ಗಾಂಧೀಜಿಗೆ ಭಾರತ ರತ್ನ ಅಗತ್ಯವಿಲ್ಲ: ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.18-ರಾಷ್ಟ್ರಪಿತ ಮಹಾತ್ಮಗಾಂಧೀಜಿ ಯವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕೆಂದು ಸಲ್ಲಿಸಿದ್ದ ಮನವಿಯೊಂದನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ. ಇದಕ್ಕೆ ಕಾರಣವೇನು? : ಗಾಂಧೀಜಿಯವರನ್ನು ಇಡೀ ದೇಶದ ಜನತೆ ರಾಷ್ಟ್ರಪಿತ ಎಂಬ ಗೌರವ ನೀಡಿದ್ದಾರೆ. ಗಾಂಧಿಯವರಿಗೆ ಭಾರತರತ್ನ ಪುರಸ್ಕಾರ ನೀಡುವ ಅಗತ್ಯವಿಲ್ಲ.

ಏಕೆಂದರೆ ಅವರು ಮಾಡಿರುವ ಸಾಧನೆ ಈ ಪ್ರಶಸ್ತಿಗಿಂತಲೂ ತುಂಬಾ ದೊಡ್ಡದು. ಹೀಗಾಗಿ ಅವರಿಗೆ ದೇಶದ ಅತ್ಯಂತ ಪ್ರತಿಷ್ಠಿತ ಪುರಸ್ಕಾರದ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಹಾಗೂ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಪೀಠವು ಗಾಂಧೀಜಿಯವರಿಗೆ ಭಾರತರತ್ನ ಪ್ರಶಸ್ತಿಗಿಂತಲೂ ಮಿಗಿಲಾದ ಯಾವುದಾದರೂ ಪುರಸ್ಕಾರ ನೀಡಬಹುದಾಗಿದ್ದರೆ ತಿಳಿಸಿ ಎಂದು ಪ್ರಶ್ನಿಸಿತ್ತು.

ಅದಕ್ಕೆ ಅರ್ಜಿದಾರರು ಇದು ಸರ್ಕಾರವೇ ನಿರ್ಧರಿಸಬೇಕು ಎಂದು ಉತ್ತರಿಸಿದರು. ಈವರೆಗೆ ಕೇಂದ್ರಸರ್ಕಾರ 48 ಮಹಾ ಸಾಧಕರಿಗೆ ಭಾರತರತ್ನ ನೀಡಿ ಗೌರವಿಸಿದೆ. ಇದರಲ್ಲಿ 16 ಮಂದಿಗೆ ಮರಣೋತ್ತರವಾಗಿ ಅತ್ಯುನ್ನತ ನಾಗರಿಕ ಪುರಸ್ಕಾರ ನೀಡಲಾಗಿದೆ.

Facebook Comments