂತಹ ಮಹಾಜನ್ ವರದಿಯನ್ನು ಒಪ್ಪದೇ ಹೋದಾಗ ಅವರು ತಕ್ಷಣವೇ

ಕೋರ್ಟ್‍ಗೆ ಹೋಗಲಿಲ್ಲ. 1970 ನೇ ಇಸವಿಯಲ್ಲಿ ಸಂಸತ್‍ನ ಮುಂದೆ ಇಟ್ಟಾಗ  ಅಂಗೀಕಾರವೂ ಆಗಲಿಲ್ಲ, ತಿರಸ್ಕಾರವೂ ಆಗಲಿಲ್ಲ. ಪರಿಗಣನೆಗೆ ತೆಗೆದುಕೊಳ್ಳಿ ಎಂದು ಹೇಳಬೇಕಾದವರು ಯಾರು? ಅದನ್ನೂ ಕೇಳಲಿಲ್ಲ. ಈಗ 2004ನೇ ಇಸವಿಯವರೆಗೆ ಮಹಾರಾಷ್ಟ್ರ ನಿದ್ರೆ ಮಾಡುತ್ತಿತ್ತು. 1956ರಿಂದ 2004ಕ್ಕೆ ಸುಮಾರು 48 ವರ್ಷಗಳು ಆಗುತ್ತೆ. ಇವತ್ತಿಗೆ ಲೆಕ್ಕ ಹಾಕಿದರೆ ಇದೀಗ 65 ವರ್ಷಗಳಲ್ಲಿ 3 ತಲೆಮಾರು ಮುಗಿದಿದೆ. ಈಗ ಗಡಿ ವಿವಾದವನ್ನು ರೀ ಓಪನ್ ಮಾಡುವುದು ಎಷ್ಟರ ಮಟ್ಟಿಗೆ

ಸರಿ ? ಮೇನ್ ಕ್ಲೇಮ್ ಇರೋದು ಏನು ಅಂದ್ರೆ ನಾವು ಮರಾಠಿ ಮಾತಾಡ್ತೀವಿ. ಹಾಗಾಗಿ ಆ ಪ್ರದೇಶಗಳನ್ನು ನಮಗೆ ಕೊಟ್ಟು ಬಿಡಿ ಅಂತ. ಆದರೆ ಸಂವಿಧಾನದಲ್ಲಿ ಹಾಗಿಲ್ಲ. ಸಂವಿಧಾನದಲ್ಲಿ ಭಾಷೆ ಒಂದೇ ಕಾರಣಕ್ಕೆ ಯಾವುದೇ ಒಂದು ಏರಿಯಾ ಆಗಲಿ, ತಾಲೂಕಾಗಲಿ, ಹಳ್ಳಿಯನ್ನಾಗಲಿ, ಹೋಬಳಿಯನ್ನಾಗಲಿ ಸೇರಿಸುವುದಕ್ಕೆ ಬರುವುದಿಲ್ಲ. ಇದು ಬಹಳಷ್ಟು ಜನಕ್ಕೆ ಗೊತ್ತಿಲ್ಲ.

ಇದನ್ನು ಕ್ಲೇಮ್ ಮಾಡಬೇಕಾದರೆ 4 ಸಂಗತಿಗಳಿವೆ. ಸ್ಟೇಟ್ ರೀ ಆರ್ಗನೈಸೇಷನ್ ಆಕ್ಟ್ ಪ್ರಕಾರ ಈ 4 ಸಂಗತಿಗಳು ಏನು ಅಂದ್ರೆ ಒಂದು ರಿಸರ್ವೇಷನ್, ಸ್ಟೆಂಥನಿಂಗ್ ಆಫ್ ದ ಯೂನಿಟಿ ಅಂಡ್ ಸೆಕ್ಯೂರಿಟಿ ಆಫ್ ಇಂಡಿಯಾ, ಲಿಂಗ್ವಿಷ್ಟಿಕನ್ ಕಲ್ಚರಲ್ ಹ್ಯುಮಿಜಿನಿಟಿ, ಫೈನಾಷಿಯಲ್, ಎಕಾನಾಮಿಕ್, ಅಡ್ಮಿನಿಸ್ಟ್ರೇಷನ್ ಕನ್ಸಿಡರೇಷನ್, ಲಾಸ್ಟ್ ಸಕ್ಸಸ್‍ಫುಲ್ ವರ್ಕಿಂಗ್ ಆಫ್ ನ್ಯಾಷನಲ್ ಪ್ಲಾನ್ ಈ ನಾಲ್ಕು ಮಾಡಿದಾಗ ರಾಷ್ಟ್ರಪತಿಗಳು ರಿಡ್ಯೂಸ್ ದ ಏರಿಯಾ, ಇನ್‍ಕ್ರಿಸ್‍ದ ಏರಿಯಾ ಅಥವಾ ಅಬಾಲಿಷಸ್ ಸ್ಟೇಟ್ ಇಲ್ಲವೇ ರಾಜ್ಯ ವಿಭಜನೆ ಮಾಡುವ ನಿರ್ಧಾರ ಕೈಗೊಳ್ಳುತ್ತಾರೆ. ಇದನ್ನು ಬಿಟ್ಟು ಮರಾಠಿ ಮಾತಾಡುತ್ತಿದ್ದೇವೆ ಎನ್ನುವ ಕಾರಣಕ್ಕೆ ಕೇಳುವ ಹಾಗಿಲ್ಲ.

ಇದಕ್ಕೆ ಉದಾಹರಣೆ ಕೊಡ್ತೀನಿ. ಕೋಲಾರದಲ್ಲಿ ಬಹುತೇಕರು ತೆಲುಗು ಮಾತನಾಡುತ್ತಾರೆ. ಇದನ್ಯಾಕೆ ನಾವು ಆಂಧ್ರಗೆ ಕೊಡಬಾರದು? ಶೇ.70ರಷ್ಟು ತೆಲುಗು ಭಾಷಿಕರಿದ್ದರು ಕೊಡಲು ಬರುವುದಿಲ್ಲ. ಏಕೆಂದರೆ ಕೆಜಿಎಫ್‍ನ ಗೋಲ್ಡ್‍ಮೈನ್‍ಗೆ ವಿದ್ಯುತ್ ಪೂರೈಕೆ ಶಿವನ ಸಮುದ್ರದಿಂದ ಆಗುತ್ತದೆ.  ಇಲ್ಲಿಂದ ಯಾವಾಗ ವಿದ್ಯುತ್ ಪೂರೈಕೆ ಶುರುವಾಯಿತೋ ಕೇಂದ್ರ ಸರ್ಕಾರ ಇದನ್ನು ಕರ್ನಾಟಕದಲ್ಲಿ ಉಳಿಸಿದೆ. ಬಳ್ಳಾರಿಯನ್ನು ಏಕೆ ಕರ್ನಾಟಕಕ್ಕೆ ಕೊಟ್ಟರು? ಕಲ್ಯಾಣದುರ್ಗವನ್ನು ಆಂಧ್ರಕ್ಕೆ ಏಕೆ ಕೊಟ್ಟರು? ಮಂತ್ರಾಲಯವನ್ನು ಏಕೆ ಆಂಧ್ರಗೆ ಕೊಟ್ಟರು? ಮಂತ್ರಾಲಯದಲ್ಲಿ ಮಾತನಾಡುವವರು ಕನ್ನಡ, ಅದು ಕನ್ನಡಿಗರದ್ದೇ. ಆದರೆ ಕೇಳಲು ಬರುವುದಿಲ್ಲ. ಸೊಲ್ಲಾಪುರದಲ್ಲೂ ಕನ್ನಡಿಗರಿದ್ದಾರೆ ಅದನ್ನು ನಾವು ಕೇಳುತ್ತಿಲ್ಲ.

ಭಾಷೆ ಮೇಲೆ ಕೇಳುವುದು ತಪ್ಪು. ಹಾಗಾದರೆ ಬಾಂಬೆ ಸ್ಟೇಟ್‍ನಲ್ಲಿ ರಾಜಸ್ಥಾನ್ ಹಾಗೂ ಗುಜರಾತ್ ರಾಜ್ಯದ ಕೆಲ ಭಾಗಗಳನ್ನು ಸೇರಿಸಿದ್ದಾರೆ. ಏಕೆ ಅವರು ಆಯಾ ಭಾಗಗಳನ್ನು ಆಯಾ ರಾಜ್ಯಕ್ಕೆ ಕೊಟ್ಟಿಲ್ಲ ಎಂದು ಕ್ಲೇಮ್ ಕೂಡ ಮಾಡುತ್ತಿಲ್ಲ? ಹಾಗಾದರೆ ಇದನ್ನು ಕೇಂದ್ರಾಡಳಿತ ಪ್ರದೇಶ ಮಾಡ್ತೀರಾ? ಭಾಷೆ ಒಂದೇ ವಿಷಯವಾದರೆ ಜಾರ್ಖಂಡ್ ಏಕೆ ಪ್ರತ್ಯೇಕವಾಯಿತು. ಉತ್ತರಾಖಂಡ ಏಕೆ ಪ್ರತ್ಯೇಕವಾಯಿತು. ಇದು ಭಾಷೆ ತಳಹದಿ ಮೇಲಲ್ಲ.  ಇದೇ ಕಾರಣವಾದರೆ ಕೂರ್ಗ್, ಮಂಗಳೂರು ಪ್ರತಿಯೊಬ್ಬರು ಒಂದೊಂದು ರಾಜ್ಯ ಕೇಳುತ್ತಾರೆ.

ಮಹಾರಾಷ್ಟ್ರದವರು ಕಾರವಾರ ಕೊಡಿ ಅಂತಾರೆ. ಏಕೆ ಅಂದರೆ ಕೊಂಕಣಿ ಮಾತಾಡ್ತಾರೆ. ಕೊಂಕಣಿ ಮರಾಠಿ ಭಾಷೆಯ ಪ್ರಬೇದ ಅಂತಾರೆ. ಇದು ಸುಳ್ಳು.  ಕೊಂಕಣಿ ಸ್ವತಂತ್ರ ಭಾಷೆ.  ಅದನ್ನಿಟ್ಟುಕೊಂಡು ಇವರು ಕೇಳುವುದಾದರೆ ಗೋವಾವನ್ನು ಕೇಳಬೇಕು. ಗೋವಾದಲ್ಲಿ ಪೂರ್ತಿ ಕೊಂಕಣಿ ಮಾತಾಡ್ತಾರೆ. ಒಂದು ಸ್ಟೇಟನ್ನೇ ಬಿಟ್ಟು ಒಂದು ಸ್ಮಾಲ್ ಪ್ಲೇಸ್‍ಗೆ ಬರ್ತಾರೆ. ಜೋಯಿಡಾ, ಮೊದಲು ಸೂಫಾ ಅಂತಿತ್ತು. ಈಗ ಜೋಯಿಡಾ ಆಗಿದೆ. ಹಳಿಯಾಳ ಬೇಕು ಅಂತಾರೆ. ಕರ್ನಾಟಕದಲ್ಲಿ ಮರಾಠಿ ಇರಬಹುದು. ಇಲ್ಲಿ ಯಾರೇ ಯಾವುದೇ ಭಾಷೆ ಮಾತನಾಡುವ ಹಕ್ಕಿದೆ.

ಭಾಷೆಯೊಂದನ್ನೇ ಇಟ್ಟುಕೊಂಡು ಯಾರಿಗೂ ತೊಂದರೆ ಕೊಟ್ಟಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಕೇಂದ್ರ ಸರ್ಕಾರದ ಮೈನಾರಿಟಿ ಕಮಿಷನ್ ಇದೆ. ಒಂದೊಂದು ರಾಜ್ಯದಲ್ಲಿ ಮೈನಾರಿಟಿಗಳಿದ್ದಾರೆ ಅವರ ಸಮಸ್ಯೆಗಳ ಕುರಿತು ಅಧ್ಯಯನ ನಡೆಸುತ್ತದೆ. ಸೌಲಭ್ಯಗಳ ಕುರಿತು ಪ್ರತಿವರ್ಷ ಮೈನಾರಿಟಿ ಕಮಿಷನ್ ವರದಿ ನೀಡುತ್ತೆ. ಯಾವುದಾದರೂ ಒಂದು ವರ್ಷದ ವರದಿ ತೋರಿಸಲಿ. ಇಲ್ಲಿ ಮರಾಠಿ ಜನರಿಗೆ ತೊಂದರೆಯಾಗುತ್ತಿದೆ ಎಂದು. ಕನ್ನಡಿಗರು ಕಿರುಕುಳ ಕೊಡ್ತಿದ್ದಾರೆ ಎಂಬುದನ್ನು ಸಾಬೀತುಪಡಿಸಲಿ.  ಇಲ್ಲಿ ಮರಾಠಿಗರೇ ಕನ್ನಡಿಗರ ಮೇಲೆ ದೌರ್ಜನ್ಯ ತೋರಿಸುತ್ತಿದ್ದಾರೆ.

ನಾವು ಮಾತ್ರ ಇವತ್ತಿಗೂ ಸಹಿಸಿಕೊಂಡಿದ್ದೇವೆ. ಇದು ಕನ್ನಡಿಗರ ಹೆಮ್ಮೆಯ ವಿಷಯ. ನಾವು ಎಲ್ಲರನ್ನೂ ಒಪ್ಪುತ್ತೇವೆ. ಬದುಕಿ, ಬದುಕಲು ಬಿಡಿ ಎನ್ನುವ ಸಿದ್ಧಾಂತ ನಮ್ಮದು. ಮರಾಠಿಗರ ಮೇಲೆ ಯಾರೂ ದೌರ್ಜನ್ಯ ಮಾಡಿಲ್ಲ. ನಮ್ಮ ಅನ್ನ, ನೀರು, ಉದ್ಯೋಗ ಎಲ್ಲ ಪಡೆದು ದೌರ್ಜನ್ಯ ಮಾಡ್ತಾರೆ. ಕನ್ನಡ ಧ್ವಜ, ನಾಡಿಗೆ ಗೌರವ ಕೊಡುವುದಿಲ್ಲ. ಭಾಷೆಗೆ ಗೌರವ ಕೊಡುವುದಿಲ್ಲ. ನಮ್ಮವರು ಮಹಾರಾಷ್ಟ್ರದಲ್ಲಿದ್ದಾರೆ. ಇವರಂತೆ ಎಂದೂ ಯಾರನ್ನೂ ದೂಷಿಸಿಲ್ಲ.  ನಾವು ಎಲ್ಲರೊಂದಿಗೆ ಬೆರೆಯುತ್ತೇವೆ. ಮೊಂಡುವಾದ ಮಾಡುವುದಿಲ್ಲ.ಅಲ್ಲಿರುವ ನಮ್ಮವರು ಇವತ್ತಿಗೂ ಯಾರ ಮೇಲೂ ದೌರ್ಜನ್ಯ ಮಾಡಿಲ್ಲ. ಹಾಗೆ ಮಾಡಿದ್ದರೆ ಶಿವಸೇನೆಯವರು ಉಳಿಯಲು ಬಿಡುತ್ತಿದ್ದರೆ? ಸುಖಾ ಸುಮ್ಮನೆ ಆರೋಪ ಸರಿಯಲ್ಲ.

ಮಹಾಜನ್ ವರದಿ ಇಂದಿನ ಸಂದರ್ಭದಲ್ಲಿ ಅಪ್ರಸ್ತುತ. ಆಗ ಒಪ್ಪಿ ಕೊಟ್ಟಿದ್ದರೆ ತೊಂದರೆಯಿರಲಿಲ್ಲ. ಈಗ ನಾವು ಸಾಕಷ್ಟು ಅಭಿವೃದ್ಧಿ ಮಾಡಿದ್ದೀವಿ. ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಮಾಡಿದ್ದೀವಿ. ಸುವರ್ಣಸೌಧ, ಮರಾಠ ಇನ್ಸ್‍ಟಿಟ್ಯೂಷನ್, ಹೈಸ್ಕೂಲ್, ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿದ್ದೇವೆ.  ಇವರಿಗೆ ಬೆಳಗಾವಿ ಕೇಳುವ ಅಕಾರ ಇಲ್ಲ. ಕರ್ನಾಟಕ ಯೂನಿವರ್ಸಿಟಿ ಆದಾಗ ಪಾರ್ವತಿ ದೇವಿ ಕಾಲೇಜಿನವರು ಹೇಳಿದರು; ನಮ್ಮನ್ನು ಕರ್ನಾಟಕ ಯೂನಿವರ್ಸಿಟಿ ಸೇರಿಸಬೇಡಿ ಬಾಂಬೆ ಯೂನಿವರ್ಸಿಟಿಗೆ ಸೇರಿಸಿ ಅಂತಾ ಕೇಳಿದರು, ಇದನ್ನು ತಿರಸ್ಕರಿಸಲಾಯಿತು. ಸ್ಟೇಟ್ ರೀ ಆರ್ಗನೈಸೇಷನ್ ಆಕ್ಟ್ ಬಗ್ಗೆ ಎಲ್ಲಾ ರಾಜ್ಯಗಳಲ್ಲೂ ಚರ್ಚೆಯಾಗಿದೆ. ಬೆಳಗಾವಿ ಬಗ್ಗೆ ಮಹಾರಾಷ್ಟ್ರ ವಿಧಾನಸಭೆಯಲ್ಲೂ ಚರ್ಚೆಯಾಗಿದೆ. ಆಗ ಅವರು ಬೆಳಗಾವಿ ಅನ್ನು ಕರ್ನಾಟಕಕ್ಕೆ ಕೊಟ್ಟಿರುವುದು ಸರಿ ಎಂದು ಒಪ್ಪಿದ್ದಾರೆ. ಈಗ ತಗಾದೆ ತೆಗೆಯುವುದು ಏಕೆ? ಇದು ಹುಚ್ಚುತನದ ಪರಮಾವ.

2004ನೇ ಇಸವಿಯಲ್ಲಿ ಸ್ಟೇಟ್ ರೀ ಆರ್ಗನೈಸೇಷನ್‍ನ ಕೆಲವು ಪ್ರಾವಿಷನ್‍ಗಳನ್ನು ತೆಗೆದುಹಾಕಿ. 814 ಹಳ್ಳಿಗಳು ಸೇರಬೇಕೆಂಬ ವರ್ಜಿನಲ್ ಕ್ಲೇಮ್ ಇತ್ತಲ್ಲ ಈಗ 862 ಎಂದು ಸೇರಿಸಿಕೊಂಡು ಸುಪ್ರೀಂಕೋರ್ಟ್‍ಗೆ ಹೋಗಿದ್ದಾರೆ. ಎಕ್ಸಿಕ್ಯೂಟ್ ಕೆ ಪ್ರಕಾರ ಏನಿದ್ದಾವೆ ಆ ಪೂರ್ತಿ ಹಳ್ಳಿಗಳನ್ನು ಕರ್ನಾಟಕದಿಂದ ತೆಗೆದು ನಮಗೆ ಕೊಡಿ ಎಂದು ಕೇಳಿದ್ದಾರೆ. ಹೀಗೆ ನಾಲ್ಕನೇ ಒಂದು ಭಾಗದಷ್ಟು ರಾಜ್ಯದ ಭಾಗವನ್ನು ಕೇಳುತ್ತಿದ್ದಾರೆ.  ಇದು ಬೇಸ್ ಲೆಸ್ ಕ್ಲೇಮ್. ಇದಕ್ಕೆ ಸಾಕ್ಷ್ಯ ಬೇಕು ಅಂದ್ವಿ. ಸಾಕ್ಷ್ಯಧಾರಗಳಿಗೆ ಜಮ್ಮು ಕಾಶ್ಮೀರದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮನ್‍ಮೂನ್ ಸರೀನಾ ಅವರನ್ನು ಕಮಿಷನರ್ ಆಗಿ ನೇಮಕ ಮಾಡಿದರು. ಆಗ ನಾವು ಅರ್ಜಿ ಹಾಕಿ ಸರಿಯಲ್ಲ ಎಂದು ಹೇಳಿದ್ದೀವಿ. ಇದರಲ್ಲಿ ಇಷ್ಯೂ ಇದೆ. ಆರ್ಡರನ್ನು ಪುನರ್ ಪರಿಶೀಲಿಸಿ ಅಂತಾ ಕೇಳಿದ್ದೀವಿ.

ಎವಿಡೆನ್ಸ್ ಬೇಕಾಗಿಲ್ಲ. ಮ್ಯಾಂಟೇನಬಲ್ ಕುರಿತು ಚರ್ಚೆ ನಡೆಯುತ್ತಿದೆ. 1956ರಲ್ಲಿ ಆದಂತಹ ಗಡಿಗಳನ್ನು ಈಗ ಬದಲಿಸಿದರೆ ಇಡೀ ಭಾರತದ ಭೂಪಟ ಬದಲಾಗುತ್ತೆ. ಈಗ ಬಾಂಬೆ ಅವರು ಕ್ಲೇಮ್ ಮಾಡಿದ್ದಾರೆ. ನಂತರ ಗುಜರಾತ್ ಕೇಳುತ್ತಾರೆ, ಆಂಧ್ರದವರು ಕೇಳುತ್ತಾರೆ. ಇದು ಸಂವಿಧಾನ ವಿರೋ. ಇದಕ್ಕೆ ಸಂವಿಧಾನದಲ್ಲಿ ಆಸ್ಪದ ಇಲ್ಲ.   2001ರ ಜನಗಣತಿ ಪ್ರಕಾರ ನೋಡುತ್ತಾ ಹೋದರೆ ರಾಜ್ಯದಲ್ಲಿ ಮರಾಠಿ ಭಾಷಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿರುವುದು ಕಂಡು ಬರುತ್ತದೆ. ಕನ್ನಡ ಮಾತನಾಡುವವರ ಸಂಖ್ಯೆ ಕಾರವಾರ, ಬಾಲ್ಕಿ, ಬೆಳಗಾವಿಗಳಲ್ಲಿ ಹೆಚ್ಚುತ್ತಿದೆ. ಶೇ.50ರಷ್ಟು ಮರಾಠಿ ಭಾಷಿಗರಿಲ್ಲದ ಮೇಲೆ ಯಾವ ಆಧಾರದಲ್ಲಿ ಮಹಾರಾಷ್ಟ್ರ ಕರ್ನಾಟಕದ ನೆಲವನ್ನು ಕೇಳುತ್ತಿದೆ.

ಇನ್ನೂ ಮರಾಠಿಗರಿಗೆ ನಾವು ಯಾವುದೇ ಕಿರುಕುಳ ಕೊಡುತ್ತಿಲ್ಲ. ಯಾರು ಮಹಾರಾಷ್ಟ್ರಕ್ಕೆ ಹೋಗಬೇಕೋ ಹೋಗಲಿ. ಆದರೆ ಜಾಗ ಕೇಳಲು ಬರುವುದಿಲ್ಲ. ಅವರ ಇಷ್ಟ. ಭಾರತದ ಯಾವ ಮೂಲೆಗೂ ಯಾರು ಬೇಕಾದರೂ ಹೋಗಬಹುದು. ಅದಕ್ಕೆ ಅಭ್ಯಂತರವಿಲ್ಲ. ಮಹಾಜನ್ ವರದಿ ಅಪ್ರಸ್ತುತವಾಗಿರುವಾಗ ಯಾವ ಹೊಸ ಆಯೋಗದ ಅಗತ್ಯವಿಲ್ಲ. 1956ರಲ್ಲಿ ಭಾಷಾವಾರು ವಿಂಗಡಣೆ ಪ್ರಕಾರ ಏನಾಗಿತ್ತೋ ಅದೇ ಅಂತಿಮ.

# ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು
ಬೆಳಗಾವಿ ನಗರ ಈಗ ದೊಡ್ಡ ನಗರವಾಗಿ ಮಾರ್ಪಟ್ಟಿದೆ. 62 ಹಳ್ಳಿಗಳು ಬೆಳಗಾವಿ ಸಿಟಿಗೆ ಸೇರ್ಪಡೆಯಾಗಿದೆ. ಈಗ 62  ಹಳ್ಳಿಗಳನ್ನು ಬೇರ್ಪಡಿಸಲು ಬರುವುದಿಲ್ಲ. ಬೇರ್ಪಡಿಸಿದರೆ ಬೆಳಗಾವಿ ಛಿದ್ರ ಛಿದ್ರವಾಗುತ್ತದೆ. ಮಹಾಜನ್ ವರದಿ ಪ್ರಕಾರ ಹೋದರೆ ಹಿಂಡಲಗಾ ಜೈಲು, ಯೂನಿವರ್ಸಿಟಿ ಆಫ್ ಟೆಕ್ನಾಲಜಿ, ರಕ್ಕಸಕೊಪ್ಪ ಹಳ್ಳಿಯನ್ನು ಬಿಟ್ಟುಕೊಡಬೇಕು. ರಕ್ಕಸಕೊಪ್ಪದಲ್ಲಿ ಜಲಾಶಯ ಇದೆ.

ಈ ಜಲಾಶಯದಿಂದ ಬೆಳಗಾವಿಗೆ  55ಎಂಎಲ್‍ಡಿ ಕುಡಿಯುವ ನೀರು ಬೇಕು. ಪರ್‍ಕ್ಯಾಬ್ 119ಲೀ ಸಪ್ಲೇ ಮಾಡುತ್ತಿದ್ದೇವೆ. 55ಎಂಎಲ್‍ಡಿನಲ್ಲಿ 35 ಎಂಎಲ್‍ಡಿ ನೀರು ರಕ್ಕಸಕೊಪ್ಪ ಜಲಾಶಯದಿಂದಲೇ ಬರುತ್ತೆ. ಇನ್ನು 20 ಎಂಎಲ್‍ಡಿ ಹಿಡಕಲ್ ಜಲಾಶಯದಿಂದ ಬರುತ್ತೆ. ಇವತ್ತು ಮಹಾಜನ್ ವರದಿ ಅನುಷ್ಠಾನ ಮಾಡಲು ಹೋದರೆ ಬೆಳಗಾವಿಗೆ ಕುಡಿಯಲು ನೀರಿಲ್ಲ.

ಮೊದಲೇ ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿಗೆ ಬರ ಇದೆ. ಇನ್ನು 35 ಎಂಎಲ್‍ಡಿ ವಾಟರ್ ಕಳೆದುಕೊಳ್ಳುತ್ತೇವೆ.  ಹಿಂದಿನ ಸರ್ಕಾರ ಇದ್ದಾಗ ಎಲ್ಲಾ ಊರಿಗೂ ಕುಡಿಯುವ ನೀರಿನ ಸರಬರಾಜು ಮಾಡಬೇಕು. ಸಮಗ್ರ ಯೋಜನೆ ಬೇಕು ಎಂದು ಹೇಳಿದೆ. ಬೆಳಗಾವಿಗೆ ಹಿಡಕಲ್‍ನಿಂದ ನೀರು ಬರುತ್ತೆ. ಅದು ಯಮಕನಮರಡಿ ಅಲ್ಲಿಂದ ಬರುತ್ತೆ. ಬೆಳಗಾವಿಗೆ ನೀರು ಬರುತ್ತೆ. ಆದರೆ ಮಧ್ಯದಲ್ಲಿ ಬರುವ ಹಳ್ಳಿಗಳಿಗೆ ನೀರಿಲ್ಲ. ಈ ಬಗ್ಗೆ ವರದಿ ಕೊಟ್ಟಿದ್ದೆ. ಖಾನಾಪುರದಿಂದ 152 ಹಳ್ಳಿ ಬಿಟ್ಟುಕೊಡಬೇಕು. ಇದರಲ್ಲಿ ಖಾನಾಪುರ ಟೌನ್ ಹೋಗುತ್ತೆ.

ಮತ್ತೊಂದು ಮಹತ್ವದ ವಿಷಯವೆಂದರೆ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನ ನೇಣು ಹಾಕಿದ ಜಾಗ ನಂದಗಡವನ್ನು ಕಳೆದುಕೊಳ್ಳಬೇಕಾಗುತ್ತೆ. ಮಹದಾಯಿ ಟ್ರಿಬ್ಯೂನಲ್‍ನಲ್ಲಿ 13.5 ಟಿಎಂಸಿ ನೀರು ಕೊಟ್ಟಿದ್ದಾರೆ. ಅದು ಸಾಲಲ್ಲ ಇನ್ನೂ ಬೇಕು ಎಂದು ಸುಪ್ರೀಂಕೋರ್ಟ್‍ಗೆ ಅರ್ಜಿ ಹಾಕಿದ್ದೇವೆ. ಅದನ್ನು ಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ. ಒಂದು ವೇಳೆ ಮಹಾಜನ್ ರಿಪೋರ್ಟ್ ಫೈನಲ್ ಎಂದು ಹೇಳಿದರೆ; ಇದನ್ನು ಮಹಾರಾಷ್ಟ್ರ ಕೂಡ ಮಹಾಜನ್ ವರದಿ ಒಪ್ಪಿದರೆ ನಾವು ಎಲ್ಲಿ ನಿಲ್ಲುತ್ತೇವೆ ಗೊತ್ತಿಲ್ಲ. ವಾಸ್ತವಾಂಶ ಗೊತ್ತಿಲ್ಲ. ನಾನು ನದಿ ರಕ್ಷಣಾ ಆಯೋಗದ ಅಧ್ಯಕ್ಷನಾಗಿ ಎಲ್ಲಾ ಆಯಾಮಗಳಲ್ಲಿ ಪರೀಕ್ಷಿಸಿದಾಗ ನನಗೆ ಶಾಕ್ ಆಯ್ತು.

ಮಹದಾಯಿಯಿಂದ ಖಾನಾಪುರದಿಂದ 152 ಹಳ್ಳಿ, ಬೆಳಗಾವಿಯಿಂದ 62 ಹಳ್ಳಿ ಮಹಾರಾಷ್ಟ್ರಕ್ಕೆ ಹೊರಟು ಹೋಗುತ್ತೆ. ಆಗ ಬೆಳಗಾವಿ ಒಂದು ಸಣ್ಣ ನಗರವಾಗುತ್ತೆ. ಇನ್ನೂ ಆಳವಾಗಿ ಅಧ್ಯಯನ ಮಾಡಿದರೆ ಎಷ್ಟು ಹಳ್ಳಿ ಹೋಗುತ್ತೆ ಅನ್ನೋದು ಗೊತ್ತಾಗುತ್ತೆ. 152 ಹಳ್ಳಿಗಳಲ್ಲಿ ಏನೇನು ಹೋಗುತ್ತೆ ಅನ್ನೋದು ಮುಖ್ಯ. ಮಹದಾಯಿ ಹೋಗುತ್ತೆ. ಅಷ್ಟೇ ಅಲ್ಲ ಉಪನದಿಗಳು ಬೈಲ್‍ನದಿ, ಕೊಟ್ವೊಚಿ ನಾಲಾ. ಅಲ್ತಾರ ನದಿ, ಪೊಟ್ಲಿ ನಾಲಾ, ಕಳಸಾ ಬಂಡೂರಿ ಇವೆಲ್ಲ ಪೂರ್ತಿ ಹೋದರೆ ಮಹದಾಯಿ ನದಿಯಿಂದ ಮಲಪ್ರಭಾಗೆ ನೀರು ಬಿಟ್ಟುಕೊಳ್ತಿವಿ. ಇನ್ನೊಂದು ಕಡೆ ಕಣಕುಂಬಿ ಜಾಂಬವಟಿಯಲ್ಲಿ ಮಲಪ್ರಭಾ ಹುಟ್ಟುತ್ತಾಳೆ. ಅಲ್ಲಿಂದಿಲ್ಲಿಗೆ ಸುರಂಗ ಕೊರೆದು ಡಿಗ್ ಮಾಡಿ ಮಲಪ್ರಭಾದಿಂದ ನೀರು ತೆಗೆದುಕೊಳ್ಳುತ್ತಿದ್ದೇವೆ. ಇದರ ಜೊತೆಗೆ ಮಲಪ್ರಭಾ ಹುಟ್ಟುವ ಕಣಕುಂಬಿ ಜಾಂಬವಟಿ ಜಾಗವೂ ಹೊರಟು ಹೋಗುತ್ತೆ. ಇದರ ಪರಿಣಾಮ ಮಹಾದಾಯಿ ನದಿ ಸಂಪೂರ್ಣ ನಮ್ಮ ಕೈ ತಪ್ಪಿ ಹೋಗುತ್ತೆ.  ಮಲಪ್ರಭಾ-ಕೃಷ್ಣ ಜಲ ವಿವಾದಕ್ಕೂ ಕನೆಕ್ಟ್ ಆಗುತ್ತದೆ.

# ನಿರೂಪಣೆ : ಕೆ.ಎಸ್.ಜನಾರ್ಧನ್

 

Facebook Comments

Sri Raghav

Admin