ಮನೆಯೂಟಕ್ಕೆ ಅವಕಾಶ ನೀಡದ ಪೊಲೀಸ್ ಅಧಿಕಾರಿಗಳನ್ನು ಥಳಿಸಿದ ಖೈದಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಥಾಣೆ, ಜು.22-ಮನೆಯೂಟ ಸೇವಿಸಲು ಅವಕಾಶ ನಿರಾಕರಿಸಿದ್ದರಿಂದ ಕುಪಿತಗೊಂಡ ಇಬ್ಬರು ವಿಚಾರಣಾಧೀನ ಕೈದಿಗಳು ಪೊಲೀಸ್ ಅಧಿಕಾರಿ ಮತ್ತು ಕಾನ್‍ಸ್ಟೇಬಲ್ ಮೇಲೆ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ಥಾಣೆ ನಗರದಲ್ಲಿ ನಡೆದಿದೆ.

ಕೊಲೆಯತ್ನ ಮತ್ತು ಅಕ್ರಮ ಶಸ್ತ್ರಾಸ್ತ್ರ ಕಳ್ಳ ಸಾಗಣೆ ಪ್ರಕರಣಗಳಲ್ಲಿ ಆರೋಪಿಗಳಾಗಿ ವಿಚಾರಣೆ ಎದುರಿಸುತ್ತಿರುವ ಮಹೇಂದ್ರ ಜಯಪ್ರಕಾಶ್ ಸಿಂಗ್ ಮತ್ತು ಇಮ್ರಾನ್ ಉಸೇನ್‍ಖಾನ್ ಎಂಬುವರು ಸಬ್‍ಇನ್ಸ್‍ಪೆಕ್ಟರ್ ಸುಧೀರ್‍ವಾಲ್ (57) ಮತ್ತು ಕಾನ್‍ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

ಥಾಣೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯಾಯಾಲಯದಲ್ಲಿ ವಿಚಾರಣೆಗಾಗಿ 9 ಕೈದಿಗಳನ್ನು ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಕೊಠಡಿಯಲ್ಲಿದ್ದ ಸಿಂಗ್ ಮತ್ತು ಖಾನ್‍ಗೆ ಊಟ ನೀಡಲು ಅವರ ಕುಟುಂಬದವರು ಬಂದಿದ್ದರು.

ಆದರೆ, ಇದಕ್ಕೆ ಎಸ್‍ಐ ಸುಧೀರ್ ಅವಕಾಶ ನೀಡದಿದ್ದರಿಂದ ಈ ಘಟನೆ ನಡೆದಿದೆ. ಇವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Facebook Comments