ವಿಚ್ಚೇದನದ ನಂತರ 2ನೇ ಮದುವೆಯಾದ ಮಹಿಳೆಗೆ ಉಗುಳು ನೆಕ್ಕುವ ಶಿಕ್ಷೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಮೇ.14-ವಿಚ್ಚೇದನದ ನಂತರ ದ್ವಿತೀಯ ವಿವಾಹವಾದ ಮಹಿಳೆಗೆ ಉಗುಳು ನೆಕ್ಕುವ ಶಿಕ್ಷೆ ವಿಧಿಸಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ವರದಿಯಾಗಿದೆ.

ಎರಡನೆ ವಿವಾಹವಾದ ಮಹಿಳೆಗೆ ಆಕೆಯ ಸಮುದಾಯದ ಮುಖಂಡರು ಪಂಚಾಯಿತಿ ನಡೆಸಿ ಆಕೆಗೆ ಉಗುಳು ನೆಕ್ಕುವ ಶಿಕ್ಷೆ ವಿಧಿಸಿದ್ದಾರೆ. ಮಾತ್ರವಲ್ಲ ತಪ್ಪಿಗಾಗಿ ಒಂದು ಲಕ್ಷ ರೂ.ದಂಡ ಪಾವತಿಸುವಂತೆ ಆದೇಶ ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ತಿಂಗಳೇ ಇಂತಹ ಅಮಾನವೀಯ ಘಟನೆ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ. ಶಿಕ್ಷೆಗೆ ಗುರಿಯಾದ ಮಹಿಳೆ ಪಂಚಾಯಿತಿ ನಿರ್ಧಾರವನ್ನು ನಿರ್ಲಕ್ಷಿಸಿ ಹೀನ ತೀರ್ಪಿನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ.

ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆಕೆಗೆ ಶಿಕ್ಷೆ ನೀಡಿದ ಪಂಚಾಯಿತಿಯ 10 ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಎರಡನೆ ವಿವಾಹವಾದ ಮಹಿಳೆ ನಾತ್ ಜೋಗಿ ಸಮುದಾಯಕ್ಕೆ ಸೇರಿದ್ದಾರೆ. ಆ ಸಮುದಾಯದಲ್ಲಿ ಎರಡನೆ ಮದುವೆಗೆ ಅವಕಾಶವಿಲ್ಲ. ಹೀಗಾಗಿ ಸಮುದಾಯದವರು ಪಂಚಾಯಿತಿ ನಡೆಸಿ ಆಕೆಗೆ ಇಂತಹ ಶಿಕ್ಷೆ ವಿಧಿಸಿದ್ದರು ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.

ಪಂಚಾಯಿತಿ ಶಿಕ್ಷೆ ಪಾಲಿಸಬೇಕಾದರೆ ನಾತ್ ಜೋಗಿ ಸಮುದಾಯದವರು ಬಾಳೆ ಎಲೆ ಮೇಲೆ ಊಗಿಯಬೇಕು. ನಂತರ ಗ್ರಾಮಸ್ಥರು ಉಗುಳಿದ್ದನ್ನು ಮಹಿಳೆ ನೆಕ್ಕಬೇಕಾಗಿತ್ತಂತೆ.

Facebook Comments

Sri Raghav

Admin